ನಿಮಗೆ ಗೊತ್ತೇ ??
2019ರಲ್ಲಿ ಈ ಕೆಟ್ಟ ರಸ್ತೆಯಲ್ಲಿ 452 ಜನರ ಸಾವು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರೆ ! 2020ರಲ್ಲಿ ಬರೋಬ್ಬರಿ 370 ಮಂದಿ ಬಲಿಯಾಗಿದ್ದು ಇದಕ್ಕೆ ಯಾರು ಹೊಣೆ??
ಬೆಂಗಳೂರು- ಹಾಸನ- ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ NH75 ರಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಟೋಲ್ ಕಟ್ಟಿ ಬಂದರೂ ನೆಮ್ಮದಿಯಾಗಿ ಬರಬಹುದು , ವಯಸ್ಕರು ಯಾವುದೇ ಗುಂಡಿ ಹಳ್ಳ ಕೊಳ್ಳ ದಾಟದೇ ಪ್ರಯಾಣ ಬೆಳೆಸ ಬಹುದು ಆದರೆ ಹಾಸನದ ತಣ್ಣೀರುಹಳ್ಳದಿಂದ ಸಕಲೇಶಪುರ ಮಾರನಹಳ್ಳಿ ವರೆಗೂ ಕೆರೆ ದಡ ಆಡ ಆಡುತ್ತ ಹೋಗಬೇಕಿದೆ., ಈ ಸಾಹಸಮಯ ರಸ್ತೆಯ ನಡುವ , ಕೆಲವೆಡೆ ಕಾಂಕ್ರೀಟ್ ರಸ್ತೆ ಸಿಕ್ಕರು ಕೆಲವು ಕಿ.ಮೀ ಮಾತ್ರ , ಕೆಲವು ಹಳೇ ರಸ್ತೆಗಳು ಸಾವಿನ ರಹದಾರಿಯಾಗಿ ಮಾರ್ಪಟ್ಟಿದೆ. ಇಲ್ಲಿನ ಪ್ರಯಾಣ ಎಂದರೆ ಪ್ರಯಾಣಿಕರ ಪಾಲಿಗೆ ಸವಾಲಿನದ್ದು
ರಾಜ್ಯ ಮತ್ತು ಕೇಂದ್ರ ಸರಕಾರದ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬದ್ಧತೆಯನ್ನು ಜನತೆ ಪ್ರಶ್ನಿಸುತ್ತಿದ್ದು ಈ ಬಾರಿಯ ಅಧಿವೇಶನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕರಾದ ಎಚ್. ಕೆ.ಕುಮಾರಸ್ವಾಮಿ, ಸಂಸತ್ ನಲ್ಲಿ ಪ್ರಜ್ವಲ್ ರೇವಣ್ಣ, ಧ್ವನಿ ಎತ್ತುವರೇ ಎಂಬುದು ಜನತೆಯ ನಿರೀಕ್ಷೆಯಾಗಿದೆ. ಹೀಗೆ ಆಮೆ ವೇಗದ ರಸ್ತೆ ಕಾಮಗಾರಿ ನಡೆಸುವುದಾದರೆ , ವಿಧಾನಸೌದಕ್ಕೆ ಪಾದಯಾತ್ರೆ, ಪಾರಂಭಿಸುವುದಾಗಿ ಶಾಸಕ ಎಚ್. ಕೆ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವವರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹೀಗಾಗಿ ಹಾಸನ ಜಿಲ್ಲೆ ಆಯ್ದು ಹೋಗುವುದು ಅನಿವಾರ್ಯ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಗೌರವ ಇಟ್ಟು ರಸ್ತೆ ಕಾಮಗಾರಿಗೆ ವೇಗ ಕೊಟ್ಟರೆ ಒಳ್ಳೆಯದು.
ಹಾಸನದಿಂದ ಸಕಲೇಶಪುರ ತಾಲೂಕು ಮಾರನ ಹಳ್ಳಿವರೆಗಿನ 47 ಕಿಮೀ ಚತುಷ್ಪಥ ಹೆದ್ದಾರಿ ರಸ್ತೆ ಕಾಮಗಾರಿ 100 ಕೋಟಿ ವೆಚ್ಚದ ಕಾಮಗಾರಿಯನ್ನು ನಾಲ್ಕು ವರ್ಷದ ಹಿಂದೆ ಶೇ.15ರಷ್ಟು ಅಂದರೆ 584 ಕೋಟಿಗೆ ಗುತ್ತಿಗೆ ಪಡೆದ ಏಸೋಲ್ಕ್ ಕಂಪನಿ ಕೈಸುಟ್ಟುಕೊಂಡಿತಂತೆ. ನಂತರ ರಾಜ್‌ಕಮಲ್ ಎಂಬ ಕಂಪನಿ ಮೂಲ ಕಂಪನಿಯೊಂದಿಗೆ ಒಪ್ಪಂದ ಮಾಡಿ ಕೊಂಡು ಕಾಮಗಾರಿ ಪ್ರಾರಂಭಿಸಿದ್ದರೂ, ಇಂದಿಗೂ ಶೇ.30ರಷ್ಟು ಪೂರ್ಣಗೊಂಡಿಲ್ಲ ಕಾಮಗಾರಿ ವೇಗ ಇನ್ನೂ ಮೂರ್ನಾಲಕ್ಕು ವರ್ಷಗಳೇ ಬೇಕು ಅಂದರೆ ಒಮ್ಮೆ ಜ್ವರ ಬಂದು ಹೋಗುತ್ತದೆ
ಈ ನಡುವೆ ರಜೆದಿನ ಬಂತೆಂದರೆ ಸಾಕು ಬೆಂಗಳೂರಿನಿಂದ ಹಾಸನ, ಚಿಕ್ಕಮಗಳೂರು, ಧರ್ಮಸ್ಥಳ ಮತ್ತಿತರ ಜಿಲ್ಲೆಯ ಹೆದ್ದಾರಿಯಲ್ಲಿ 2019ರಲ್ಲಿ ಅಪಘಾತ ವೊಂದರಲ್ಲಿ 452 ಜನ ಮೃತಪಟ್ಟರೆ, 1,700 ಜನ ಗಾಯಗೊಂಡಿದ್ದಾರೆ. 2020ರಲ್ಲಿ ಕೊರೊನಾ ಲಾಕ್ ಡೌನ್ ಹೊರತುಪಡಿಸಿಯೂ ಈಗಲೇ 70 ಜನ ಮೃತಪಟ್ಟು, 1,200 ಜನ ಗಾಯಗೊಂಡ ವರದಿಯಾಗಿದೆ
ಈ ಅಂಕಿ, ಸಂಖ್ಯೆಯೇ ಅಪಘಾತ-ಸಾವು, ನೋವಿನ ತೀವ್ರತೆ ಎಷ್ಟಿದೆ ಎಂಬುದನ್ನು ಸಾಕ್ಷೀಕರಿಸುತ್ತದೆ.
ಹಾಸನ ಸಕಲೇಶಪುರ ರಸ್ತೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು ಕಾಮಗಾರಿಯು ಆಮೆನಡಿಗೆಯಲ್ಲಿ ನಡೆಯುತ್ತಿದ್ದು , ಹಾಸನ ಶಾಸಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಚಳಿಬಿಟ್ಟು ತಮ್ಮ ಮೇಲ್ದನಿ ಎತ್ತ ಬೇಕಿದೆ