ನಾಳೆಯಿಂದ (ಜುಲೈ 19) ರಾಜ್ಯಾದ್ಯಂತ ಎಸ್ಎಸ್ಎಲ್ಸಿ (SSLC) ಪರೀಕ್ಷೆ ಆರಂಭವಾಗುತ್ತಿದೆ. ನಾಳೆ ಗಣಿತ, ವಿಜ್ಞಾನ, ಸಮಾಜ ವಿಷಯಗಳಿಗೆ ಪರೀಕ್ಷೆ ನಡೆಯುತ್ತದೆ. ಪರೀಕ್ಷೆ ಬರೆಯಲು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಸಮಯವಿರುತ್ತದೆ. ಪರೀಕ್ಷೆಗೆ ಒಟ್ಟು 8,76,581 ವಿದ್ಯಾರ್ಥಿಗಳ ನೊಂದಣಿಯಾಗಿದ್ದು, ಇದರಲ್ಲಿ 4,72,643 ಬಾಲಕರು ಮತ್ತು 40,39,38 ಬಾಲಕಿಯರು ಪರೀಕ್ಷೆ ಬರೆಯುತ್ತಾರೆ. 22 ರಂದು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯುತ್ತದೆ. ಪ್ರತಿದಿನ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ನಂತರ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ.
ಕೊರೊನಾ ಕಾರಣ ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೆಮ್ಮು, ನೆಗಡಿ, ಜ್ವರ ಇರುವ ಮಕ್ಕಳನ್ನು ವಿಶೇಷ ಕೊಠಡಿಯಲ್ಲಿ ಕೂರಿಸಲಾಗುವುದು.
ಪರೀಕ್ಷೆಗೆ 14,927 ಶಾಲೆಗಳನ್ನು ನೋಂದಾಯಿಸಲಾಗಿದೆ. 4,884 ರಷ್ಟು ಪರೀಕ್ಷಾ ಕೇಂದ್ರಗಳಿವೆ. ರಾಜ್ಯಾದ್ಯಂತ 73,066 ಪರೀಕ್ಷಾ ಕೊಠಡಿಗಳು ಇವೆ. 4,884 ಮುಖ್ಯ ಅಧೀಕ್ಷಕರು, 4,884 ಪ್ರಶ್ನೆಪತ್ರಿಕೆ ಅಭಿರಕ್ಷಕರು, 80,389 ಕೊಠಡಿ ಮೇಲ್ವಿಚಾರಕರು, 4,884 ಸ್ಥಾನಿಕ ಜಾಗೃತ ದಳದವರನ್ನು ನೇಮಕ ಮಾಡಲಾಗಿದೆ.
7,83,955 ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. 977 ಪುನರಾವರ್ತಿತ ವಿದ್ಯಾರ್ಥಿಗಳು, 21,817 ಖಾಸಗಿ ವಿದ್ಯಾರ್ಥಿಗಳು, 9,419 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು, 392 ಹೊಸ ಸ್ಕೀಂ ವಿದ್ಯಾರ್ಥಿಗಳು ಮತ್ತು 21 ಹೊಸ ಸ್ಕೀಂ ಪುನರಾವರ್ತಿತ ವಿದ್ಯಾರ್ಥಿಗಳು ನಾಳೆ ಪರೀಕ್ಷೆ ಬರೆಯಲಿದ್ದಾರೆ.