ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕ ಪ್ರಾಯೋಗಿಕ ಚಾಲನೆ.
ಹಾಸನ: ಹಾಸನ ಹಾಲು ಒಕ್ಕೂಟದ ಮುಖ್ಯ ಡೇರಿ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ನಿರ್ಮಾಣ ಮಾಡಿರುವ ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕದ ಪ್ರಾಯೋಗಿನ ಚಾಲನೆ ಆರಂಭವಾಗಿದ್ದು, ಕೊರೊನಾ ಲಾಕ್ಡೌನ್ ಮುಗಿದ ನಂತರ ಪ್ರಾಯೋಗಿಕ ಉತ್ಪಾದನೆಯೂ ಆರಂಭವಾಗಲಿದೆ. ಸುವಾಸಿತ ಹಾಲಿನ
ಪೆಟ್ ಬಾಟಲ್ ಘಟಕದ ವಿಶೇಷತೆ ಏನೆಂದರೆ ಇದು ಭಾರತದಲ್ಲೇ 3 ನೇ ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಪ್ಲಾಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಯುಹೆಚ್ಟಿ ಪೆಟ್ ಬಾಟೆಲ್ ಘಟಕದ ಸಾಮರ್ಥ್ಯ
ಪ್ರತಿ ಗಂಟೆಗೆ 30 ಸಾವಿರ ಬಾಟಲ್ ಆಗಿದ್ದು, ದಿನವೊಂದಕ್ಕೆ 5,40,000 ಬಾಟಲ್ ಉತ್ಪಾದಿಸಬಹುದಾಗಿದೆ.
ಏನೆಲ್ಲಾ ಇಲ್ಲೇ ಲಭ್ಯ:
ಸದರಿ ಘಟಕದಲ್ಲಿ ಸುವಾಸಿತ ಹಾಲು, ಲಸ್ಸಿ ಹಾಗೂ ಮಸಾಲ ಮಜ್ಜಿಗೆ (200ಎಂಎಲ್) ಅಲ್ಲದೆ, ಯುಹೆಚ್ಟಿ ಪ್ಲೆöÊನ್ ಮಿಲ್ಕ್ (1000 ಎಂಎಲ್) ಸಹ ಉತ್ಪಾದಿಸಬಹುದಾಗಿದೆ.
ಪ್ಲೇವರ್ಡ್ ಮಿಲ್ಕ್: ಬಾದಾಮ್ ಮಿಲ್ಕ್ ಪಿಸ್ತಾ, ಸ್ಟಾçಬೆರಿ, ವನಿಲ್ಲಾ, ಕಾರಾಮೆಲ್, ಬನಾನ, ಮ್ಯಾಂಗೋ, ಪೆಪ್ಪರ್,
ಚೆರಿ, ಚಾಕೋ, ಕೇಸರ್, ಸೋಯಾ
ಲಸ್ಸಿ : ಮ್ಯಾಂಗೋ ಲಸ್ಸಿ, ಸ್ಟಾçಬೆರಿ, ಕಾರ್ಡಮಮ್, ಮ್ಯಾಂಗೋ ಪಲ್ಸ್
ನಂದಿನಿ ಸ್ಮೂಥೀಸ್ : ವನಿಲ್ಲಾ, ಚಾಕೋಲೇಟ್, ಮ್ಯಾಂಗೋ
ಬಟರ್ ಮಿಲ್ಕ್ : ಫೈನ್ ಬಟರ್ಮಿಲ್ಕ್, ಮಸಾಲ ಮಜ್ಜಿಗೆ, ಮಿಂಟ್ ಜೀರಾ ಬಟರ್ ಮಿಲ್ಕ್
ಮಿಲ್ಕ್ ಶೇಕ್ : ಚಾಕೋಲೇಟ್ ಮಿಲ್ಕ್ ಶೇಕ್, ಬ್ಲಾಕ್ ಕರೆಂಟ್, ಮ್ಯಾಂಗೋ, ಬಟರ್ ಸ್ಕಾಚ್, ಬನಾನ
ಸ್ವಯಂಚಾಲಿತ ಯಂತ್ರ:
ಸಂಸ್ಕರಣಾ ಮತ್ತು ಫಿಲ್ಲಿಂಗ್ ಯಂತ್ರೋಪಕರಣ ಸ್ವಯಂಚಾಲಿತವಾಗಿದ್ದು, ಫಿಲ್ಲಿಂಗ್ ಯಂತ್ರಗಳ ಹಾಪರ್ಗಳಿಗೆ ಒಂದೆಡೆ ಪೆಟ್ ಫ್ರೀ ಫಾರ್ಮ್ ಮತ್ತೊಂದೆಡೆ ಕ್ಯಾಪ್ಗಳನ್ನು ಫೀಡ್ ಮಾಡಲಾಗುತ್ತಿದೆ. ಸ್ವಚ್ಛಗೊಂಡ ಪ್ರೀ ಫಾರ್ಮ್ಸ್ಗಳು ಬ್ಲೊವರ್ ವಿಭಾಗದಲ್ಲಿ ಅಧಿಕ ತಾಪಮಾನದಲ್ಲಿ ಬಾಟಲ್ ಆಗಿ ಪರಿವರ್ತನೆಗೊಳ್ಳುತ್ತವೆ. ಬಾಟಲ್ಗಳನ್ನು ಡೈಲ್ಯೂಟ್ ಪ್ಯಾರಾಸಟಿಕ್ ಆಸಿಡ್ ಜೆಟ್ಗಳ ಮೂಲಕ ಸ್ಟೆರಿಲೈಸ್ ಮಾಡಲಾಗುತ್ತದೆ.
ಎಸೆಪ್ಟಿಕ್ ಚೇಂಬರ್ನಲ್ಲಿ ಮೊದಲೇ ತಯಾರಿಸಿ, ಸೆರಿಲೈಸ್ ಮಾಡಲಾದ ಪ್ಲೇವರ್ಡ್ ಮಿಲ್ಕ್/ಲಸ್ಸಿ ಮಸಾಲ ಮಜ್ಜಿಗೆಯನ್ನು ನಿಗದಿತ ಪ್ರಮಾಣದಲ್ಲಿ ತುಂಬಿಸಲಾಗುವುದು. ಸದರಿ ಎಸೆಪ್ಟಿಕ್ ಚೇಂಬರ್ನಲ್ಲಿ ನಿಗದಿತ pre-Sterilized, Dry fruits ಮತ್ತುNuts ಗಳನ್ನು ಸಹ ಪ್ಲೇವರ್ಡ್ ಮಿಲ್ಕ್/ಲಸ್ಸಿ ಬಾಟಲ್ಗಳಿಗೆ ತುಂಬಿಸುವ ವ್ಯವಸ್ಥೆ ಸಹ ಇದೆ.
ಕನ್ವೆಯರ್ ಮೂಲಕ ಬಾಟಲ್ಗಳು ಸ್ವಯಂಚಾಲಿತ ಮ್ಯಾಟ್ರಿಕ್ಸ್ ಯಂತ್ರದಲ್ಲಿ ವಿಂಗಡಣೆಗೊAಡು 30 ಬಾಟಲ್ಗಳ ಕೇಸ್ಗಳು ತಯಾರಾದ ನಂತರShrink rapping tunnel ಗಳಲ್ಲಿ Shrink rap ಅಳವಡಿಸಲಾಗಿದೆ. ಇಲ್ಲಿ ತಯಾರಾದ ಸುವಾಸಿತ ಹಾಲನ್ನು ದೇಶಾದ್ಯಂತ ನಂದಿನಿ ರೀಟೇಲರ್ಗಳ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಮತ್ತೊಂದು ವಿಶೇಷತೆ ಎಂದರೆ ಫ್ಲೇವರ್ಡ್ ಮಿಲ್ಕ್, ಲಸ್ಸಿ ಸರಬರಾಜಿಗೆ ಭಾರತೀಯ ಸೇನೆಯಿಂದಲೂ ಬೇಡಿಕೆ ಬಂದಿದ್ದು, ಮುಂದಿನ ವರ್ಷದಿಂದ ಪೂರೈಸಲು ನಿರ್ಧರಿಸಲಾಗಿದೆ.
ಮೆಗಾಡೇರಿ ಕಾಮಗಾರಿ ಶೀಘ್ರ ಶುರು:
ಹಾಸನ ಹಾಲು ಒಕ್ಕೂಟದಲ್ಲಿ ಪ್ರತಿ ವರ್ಷ ಹಾಲಿನ ಶೇಖರಣೆ ಶೇ.10 ರಿಂದ 15 ರಷ್ಟು ಹೆಚ್ಚಳವಾಗುತ್ತಿದ್ದು, ಈ ಹಾಲನ್ನು ಲಾಭದಾಯಕ ರೀತಿಯಲ್ಲಿ ಸಂಸ್ಕರಿಸಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹಾಸನ ಕೈಗಾರಿಕಾ ಬೆಳವಣಿಗೆ ಕೇಂದ್ರದಲ್ಲಿ 5738
ಎಕರೆ ವಿಸ್ತೀರ್ಣದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ, 60 ಮೆ.ಟನ್ ಹಾಲಿನ ಪುಡಿ ತಯಾರಿಕಾ ಘಟಕ ಹಾಗೂ ವಿವಿಧ ರೀತಿಯ ಹಾಲಿನ ಉತ್ಪನ್ನಗಳ ಉತ್ಪಾದನೆ ಮತ್ತು ರೀಟೇಲ್, ಪ್ಯಾಕಿಂಗ್ ವ್ಯವಸ್ಥೆಯುಳ್ಳ ಮಗಾ ಡೇರಿ ಸಮುಚ್ಚಯ ನಿರ್ಮಾಣ ಯೋಜನೆಗೆ ಶೀಘ್ರ ಚಾಲನೆ ದೊರೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ ತಿಳಿಸಿದರು.
ಮಗಾ ಡೇರಿ ಸಮುಚ್ಚಯ ನಿರ್ಮಾಣ ಯೋಜನೆಯ ಸಿವಿಲ್ ಕಾಮಗಾರಿ, ಗೋದಾಮು,ಯಂತ್ರೋಪಕರಣ ಸರಬರಾಜು ಮತ್ತು ಆಳವಡಿಕೆಗೆ ಒಟ್ಟಾರೆ ಯೋಜನಾ ವೆಚ್ಚ ಸುಮಾರು 500 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಮೊದಲ ಹಂತದ ಸಿವಿಲ್ ಕಾಮಗಾರಿಗಳಿಗೆ ಕೆಎಂಎಫ್ ಮೂಲಕ ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಮೆಗಾಡೈರಿ ಯೋಜನೆಯಿಂದ ಒಕ್ಕೂಟದ ಹೆಚ್ಚುವರಿ ಹಾಲಿನಿಂದ ಹಾಲಿನ ಪುಡಿ ಮತ್ತು ಬೆಣ್ಣೆ ಪರಿವರ್ತನೆ ಇಲ್ಲಿಯೇ ಆಗಲಿದೆ. ಹಾಲಿನ ಸಾಗಾಣಿಕಾ ವೆಚ್ಚ ಮತ್ತು ಉತ್ಪನ್ನಗಳ ದಾಸ್ತಾನು ವೆಚ್ಚ ಮತ್ತು ಪರಿವರ್ತನಾ ವೆಚ್ಚದಲ್ಲಿ ಒಕ್ಕೂಟಕ್ಕೆ ಕೋಟ್ಯಂತರ ರೂ. ಉಳಿತಾಯವಾಗುತ್ತದೆ ಎಂದರು. ಇದೇ ವೇಳೆ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೊರೊನಾಗೆ ಬಲಿಯಾದರೆ ಅಂತವರ ಕುಟುಂಬಗಳಿಗೆ ಗರಿಷ್ಠ 1 ಲಕ್ಷ ರೂ.ವರೆಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ನಂದಿನಿ ಹಾಲು, ಉತ್ಪನ್ನ ಮಾರಾಟ ಮಾಡುವ ಅಧಿಕೃತ ಏಜೆಂಟರಿಗೂ ಇದು ಅನ್ವಯವಾಗಲಿದೆ ಎಂದು ತಿಳಿಸಿದರು.