ಹಾಸನ / ಸಕಲೇಶಪುರ : ವೀಕೆಂಡ್ ಬಂತೆಂದರೆ ಹಾಸನ ಸುತ್ತಮುತ್ತಲಿನ ಪ್ರದೇಶದ ಹಾಗೂ ಕರ್ನಾಟಕದ ಹಲವೆಡೆಯಿಂದ ಸಕಲೇಶಪುರದ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಬೇಟಿ ನೀಡುವುದು ಸಹಜ ., ಪೃಕೃತಿ ಸವಿಯೋ ಮನಸ್ಥಿತಿ ಜೊತೆಗೆ ಅಲ್ಲಿನ ಪರಿಸರ ಉಳಿಸೋ ಜವಾಬ್ದಾರಿ ಕೂಡ ಅದೇ ಎಲ್ಲಾ ಪ್ರವಾಸಿಗರದ್ದಾಗಿರುತ್ತದೆ ., ಹಾಗೂ ಅಲ್ಲಿನ ಜನಪ್ರತಿನಿದಿಗಳು ಒಂದೊಳ್ಳೆಯ ವ್ಯವಸ್ಥೆ ನಿರ್ಮಿಸಿಕೊಟ್ಟರೆ ಪ್ರವಾಸಿಗರು ಸಂತೃಪ್ತರು ., ಆದರೆ
ನೀವು ಚಿತ್ರಗಳ ಒಮ್ಮೆ ನೋಡುತ್ತಿದ್ದರೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನ ಬಿಟ್ಟರೆ ಅಲ್ಲಿನ ಆವರಣ , ಸುತ್ತಮುತ್ತ ಮೂಲಭೂತ ಸೌಕರ್ಯಗಳ ಕೊರತೆ , ಹಾಗೂ ವ್ಯವಸ್ಥೆ ಹದಗೆಟ್ಟಿರೋದು ಕಾಣಸಿಗುತ್ತಿದೆ .,
ಮೊದಲನೇಯದಾಗಿ ಸುಗಮ ರಸ್ತೆ ಸಂಚಾರ (ಡಾಂಬಾರು ರಸ್ತೆ ಇಲ್ಲ) ಇಲ್ಲ , ದಿನೇ ದಿನೇ ಕಲುಷಿತ ಗೊಳ್ಳುತ್ತಿದೆ ., ಕಾರಣ , ಅಲ್ಲಿನ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ನಿರ್ವಹಣೆ ಇಲ್ಲ , ಕೆಲ ಪ್ರವಾಸಿಗರು ಅಲ್ಲಿ ಎಲ್ಲೆಂದರಲ್ಲಿ ಎಸೆದು ಹೋಗಿರುವ ಪ್ಲಾಸ್ಟಿಕ್ ಬಾಟಲ್ , ಕವರ್ , ಹಾಗೂ ಮದ್ಯ ಬಾಟಲ್ ಗಳು , ಸ್ಥಳೀಯ ಪರಿಸರಕ್ಕೆ ಮಾರಕ ಪರಿಣಾಮ ಬೀರಲಿದೆ .
ಈ ಮೂಲಕ ಪ್ರವಾಸಿಗರಿಗೆ ಕೇಳಿಕೊಳ್ಳುವುದು ., ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸಂಬಂಧಿಸಿದ ಯಾವುದೇ ವಸ್ತುಗಳ ಬಿಸಾಡಬಾರದು ., ಗ್ರಾಮದ ಕಸ ನಿರ್ವಹಣಾ ನಿಗದಿತ ಸ್ಥಳದಲ್ಲೇ ಹಾಕಬೇಕು .,
ಈ ಮೂಲಕ ಅಲ್ಲಿನ ಜನಪ್ರತಿನಿದಿಗಳು ಹಾಗೂ ಜಿಲ್ಲಾ , ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಅಲ್ಲಿನ ಬಾತ್ರೂಮ್ ಹಾಗೂ ಸ್ಥಳೀಯ ರಸ್ತೆ ಅಭಿವೃದ್ಧಿ ಯತ್ತ ಗಮನ ಹರಿಸಿ . , ಪ್ರವಾಸಿಗರ ಸ್ಥಳೀಯರಿಗೆ ಸುಗಮ , ಸ್ವಚ್ಚ ಗ್ರಾಮಕ್ಕೆ ಅನುವು ಮಾಡಿಕೊಡಬೇಕು
ಧನ್ಯವಾದಗಳು