ಜನರಿಗೆ ಸರ್ಕಾರಿ ಕೆಲಸದ ಆಮಿಷ : ಲಕ್ಷಾಂತರ ರೂ ವಂಚಿಸಿದವ ಅಂದರ್

0

ಜನರಿಗೆ ಸರ್ಕಾರಿ ಕೆಲಸದ ಆಮಿಷ : ಲಕ್ಷಾಂತರ ರೂ ವಂಚಿಸಿದವ ಅಂದರ್ .

ಹಾಸನ : ಜನರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಅವರಿಂದ ಕೋಟಿಗಟ್ಟಲೆ ಹಣ ತೆಗೆದುಕೊಂಡು ಜನರಿಗೆ ವಂಚಿಸುತ್ತಿದ್ದ ವ್ಯಕ್ತಿ ಇಂದು ಪೊಲೀಸರ ಅತಿಥಿಯಾಗಿದ್ದಾನೆ .

ನಗರದ ಸಮೀರ್ ಮಲ್ಲಿಕ್ ಜನರಿಗೆ ವಂಚಿಸುತ್ತಿದ್ದ ವ್ಯಕ್ತಿಯಾಗಿದ್ದು, ಸರಕಾರದ ನ್ಯಾಯಾಂಗ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ,ಹಾಗೂ ಇತರೆಡೆ ಡಿ ಗ್ರೂಪ್ ಕೆಲಸ ಕೊಡಿಸುವುದಾಗಿ ಜನರನ್ನು ನಂಬಿಸಿ ಅವರಿಂದ  ಲಕ್ಷಾಂತರ ಹಣ ತೆಗೆದುಕೊಂಡು ವಂಚಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ .

ಆರೋಪಿ ಸಮೀರ್ ಮಲ್ಲಿಕ್ ವಂಚನೆ ಕೇಸ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಈತನಿಂದ ವಂಚನೆಗೆ ಒಳಗಾಗಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಜನರು ಈತನ ಬಗ್ಗೆ ದೂರು ನೀಡಿದ್ದು ದೂರುದಾರರಿಂದ ದೂರು ಸ್ವೀಕರಿಸಿದ ನಗರದ ಪೆನ್ ಷನ್ ಮೊಹಲ್ಲಾ ಬಡಾವಣೆಯ ಪೊಲೀಸರು ಆರೋಪಿ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ .

ನೌಕರಿ ಆಸೆ ತೋರಿಸಿ ಮೋಸ: ವಂಚಕ ಸೆರೆ

ಹಾಸನ: ಜನರಿಗೆ ಸರ್ಕಾರಿ ನೌಕರಿ ಕೊಡಿಸೋದಾಗಿ ನಂಬಿಸಿ ಲಕ್ಷಾಂತರ ಹಣಕ್ಕೆ ಪಂಗನಾಮ ಹಾಕಿರುವ ವಂಚಕ ಕಡೆಗೂ ಸಿಕ್ಕಿ ಬಿದ್ದಿದ್ದಾನೆ. ಸಮೀರ್ ಮಲ್ಲಿಕ್ ಬಂಧಿತ ಆರೋಪಿ.

ಈತ ನ್ಯಾಯಾಂಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ವಿವಿಧೆಡೆ ಡಿ ಗ್ರೂಪ್ ಕೆಲಸ ಕೊಡಿಸುವ ಆಮಿಷವೊಡ್ಡಿ ನೌಕರಿ ಆಕಾಂಕ್ಷಿಗಳಿಗೆ

5, 10, 15 ಲಕ ಹೀಗೆ ಅಪಾರ ಪ್ರಮಾಣದ ಹಣ ಪಡೆದಿದ್ದ ಎನ್ನಲಾಗಿದೆ. ಆದರೀಗ ಅನೇಕ ಮಂದಿಗೆ ಟೋಪಿ ಹಾಕಿದ್ದಾನೆ ಎಂಬುದು ಬಯಲಾಗಿದೆ.

ಕೇವಲ ಸರ್ಕಾರಿ ಕೆಲಸ ಕೊಡಿಸೋ | ಆಮಿಷ ಅಷ್ಟೇ ಅಲ್ಲ, ಮನೆ, ನಿವೇಶನದ ದಾಖಲೆ ಪತ್ರ ಮಾಡಿಸಿಕೊಡುವ ಆಸೆ | ತೋರಿಸಿಯೂ ಅನೇಕರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮನೆ ದಾಖಲೆ ಮಾಡಿಸಿ ಕೊಡುವುದಾಗಿ ದಾಖಲೆ ಪತ್ರ ಪಡೆದು, ಅದನ್ನು ಬೇರೆಡೆ ಅಡಮಾನ ಇಟ್ಟು ಲಕ್ಷ ಲಕ್ಷ ಹಣ ಪಡೆದಿದ್ದಾನೆ ಎಂಬ ದೂರೂ ಕೇಳಿ ಬಂದಿದೆ. ಮಲ್ಲಿಕ್, ಮಾತನ್ನೇ ಬಂಡವಾಳ ಮಾಡಿಕೊಂಡು ಸಿಕ್ಕ ಸಿಕ್ಕವರಿಗೆ ವಂಚಿಸಿದ್ದಾನೆ. ನಗರ ವ್ಯಾಪ್ತಿಯಲ್ಲೇ ನೂರಾರು ಜನರಿಗೆ ಟೋಪಿ ಹಾಕಿರುವ ನಯ ವಂಚಕನನ್ನು ಪೊಲೀಸರು | ಬಂಧಿಸಿದ್ದಾರೆ. ಈ ಸಂಬಂಧ ಪೆನ್‌ಶನ್‌ ಮೊಹಲ್ಲಾ ಹಾಗೂ ಬಡಾವಣೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಮೋಸಗಾರನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆಯೇ 50ಕ್ಕೂ ಹೆಚ್ಚು ಜನರು ತಮಗೂ ಮೋಸ ಮಾಡಿದಾನೆ ಎಂದು ದೂರು ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here