ಕಾಫೀ ಒಂದು ಅತ್ಯದ್ಬುತ ಅಹ್ಲಾದಕರ ರುಚಿಗೆ ಮಾತ್ರವಲ್ಲದೆ ಸುಂದರ ಕಾಂತಿಯುಕ್ತ ಮೊಗಕ್ಕೆ ಹಾಗೂ ಸೊಂಪಾದ ಕೇಶ ರಾಶಿಗೂ ಉಪಯುಕ್ತಕರ
ಕಾಫೀಯಲ್ಲಿರುವ ಆಂಟಿ ಆಕ್ಸಿಡೆಂಟ್ ನಮ್ಮ ಚರ್ಮವನ್ನು ಮತ್ತು ಕೂದಲನ್ನು ಆರೋಗ್ಯಕರವಾಗಿ ಮಾಡುತ್ತದೆ.
ಕಾಫೀ ಕಪ್ಪು ಅದನ್ನು ನಾವು ಮುಖಕ್ಕೆ ಹಚ್ಚಿದರೆ ಎಲ್ಲಿ ನಮ್ಮ ಮುಖವೂ ಕಪ್ಪಗಾಗತ್ತದೆ ಎಂದು ಭಾವಿಸಬೇಡಿ
*ಕಾಫೀ ಇಂದ ನಾವು ಪಳ ಪಳ ಹೊಳೆಯುವ ತ್ವಚೆಯನ್ನು ಪಡೆಯಬಹುದು.
*ಕಾಫೀ ಪೌಡರ್ ಜೊತೆ ಲೋಳೆ ರಸ ಮತ್ತು ವಿಟಮಿನ್ ‘E’ ಕ್ಯಾಪ್ಸೂಲ್ ಅನ್ನು ಚೆನ್ನಾಗಿ ಬೆರೆಸಿ ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಹಚ್ಚುತ್ತಾ ಬಂದರೆ ಕ್ರಮೇಣ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತಾ ಬರುತ್ತದೆ.
* ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳಿಗೆ ಇನ್ಸ್ಟಂಟ್ ಕಾಫೀ ಪೌಡರ್ ಜೊತೆ ಬಾದಾಮಿ ಎಣ್ಣೆ ಹಾಗೂ ಲೋಳೆ ರಸ ಸೇರಿಸಿ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆದರೆ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳು ಮಾಯವಾಗುತ್ತದೆ.
ಮುಖವು ಬೆಳ್ಳಗೆ ಹೊಳೆಯಲು ಹೀಗೆ ಮಾಡಿ
ಒಂದು ಸ್ವಚ್ಛವಾದ ಬಟ್ಟಲಿನೊಳಗೆ ಒಂದು ಚಮಚ ಕಾಫೀ ಪೌಡರ್,ಒಂದು ಚಮಚ ಸಕ್ಕರೆ,1/4 ಚಮಚ ಜೇನುತುಪ್ಪ ,1/4 ಚಮಚ ಲೋಳೆ ರಸ ಬೆರೆಸಿ ಚೆನ್ನಾಗಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಹಾಗೆ ಬಿಡಬೇಕು ನಂತರ ತಣ್ಣನೆ ನೀರಿನಿಂದ ಮುಖ ತೊಳೆಯಬೇಕು.
Note: ಇದಕ್ಕೆ ಇನ್ಸ್ಟಂಟ್ ಕಾಫೀ ಪೌಡರ್ ಬಳಸಬೇಕು
ಕೂದಲು ಸೊಂಪಾಗಿ ಬೆಳೆಯಲು ಹಾಗು ಕೂದಲಿಗೆ ಹೊಳಪು ನೀಡಲು ಇನ್ಸ್ಟಂಟ್ ಕಾಫಿಯಿಂದ ಹೀಗೆ ಮಾಡಿ.
ಒಂದು ಕಪ್ ಕಾಫಿ ಪುಡಿ,ಒಂದು ಕಪ್ ಮೊಸರು,ಒಂದು ಚಮಚ ಅಲೋ ವೆರಾ ಜೆಲ್ ಅಥವಾ ತೆಂಗಿನ ಎಣ್ಣೆ ಎಲ್ಲವನ್ನೂ ಮಿಶ್ರಣ ಮಾಡಿ ನಿಮ್ಮ ತಲೆಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ . ನಂತರ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ.
ಪಳ ಪಳ ಹೊಳೆಯುವ ಕೇಶರಾಶಿ ನಿಮ್ಮದಾಗುತ್ತದೆ.
Note : ಇದಕ್ಕಾಗಿ ನೀವು ಫಿಲ್ಟರ್ ಕಾಫಿ ಪುಡಿಯನ್ನು ಬಳಸಬೇಕಾಗುತ್ತದೆ.
ಸ್ನೇಹಿತರೆ ಇಂದು ನೀವು ಈ ಕಾಫಿ ಪುಡಿ ಟಿಪ್ಸ್ ಪ್ರಯತ್ನಿಸಿ ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಧನ್ಯವಾದಗಳು.