ನಿಧನ ವಾರ್ತೆ ಹಾಸನ ಮಾಜಿ ಪುರಸಭಾ ಸದಸ್ಯ ಕೆ.ರಾಜೇಗೌಡ
( ಕಡವಿನ ಕೋಟೆ) ನಿಧನ ಅಪಾರ ಬಂಧು ಮಿತ್ರರ ಸಂತಾಪ

0

ಹೊಳೆನರಸೀಪುರ:ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ, ಮಾಜಿ ಪುರಸಭಾ ಸದಸ್ಯ, ಶ್ರೀನಿವಾಸಪುರದ ಸಕ್ಕರೆ ಕಾರ್ಖಾನೆ ನಿರ್ದೇಶಕ,ಸಮಾಜ ಸೇವಕ,ಮತ್ತು ಹಿರಿಯ ರಾಜಕಾರಣಿ ಸ್ನೇಹ ಜೀವಿ ಕೆ.ರಾಜೇಗೌಡ (ಕಡವಿನ ಕೋಟೆ) 70 ವರ್ಷ ಅವರು ದಿನಾಂಕ 26-06-2021 ಶನಿವಾರ ನಸುಕಿನಲ್ಲಿ 1 ಗಂಟೆ ಸಮಯದಲ್ಲಿ, ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ತೀವ್ರವಾದ ಹೃದಯ ಘಾತದಿಂದ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬರು ಮಗಳು ಮತ್ತು ಮೊಮ್ಮಕ್ಕಳು ಇದ್ದಾರೆ,
ಮಗ ಕೆ.ಆರ್.ಸುದರ್ಶನ್ ಯುವ ರಾಜಕಾರಣಿ ಇನ್ನೊಬ್ಬ ಮಗ ಕೆ.ಆರ್.ಸುನಿಲ್ ಸುಪ್ರಸಿದ್ಧ ವಕೀಲರು.
ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೆ.ರಾಜೇಗೌಡರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಪಾರ್ಥೀವ ಶರೀರವನ್ನು ಪಟ್ಟಣದ ಹೌಸಿಂಗ್ ಬೋರ್ಡ್ ಎಸ್.ಬಿ.ಐ. ಬ್ಯಾಂಕ್ ಎದುರು ಇರುವ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ 8 ಘಂಟೆಗೆ ತರಲಿದ್ದು,
ಸಾರ್ವಜನಿಕರ ದರ್ಶನಕ್ಕೆ ಬೆಳಿಗ್ಗೆ 9 ಗಂಟೆಯವರೆಗೆ ಅವಕಾಶವನ್ನು ನೀಡಲಾಗುವುದು ಮತ್ತು ಅಂತ್ಯ ಕ್ರಿಯೆಯನ್ನು ಅವರ ನಗರ್ತಿಯಲ್ಲಿರುವ ಜಮೀನಿನಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಕೆ.ರಾಜೇಗೌಡ ( ಕಡವಿನ ಕೋಟೆ) ಅವರ ನಿಧನಕ್ಕೆ ಪಟ್ಟಣದ ಅವರ ಆಪ್ತ ಬಂಧು ಮಿತ್ರರು ಮತ್ತು ಗಣ್ಯಾತಿಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.
ಅವರ ಆತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಎಂದು ಎಲ್ಲಾ ಗೆಳೆಯರ ಬಳಗದ ಪರವಾಗಿ ಪ್ರಾರ್ಥಿಸುತ್ತೇನೆ.

LEAVE A REPLY

Please enter your comment!
Please enter your name here