ಲಿಖಿತ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ
ಸಾರ್ವಜನಿಕರಿಗೆ ತಿಳಿದಿರುವಂತೆ ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ರಾಜ್ಯ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ಹಾಸನ ಶಾಖೆಯ ವತಿಯಿಂದ ಸರ್ವಧರ್ಮೀಯರಿಗಾಗಿ ದಿನಾಂಕ 12-12-2021 ರಂದು ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ದಿನಾಂಕ 26-12-2021 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಗರದ ಎನ್. ಆರ್. ಸರ್ಕಲ್ ನ ಹತ್ತಿರ ಹಾಗೂ
ಕೆನರಾ ಬ್ಯಾಂಕ್ ನ ಹಿಂಭಾಗದಲ್ಲಿರುವ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಶ್ರೀ ಮಲ್ಲೇಶ್ ಗೌಡ ಬಿ.ಎಸ್. ರವರು ಪ್ರಥಮ ಬಹುಮಾನ 10,000 ರೂ, ದ್ವಿತೀಯ ಬಹುಮಾನ ಶ್ರೀಮತಿ ಶ್ವೇತಾ ಕೆ. 7,000 ರೂ, ಮತ್ತು ತೃತೀಯ ಬಹುಮಾನ ಶ್ರೀಮತಿ ಖೈಸರ್ ಜಹಾ ಎಫ್. 5,000 ರೂ ಗಳನ್ನು ಗಳಿಸಿರುತ್ತಾರೆ. ಸ್ಪರ್ಧೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಹತ್ತು ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಹಾಗೂ
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು, ಹಾಸನದ ನೂತನ ಜಿಲ್ಲಾಧ್ಯಕ್ಷರಾಗಿರುವ ಡಾ. ಎಚ್.ಎಲ್. ಮಲ್ಲೇಶ್ ಗೌಡ ಹಾಗೂ ನಗರದ ಇತರ ಗಣ್ಯರು ಭಾಗವಹಿಸಿದ್ದರು. ಬಹುಮಾನ ವಿತರಣೆಯ ಹೊರತು ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಹಾಗೂ
ವಿವಿಧ ತಾತ್ಕಾಲಿಕ ಸಂದರ್ಭಗಳಲ್ಲಿ ತಮ್ಮ ಅತ್ಯುತ್ತಮ ಸೇವೆಗಳನ್ನು ಸಲ್ಲಿಸಿ ಮಾನವೀಯತೆಗೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿರುವ ಗಣ್ಯರಾದ ಡಾ|| ಕೆ.ಆರ್. ಷರೀಫ್, ಡಾ|| ಅಜ್ಮಲ್, ಡಾ|| ಫಸೀಹುರ್ರಹ್ಮಾನ್ ಹಾಗೂ ಸಮಾಜ ಸೇವಕರು ಮತ್ತು ಪತ್ರಕರ್ತರು ಆಗಿರುವ ಅತೀಕುರ್ರಹ್ಮಾನ್ ಎನ್.ಎಂ ಮತ್ತು ತೌಫೀಕ್ ಅಹ್ಮದ್ ರವರ ಸೇವೆಗಳನ್ನು ಗೌರವಿಸುತ್ತಾ ಸನ್ಮಾನಿಸಲಾಯಿತು. ಬಹುಮಾನ ಗಳಿಸಿದ ಎಲ್ಲಾ ಸ್ಪರ್ಧಿಗಳಿಗೆ ಹಾಗೂ ಸ್ಪರ್ಧೆಯನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಸಹಕರಿಸಿದ ಎಲ್ಲರಿಗೆ ಸಂಘಟನೆಯು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.