ಹಾಸನ ನಗರ ಸಾರ್ವಜನಿಕರಲ್ಲಿ ಪ್ರಕಟಣೆ ! ಕವಿಪ್ರನಿನಿಯಿಂದ ದಿನಾಂಕ 13.07.2022 ಬುಧವಾರ ರಂದು 66/11ಕೆ.ವಿ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಅಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 04:00 ಗಂಟೆ ಯವರೆಗೆ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಸಂತೆಪೇಟೆ ಸರ್ಕಲ್, ಗಾಂಧಿಬಜಾರ್, ಶ್ರೀನಗರ, ಎನ್. ಆರ್ ವೃತ್ತ ಸುತ್ತಮುತ್ತ, ಹಾಸನಾಂಬ ವೃತ್ತ, ಮೈಕ್ರೋವೇವ್, ಬಿಟ್ಟಗೌಡನಹಳ್ಳಿ, ಮೆಡಿಕಲ್ ಕಾಲೇಜು, ಸುವರ್ಣ , ದೇವೆಗೌಡನಗರ, ಹನುಮಂತಪುರ, ಅಗಿಲೆ, ಎರೆಬೆರೆ ಕಾವಲು, ಚನ್ನಪಟ್ಟಣ, ಹೊಸಕೊಪ್ಪಲು, ದೇವಮ್ಮ ಬಡಾವಣೆ, ಮಾರ್ಗನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ಇದು ಕೆಪಿಟಿಸಿಎಲ್ ಹಾಸನ , ಪ್ರಕಟಣೆ ( ಮಾಹಿತಿ ಹಂಚಿರಿ )