ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಮಂಗಳವಾರ ಯುವಕನನ್ನು ಥಳಿಸಿ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣ :
ಹಲ್ಲೆಗೊಳಗಾದ ವಕ್ತಿ ಮೇಘರಾಜ್ ಹೇಳಿಕೆ : ” ಬಸ್ತಿಹಳ್ಳಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದೇನೆ , ಬೊಮ್ಮನಾಯಕನ ಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮಹಾರಾಜ ಪಾರ್ಕ್ ಹತ್ತಿರ ಹೋಗಿದ್ದಾಗ ಸುಖಾಸುಮ್ಮನೆ ಹುಡುಗಿ ಚುಡಾಯಿಸಿದನೆಂದು ಅಂದಾಜು ನಾಲ್ಕಾರು ಜನ ಗುಂಪು – ಗುಂಪಲ್ಲಿ ನನ್ನಮೇಲೆ ಹಲ್ಲೆ ಮಾಡಿದರು. ಕೆಟ್ಟ ಕೆಟ್ಟ ಶಬ್ಧಗಳಿಂದ ನಿಂದಿಸಿ, ಕೊಲೆ ಮಾಡುತ್ತೇವೆ ಎಂದು ಹೆದರಿಸಿ ವಿವಸ್ತ್ರಗೊಳಿಸಿ ನನ್ನ ಮಾನಹರಣ ಮಾಡಿದರು “
ಘಟನೆಯ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಏನು ಹೇಳಿದರು :
” ಘಟನೆ ನಡೆದ ಸ್ಥಳದಲ್ಲಿದ್ದ ಯುವಕಿನಿಗೆ ಹೊಡೆದ ಎಲ್ಲರನ್ನೂ ಪತ್ತೆ ಹಚ್ಚಿ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಂಡು ತನಿಖೆ ಮಾಡುತ್ತೇವೆ , ಈ ಪ್ರಕರಣದಲ್ಲಿ ಒಂದು ವೇಳೆ ಹುಡುಗಿಗೆ ಅನ್ಯಾಯವಾಗಿದೆ ಎನ್ನುವುದಾದರೆ ಮುಂದೆ ಬಂದು ದೂರು ನೀಡಿಲಿ . ಆಕೆಯ ರಕ್ಷಣೆ ನಾವು ಮಾಡುತ್ತೇವೆ , ಘಟನೆ ಸಂಬಂಧ ಯಾವುದೇ ಸಾಕ್ಷ್ಯಾಧಾರಗಳು ಆ ಸ್ಥಳದಲ್ಲಿ ಸಿಕ್ಕಿಲ್ಲ , ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ಅದು ತಪ್ಪು. ಯಾರೇ ಆಗಲಿ, ತಮಗೆ ತಿಳಿದ ಯಾವುದೇ ವಿಷಯ ಅಥವಾ ಆಕ್ಷೇಪಣೆ ಇದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಅಥವಾ 112 ಕ್ಕೆ ಕರೆ ಮಾಡಿ , ಇಡೀ ಘಟನೆಗೆ ಕಾರಣ ಎನ್ನಲಾದ ಪ್ರವೀಣ್‍ಗೌಡ ಎಂಬಾತನನ್ನು ಈಗಾಗಲೇ ಗುರುತಿಸಿ, ಆತನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ವಾರ್ನಿಂಗ್ ನೀಡಲಾಗಿದೆ ., ಹಲ್ಲೆಗೊಳಗಾದ ಯುವಕನ ದೂರು ಆಧರಿಸಿ ಈಗಾಗಲೇ ಕಲಂ 341, 504, 506, 294 ಅಡಿ ಕೇಸ್ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ “
ಗೂಂಡಾಗಿರಿ ಮಾಡಿರುವವರ ವಿರುದ್ಧ ಸಂಬಂಧಪಟ್ಟ ಕಾನೂನು ಅಡಿ ಕ್ರಮ ಜರುಗಿಸಲಾ ಗುವುದು – ಶ್ರೀನಿವಾಸ್ ಗೌಡ (ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ)