ಬೇಲೂರು:
ತಾಲೂಕಿನ ಕುಶವಾರ ಗ್ರಾಮ ಪಂಚಾಯ್ತಿಯ ಚೌಡನಹಳ್ಳಿ ಗ್ರಾಮದಲ್ಲಿ ಮಹಿಳೆಯರ ಸಬಲೀಕರಣ ಕುರಿತು ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು
ಸ್ಥಳೀಯರಾದ ಕೌರಿ ಸಂಜಯ್ ಆವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ
ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ವಿಶೇಷ ಆಹ್ವಾನಿತರಾದ ಸೌಭಾಗ್ಯ ಅವರು ಮಹಿಳೆಯರು ಯಾವ ರೀತಿ ಸಬಲೀಕರಣಗೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳಬೇಕು ಎಂಬ ಬಗ್ಗೆ ವಿವರಿಸಿದರು
ಅಲ್ಲದೆ,
ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸುಣ್ಣ-ಬಣ್ಣ ಬಳಿದು ಶಾಲೆಯನ್ನು ಸ್ವಚ್ಛಗೊಳಿಸುವುದಾಗಿ ಸೌಭಾಗ್ಯ ಅವರು ಪ್ರಕಟಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಕುಶವಾರ ಗ್ರಾಮ ಪಂಚಾಯ್ತಿ ಸದಸ್ಯ ನಂದೀಶ್ ಅವರು ಇದಕ್ಕೆ ತಕ್ಷಣ ಸ್ಪಂದಿಸಿ, ಶಾಲೆಗೆ
ಬೇಕಾದ ಸುಣ್ಣ, ಬಣ್ಣವನ್ನು ತಾವೇ ಒದಗಿಸುವುದಾಗಿ ಹೇಳಿದರು. ಅಲ್ಲದೆ,
ಮುಂದಿನ ದಿನಗಳಲ್ಲಿ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿ, ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯವನ್ನು ತಾವೇ ಖುದ್ದಾಗಿ ನಿಂತು ನಡೆಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತು ವಿವಿಧ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು ಗ್ರಾಮದ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.* ರಂಗೋಲಿ ಸ್ಪರ್ಧೆಯಲ್ಲಿ
17 ಮಂದಿ ಭಾಗವಹಿಸಿದ್ದರು ಮತ್ತು ಅನೇಕ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು* ಈ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಪಿ ಮಂಜುನಾಥ್ ರವರು ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ
ಕೌರಿ ಸಂಜಯ್, ಸೌಭಾಗ್ಯ, ನಂದೀಶ್ ಅವರಲ್ಲದೆ ಕುಶವಾರ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಂಜುನಾಥ್ (ಕಡ್ಲೆ), ಲೋಕೇಶ್, ಕುಮಾರ್, ಲೋಕೇಶ್ ಪ ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು.