ಮಂಗಳೂರಿನಲ್ಲಿ ಸಾಮಾಜಿಕವಾಗಿ ಸಕ್ರೀಯರಾಗಿದ್ದ ವ್ಯಕ್ತಿ ಹಾಸನದಲ್ಲಿ ಹೃದಯಾಘಾತದಿಂದ ಸಾವು

0

ಹಾಸನ / ಮಂಗಳೂರು : ಮಂಗಳೂರಿನಲ್ಲಿ ಸಾಮಾಜಿಕವಾಗಿ ಸಕ್ರೀಯರಾಗಿದ್ದ ವ್ಯಕ್ತಿ ಜನಾರ್ದನ ಕುಲಾಲ್ ಅವರು ತಮ್ಮ ಕುಟುಂಬದ ಜತೆ ಮೊನ್ನೆ (ಭಾನುವಾರ) ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ

ಹಾಸನ ತಲುಪುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು . ತಕ್ಷಣ ಅವರನ್ನು ಹಾಸನ ರೈಲು ನಿಲ್ದಾಣದಿಂದ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು , ಅಲ್ಲಿ ಪರೀಕ್ಷಿಸಿದ ವೈದ್ಯರು

ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವಿಷಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ . ಇವರು ಮಂಗಳೂರಿನ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ (BMS) ನಿರ್ದೇಶಕರಾಗಿದ್ದರು , ವೃತ್ತಿಯಲ್ಲಿ ಚಾಲಕರಾಗಿದ್ದ ಅವರು ಕುಲಾಲ್ ಸಂಘಟನೆ ಬೆಳವಣಿಗೆಗೆ ಬಹಳ ಶ್ರಮಿಸಿದ್ದರಂತೆ .

ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೂಡ ನೀಡಿ ಪ್ರೋತ್ಸಾಹಿಸಿದ ಸಾರ್ಥಕ ಜೀವಿ .

LEAVE A REPLY

Please enter your comment!
Please enter your name here