ಮಳೆ ತಂದ ಅವಾಂತರ : ಈ ರಸ್ತೆ ಬಂದ್ , ಮನೆ ನೆಲಸಮ , ಶುಂಠಿ ನೀರುಪಾಲು ರಸ್ತೆ ಕುಸಿತ

0

ಹಾಸನ: ಜಿಲ್ಲೆಯಲ್ಲಿ ಮಳೆ ಅಬ್ಬರ. ಬಹುತೇಕ ಕಡೆಗಳಲ್ಲಿ ಜೋರು ಮಳೆ ಅವಾಂತರಗಳು ಒಂದೊಂದೆ ಬೆಳಕಿಗೆ, ಜನ ಜೀವನ ಸಂಪೂರ್ಣ ಅಸ್ತವ್ಯಸ್ತ. ಹಾಗೆಯೇ ನಿರಂತರ ಮಳೆಗೆ ಕೆಲವೆಡೆ ಹಾನಿ ಸಂಭವಿಸಿದೆ. ಮತ್ತೆ ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿದೆ. ಸಕಲೇಶಪುರ ಬಳಿ ಹೆದ್ದಾರಿ ಬದಿ ಮತ್ತೆ ಕುಸಿದಿದೆ.
ರಾಷ್ಟಿಯ ಹೆದ್ದಾರಿ 75ರ ದೋಣಿಗಾಲ್ ಬಳಿ ನಿನ್ನೆ ಭೂ ಕುಸಿತ ಉಂಟಾಗಿತ್ತು. ಚತುಷ್ಪಥ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೂ ಕುಸಿದ ಸ್ಥಳಕ್ಕೆ ಮರಳು ಮೂಟೆ ಜೋಡಣೆ ಮಾಡಿ ತಾತ್ಕಾಲಿಕ ದುರಸ್ತಿ ಮಾಡಿದ್ದರು.


ಆದರೆ ಕಳೆದ ರಾತ್ರಿ ಸುರಿದ ಮಹಾ ಮಳೆಗೆ ಜೋಡಣೆ ಮಾಡಿದ್ದ ಮರಳು ಚೀಲಗಳು ಕೊಚ್ಚಿ ಹೋಗಿವೆ.
ಕಳೆದ ವರ್ಷಕೂಡ ಇದೇ ಸ್ಥಳದಲ್ಲಿ ಭೂ ಕುಸಿತವಾಗಿ ರಸ್ತೆ ಸಂಚಾರ ಸುಮಾರು ಒಂದು ತಿಂಗಳ ಕಾಲ ಬಂದ್ ಆಗಿತ್ತು. ಈ ವರ್ಷವೂ ಇದೇ ಜಾಗದಲ್ಲಿ ಕುಸಿತ ಮರುಕಳಿಸಿದೆ. ಮೊದಲ ಮಳೆಗೆ ಮತ್ತೆ ಶಿರಾಢಿಘಾಟ್ ನಲ್ಲಿ ಭೂಕುಸಿತವಾಗಿ ಆತಂಕ ಸೃಷ್ಟಿಯಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ಮಣ್ಣು ಕುಸಿದರೆ ರಸ್ತೆ ಸಂಚಾರ ಬಂದ್ ಆಗುವ ಆತಂಕ ಎದುರಾಗಿದೆ. ಇಂದು ಸ್ಥಳ ಪರಿಶೀಲನೆ ನಡೆಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಹೆಚ್ಚಿನ ತೊಂದರೆ ಸಂಭವಿಸದಂತೆ ತಾತ್ಕಾಲಿಕವಾಗಿ ಹೇಗೆ ರಸ್ತೆ ದುರಸ್ತಿ ಮಾಡಬೇಕು ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.


ಕುಸಿದ ಮನೆ:
ಬೇಲೂರು ತಾಲೂಕಿನ ಮಾಳೆಗೆರೆ ಹೊಸಕೊಪ್ಪಲು ಗ್ರಾಮದಲ್ಲಿ ಭಾರೀ ಮಳೆಗೆ ವಾಸದ ಮನೆ ಕುಸಿದು ಬಿದ್ದಿದೆ.ಗ್ರಾಮದ ರುದ್ರಮ್ಮ ಎಂಬುವರ ಮನೆ ಹಾನಿಯಾಗಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೋಡೆ ಕುಸಿದು ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ರುದ್ರಮ್ಮ ಮನವಿ ಮಾಡಿದ್ದಾರೆ.


ರಾಜ್ಯ ಹೆದ್ದಾರಿ ಬಂದ್:
ಅರಕಲಗೂಡು ತಾಲೂಕಿನಲ್ಲೂ ಮಳೆ ಮುಂದುವರಿದಿದೆ. ಇದರಿಂದ ಕೊಣನೂರು-ರಾಮನಾಥಪುರ ನಡುವಿನ ರಸ್ತೆ ಕಾಮಗಾರಿಗೆ ತೀವ್ರ ಅಡ್ಡಿಯಾಗಿದೆ. ತಾತ್ಕಾಲಿಕ ರಸ್ತೆ ಜಲಾವೃತವಾಗಿದ್ದು, ಕೊಣನೂರು ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ.
ಹಾಸನ-ಮಡಿಕೇರಿ ನಡುವಿನ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಈ ಹಿನ್ನೆಲೆ ವಾಹನ ಸಂಚಾರಕ್ಕಾಗಿ ಗುತ್ತಿಗೆದಾರರು ಬದಲಿ ರಸ್ತೆ ನಿರ್ಮಾಣ ಮಾಡಿದ್ದರು. ಆದರೆ

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನದಿ ನೀರು ಬದಲಿ ರಸ್ತೆ ವರೆಗೂ ವ್ಯಾಪಿಸಿದ್ದು, ಪ್ರವಾಹದ ನೀರು ವ್ಯಾಪಿಸಿರುವುದರಿಂದ ಬದಲಿ ರಸ್ತೆಗೆ ಕುಸಿಯುವ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ರಾಮನಾಥಪುರ-ಕೊಣನೂರು ನಡುವಿನ ಸಂಪರ್ಕ ಬಂದ್ ಆಗಿದೆ. ಹೀಗಾಗಿ ರಾಮನಾಥಪುರ- ಹಿರೇಹಳ್ಳಿ, ಹೊಸಹಳ್ಳಿ ಮಾರ್ಗವಾಗಿ ಕೊಣನೂರಿಗೆ ಬರಲು ಅಧಿಕಾರಿಗಳು ಬದಲಿ ಮಾರ್ಗದ ವ್ಯವಸ್ಥೆ ಮಾಡಿದ್ದಾರೆ.


ಶುಂಠಿ ಬೆಳೆ ಜಲಾವೃತ:
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ಬೆಳೆದ ಶುಂಠಿ ಮಳೆನೀರುಪಾಲಾಗಿದೆ.

LEAVE A REPLY

Please enter your comment!
Please enter your name here