ದಿನಾಂಕ 13.10.2021 ರಂದು ನಡೆಯಲಿರುವ ಬಿ. ಸಿದ್ದಣ್ಣಯ್ಯ ಪ್ರೌಢಶಾಲೆಯನ್ನು ಉಳಿಸಿ ಎಂಬ ಬೃಹತ್ ಪ್ರತಿಭಟನೆಗೆ ಶಾಲೆಯ ಹಳೇಯ ವಿದ್ಯಾರ್ಥಿಗಳು ಹಾಗೂ ಹಾಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಬಾಳ್ಳುಪೇಟೆ ನಾಗರಿಕರು ಈ ಪ್ರತಿಭಟನೆಯಲ್ಲಿ ನೀವುಗಳು ಶಾಲೆಯನ್ನು ಉಳಿಸಿ ಎಂಬ ಈ ಕಾರ್ಯಕ್ರಮಕ್ಕೆ ಕೈ ಜೋಡಿಸುವಂತೆ ಕೇಳಿಕೊಳ್ಳುವಂತೆ ಈ ಮೂಲಕ ತಿಳಿಸಿದೆ.ಇದು ನಿಮ್ಮ ಶಾಲೆ ಉಳಿಸುವುದು ನಿಮಗೆ ಸೇರಿದು ಸಮಯ 10.30 ಕ್ಕೆ ಸ್ಥಳ, ಬಾಳ್ಳುಪೇಟೆ ಸರ್ಕಲ್
ಬಿ.ಸಿದ್ದಣ್ಣಯ್ಯ ಪ್ರೌಢ ಶಾಲೆ, ಬಾಳ್ಳುಪೇಟೆ
ಸ್ವಾರ್ಥವೇ ದಾನಿಗಳ ಸಾಧನೆಯೇ??
ಎನ್ನ ನುಡಿಯೊಂದು ರೀತಿ
ಎನ್ನ ನಡೆಯೊಂದು ರೀತಿ
ಎನ್ನೋಳಗೇನೋ ಶುದ್ಧವಿಲ್ಲ ನೋಡಯ್ಯ!
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿರುವನಯ್ಯ !!
ದಾನ ಕೊಟ್ಟವರ ದೇವರೆಂದೆ ದಾನ ಹಿಂಪಡೆದವರ ಏನೆನ್ನಲೈಯಾ.
ಬಿ ಸಿದ್ದಣ್ಣಯ್ಯ ಪ್ರೌಢಶಾಲಾ ಆವರಣ ಇನ್ನು ನೆನಪು ಮಾತ್ರ
ಬಿ ಸಿದ್ದಣ್ಣಯ್ಯ ಪ್ರೌಢಶಾಲೆ ಎಂದರೆ ಅದೊಂದು ಜ್ಞಾನ ದೇಗುಲ. 50 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ ಶಾಲೆ. ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶಯದಂತೆ ಬಾಳ್ಳುಪೇಟೆಯಲ್ಲಿ ಸ್ಥಾಪಿಸಲ್ಪಟ್ಟ ಸುಸಜ್ಜಿತ ಶಾಲೆ, ಗುರಪ್ಪ & ಸಿದ್ದಣ್ಣಯ್ಯರಂತ ಮಹಾನ್ ಸಮಾಜ ಸೇವಕರ ಸೇವೆಯನ್ನು ಮರೆಯದಂತೆ ಪದೇ ಪದೇ ನೆನಪಿಸುವ ಶಾಲೆ, ಊರಿಗೊಂದು ಶಾಲೆ ಬೇಕೆಂದಾಗ ನಿಸ್ವಾರ್ಥವಾಗಿ 4 ಎಕ್ಕರೆ ಜಾಗವನ್ನು ಹಾಗೂ 50000 ಧನ ದಾನ ನೀಡಿ ದೈವಮಾನವರಾದ ಗುರಪ್ಪ ಹಾಗೂ ಸಿದ್ದಣ್ಣಯ್ಯನವರಿಗೆ ಸಕಲೇಶಪುರ ತಾಲ್ಲೂಕಿನ ಪ್ರತಿಯೊಬ್ಬರೂ ಋಣಿ
ಆದರೆ ದೈವಿಗುಣ ಹೊಂದಿದ್ದ ಗುರಪ್ಪ & ಸಿದ್ದಣ್ಣಯ್ಯನವರ ಮನೆತನದವರಿಂದ ಈಗಿನ ನಡೆ ಊಹಿಸಲಾಸಾಧ್ಯ.. ಕೊಟ್ಟ ದಾನವನ್ನ 50 ವರ್ಷಗಳ ನಂತರ ಹಿಂಪಡೆಯುವ ಮನಸ್ಥಿತಿಗೆ ಇಡೀ ಸಮಾಜವೇ ಮೂಕವಿಸ್ಮಿತ, ದಾನಿಗಳಿಂದ ಈ ರೀತಿ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ, ಈ ಅಮಾನವೀಯತೆ ಅಧರ್ಮಕ್ಕೆ ಪದಗಳಿಲ್ಲ. ಹಕ್ಕು ಪತ್ರ ಕೇಳುವ ದಾನಿಗಳಿಗೆ ಮತ ನೀಡಿ ವಿಧಾನಸೌಧಕ್ಕೆ ಕಳುಹಿಸಿದ ಜನತೆಯ ಋಣವಿಲ್ಲವೇ, ಋಣ ತೀರಿಸುವ ಗುಣವಿಲ್ಲ ಅಷ್ಟೇ. ಅವರ ಮನಃಸಾಕ್ಷಿಗೆ ಅವರಿಂದ ಉತ್ತರವಿದೆಯೇ,??
ದಾನ ಮಾಡಿ ಊರಿಗೆ ಶಾಲೆ ಕಟ್ಟಿಸಿದ ಹಿರಿಯರ ನಡುವೆ, ಕೊಟ್ಟ ದಾನವನ್ನು ಕಬಳಿಸುತ್ತಿರೊ ದಾನಿಗಳ ಕುಟುಂಸ್ಥರು ಬಾರಿ ಅಲ್ಪರಾಗುತ್ತಿದ್ದಾರೆ.. ಇಂತಹ ಕೆಟ್ಟ ಸನ್ನಿವೇಶಕ್ಕೆ ಸಾಕ್ಷಿಯಾಗಿರುವುದು ನಮ್ಮೆಲ್ಲರ ದೌರ್ಬಗ್ಯವೇ ಸರಿ. ಮಾಜಿ ಶಾಸಕರಿಗೆ ದಾನ ಎಂಬ ಪದದ ಅರ್ಥವೇ ಗೊತ್ತಿಲ್ಲದಂತೆ ವರ್ತಿಸುತ್ತಿದಾರೆ,
ಶಾಲೆಯ ಆಡಳಿತ ಮಂಡಳಿಯ ಬೇಜವಾಬ್ದಾರಿತನಕ್ಕೆ ನಾವೆಲ್ಲರೂ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿದೆ, ನಮ್ಮ ಶಾಲೆಯ ಆವರಣವನ್ನು ಉಳಿಸೋಣ ನಮಗೆ ವಿದ್ಯಾಭ್ಯಾಸ ನೀಡಿದ ಶಾಲೆಯನ್ನು ಸ್ವಾರ್ಥಿಗಳ ಕೈವಶ ಆಗದಂತೆ ತಡೆಯೋಣ, ಬಿ ಸಿದ್ದಣ್ಣಯ್ಯ ಪ್ರೌಢಶಾಲೆ ನಮ್ಮ ಬಾಳ್ಳುಪೇಟೆಯ ಹೆಮ್ಮೆ, ಅರ್ಧ ಶತಮಾನದ ಭಾವನಾತ್ಮಕ ದೇಗುಲವದು, ಆರ್ಥಿಕವಾಗಿ, ರಾಜಕೀಯವಾಗಿ, ಪ್ರಬಲರಾಗಿರುವವರ ಮುಂದೆ ಸಹಸ್ರಾರು ಜನಕ್ಕೆ ಅಕ್ಷರ ಕಲಿಸಿದ ವಿದ್ಯಾಸಂಸ್ಥೆ ಸೋಲೋಪ್ಪಿಕೊಳ್ಳುವ ಪರಿಸ್ಥಿಯಲ್ಲಿ ನಾವೆಲ್ಲರೂ ಒಂದಾಗಿ ಶಾಲೆಯ ಉಳಿವಿಗಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ.
ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಬೆಳಗೊಡು ಹೋಬಳಿಯ 30ಕ್ಕೂ ಹೆಚ್ಚು ಶಾಲೆಗಳು ಸರ್ಕಾರಕ್ಕೆ ಖಾತೆ ಬದಲಾವಣೆಯಾಗಿಲ್ಲ. ದಿನಾಂಕ 13-10-2021 ರ ಬುಧವಾರ ಬೆಳಿಗ್ಗೆ 10:00 ಗಂಟೆಗೆ ಬಿ ಸಿದ್ದಣ್ಣಯ್ಯ ಪ್ರೌಢಶಾಲಾ ಹಳೆವಿದ್ಯಾರ್ಥಿ ಒಕ್ಕೂಟ ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು ಎಲ್ಲರೂ ನಮ್ಮೂರಿನ ಶಾಲೆಯ ಉಳಿವಿಗಾಗಿ ಹೋರಾಡೋಣ