ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಕಾಂಕ್ಷೆ ಇಲ್ಲ. ತಂದೆ ಎಚ್.ಡಿ. ರೇವಣ್ಣ, ತಾತ ಎಚ್.ಡಿ.ದೇವೇಗೌಡ ಹಾಗೂ ಜಿಲ್ಲೆಯ ಆರು ಶಾಸಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ” – ಡಾ.ಸೂರಜ್ ರೇವಣ್ಣ(ಶಾಸಕ HD ರೇವಣ್ಣ ಅವರ ಪುತ್ರ , ಸಂಸದ ಪ್ರಜ್ವಲ್ ರೇವಣ್ಣ ಅವರ ಸಹೋದರ)
” ಈ ಬಾರಿ ಪರಿಷತ್ ಚುನಾವಣೆಗೆ ಯಾರೂ ಅಭ್ಯರ್ಥಿ ಎಂಬುದು ಗೊತ್ತಿಲ್ಲ. ತಾಯಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ನನಗೆ ಹೊಳೆನರಸೀಪುರ ತಾಲ್ಲೂಕಿನ ಎರಡು ಹೋಬಳಿ ಜವಾಬ್ದಾರಿ ನೀಡಲಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದೇನೆ ಪರಷತ್ ಚುನಾವಣೆ ನಿಲ್ಲೋ ಬಗ್ಗೆ ಯೋಚಿಸಿಲ್ಲ .,
ಸದ್ಯ ನಾನು ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಹಿರಿಯ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದ್ದೇನೆ. ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶೇ 70ರಷ್ಟು ಕಾರ್ಯಕರ್ತರು ಭವಾನಿ ಅಮ್ಮನಿಗೆ ಟಿಕೆಟ್ ನೀಡುವಂತೆ ಕೇಳಿದ್ದಾರೆ. ಅವರು ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಪ್ರಸ್ತುತ ಕೆಲಸ ಮಾಡಿದ್ದಾರೆ. ಹಿರಿಯರು ಅಭ್ಯರ್ಥಿ ಯಾರೆಂದು ಹೆಸರು ಘೋಷಣೆ ಮಾಡಬಹುದು
ನಾನು JDS ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಹಿಂದಿನ ಚುನಾವಣೆಯಲ್ಲಿ ನಡೆದ ಒಂದು ತಪ್ಪು ವಿಧಾನ ಪರಿಷತ್ ಸದಸ್ಯ ಸ್ಥಾನ ಕಳೆದುಕೊಂಡಿದ್ದೇವೆ. ಈ ಬಾರಿ ಕೆಳೆದಕೊಂಡಿದ್ದನ್ನು ಪಡೆಯಬೇಕು ., ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ” -ಡಾ.ಸೂರಜ್ ರೇವಣ್ಣ(ಶಾಸಕ HD ರೇವಣ್ಣ ಅವರ ಪುತ್ರ , ಸಂಸದ ಪ್ರಜ್ವಲ್ ರೇವಣ್ಣ ಅವರ ಸಹೋದರ)
#surajrevanna #hassannews #holenarasipura