ರಷ್ಯಾ ಉಕ್ರೇನ್‌ ಯುದ್ಧ ಸಮರ ಹಾಸನ ಜಿಲ್ಲೆಯ ಹತ್ತು ವೈದ್ಯಕೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ

0

ಹಾಸನ / ಉಕ್ರೇನ್ : ತಾಯ್ನಾಡಿಗೆ ಮರಳಲು ದೇಶದ ಹಲವರಲ್ಲಿ ಕರ್ನಾಟಕದ ಕೆಲವರಲ್ಲಿ ಹಾಸನದ 10ಜನ ಪರದಾಡುತ್ತಿದ್ದಾರೆ.

ಈ ಭಾವ ಚಿತ್ರಗಳಲ್ಲಿರುವ ಹಾಸನ ಜಿಲ್ಲೆಯ ಗಗನ್‍ಗೌಡ, ಕೀರ್ತನಾ, ಅರ್ಪಿತಾ, ಧನುಜಾ, ಸಂಜನಾ, ಹಿಮನ್‌ ರಾಜ್, ರೋಹಿತ್‌, ಭಾವನಾ ರಾಜಶೇಖರ್‌ ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ ಹಾಸನ, ಸಕಲೇಶಪುರ, ಅರಕಲಗೂಡು, ಚನ್ನರಾಯಪಟ್ಟಣ ಭಾಗದವರು ಇದ್ದಾರೆ. ಯುದ್ಧದ ಸುಳಿವು ಅರಿತು ಚನ್ನರಾಯಪಟ್ಟಣದ ಸೈಯದ್ ಸಿಕ್ಕ್ರೀಂ ಫೆ.23ರಂದೇ ಭಾರತಕ್ಕೆ ಮರಳಿದ್ದಾನೆ ಎಂದು ತಿಳಿದು ಬಂದಿದೆ .

ರಷ್ಯಾದ ತೀವ್ರ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ ನಲ್ಲಿ ಸಿಲುಕಿರುವ ಹಾಸನ ಜಿಲ್ಲೆಯ ಕೆಲ ಮೆಡಿಕಲ್ ವಿದ್ಯಾರ್ಥಿಗಳಲ್ಲಿ ಮುಂದೇನು ಎಂಬ ಆತಂಕ ಮನೆ ಮಾಡಿದೆ.

ಮೆಡಿಕಲ್ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಹಾಸನ ಮೂಲದ ಕೀರ್ತನಾ, ಅರ್ಪಿತಾ, ಧನುಜಾ, ಸಂಜನಾ ಮತ್ತು ಹಿಮನ್‌ರಾಜ್ ಎಂಬ ಐವರು ವಿದ್ಯಾರ್ಥಿಗಳಲ್ಲಿ ಈಗ ಆತಂಕ ಮನೆ ಮಾಡಿದೆ. ಇವರೆಲ್ಲಾ ಕೀವ್‌ನ ಇಂಟರ್ ನ್ಯಾಷನಲ್ ಹುಜಾರ್ಡ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಕೀರ್ತನಾ ಯು.ಸಿ. ಮೂರನೇ ವರ್ಷದ ಮೆಡಿಕಲ್ ಓದುತ್ತಿದ್ದರೆ, ಉಳಿದವರು ಪ್ರಥಮ ವರ್ಷದ ಸೂಡೆಂಟ್ಸ್ ಆಗಿದ್ದಾರೆ ಎನ್ನಲಾಗಿದೆ .,

ಸದ್ಯದ ಮಾಹಿತಿ ಪ್ರಕಾರ ನಾಲ್ವರು ವಿದ್ಯಾರ್ಥಿಗಳು ಹಂಗೇರಿ ಗಡಿ ಭಾಗದಲ್ಲಿ ಇದ್ದು, ಅವರನ್ನು ಏರ್‌ಲಿಫ್ಟ್‌ ಮೂಲಕ ಭಾರತಕ್ಕೆ ಕರೆತರಲು ಪ್ರಯತ್ನ ನಡೆಯುತ್ತಿದೆ. ಉಳಿದವರನ್ನು ಹಾಸ್ಟೆಲ್‌ನ ಬಂಕರ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.  ಈ ಕುರಿತು ಮಾತನಾಡಿದ ಕೀರ್ತನಾ ತಂದೆ ಚಿನ್ನಪ್ಪಗೌಡ, ಮಗಳೊಂದಿಗೆ ನಿತ್ಯವೂ ಮರಳಿ ಮಾತನಾಡುತ್ತಿದ್ದೇವೆ. ಸದ್ಯ ಯುದ್ಧದ ಸ್ಥಳಕ್ಕೂ ಅವರಿರುವ ಸ್ಥಳಕ್ಕೂ ಸುಮಾರು 1 ಸಾವಿರ ಕಿಮೀ ಅಂತರವಿದೆ. ಅವರೆಲ್ಲಾ  ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ವಿಮಾನ ಹಾರಾಟ ಆರಂಭವಾದರೆ ಭಾರತಕ್ಕೆ ಧನುಜಾ ಕಳುಹಿಸುವುದಾಗಿ ಕಾಲೇಜಿನವರೂ ಹೇಳಿದ್ದಾರೆ. ಲಗೇಜ್ ಎಲ್ಲಾ ಪ್ಯಾಕ್ ಆಗಿದೆ. ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ಕೆಲವರು ಏರ್‌ಪೋರ್ಟ್‌ ಕಡೆಗೆ ಸಾಗುವಾಗಲೇ ದಾಳಿ ಆರಂಭವಾಗಿ, ವಿಮಾನ ಸಂಚಾರ ಸ್ಥಗಿತಗೊಂಡಿದೆ. ಬಹುತೇಕರು ಹಾಸ್ಟೆಲ್‌ಗಳಲ್ಲಿ ವಾಸವಾಗಿ ದ್ದಾರೆ. ಯುದ್ಧ ಮುಂದುವರಿದರೆ ಆಹಾರ ಧಾನ್ಯ ಕೊರತೆ, ನೀರಿನ ಸಮಸ್ಯೆ ಎದುರಾಗುವ ಆತಂಕ ಕಾಡಬಹುದು ಎನ್ನಲಾಗಿದೆ.

ಕರ್ಕೀವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಗಗನ್‌ಗೌಡ ಪ್ರಥಮ ವರ್ಷದ ವೈದ್ಯಕೀಯ ವಿಜ್ಞಾನ ಅಧ್ಯಯನ ಮಾಡುತ್ತಿದ್ದಾರೆ. ಕೀವ್‌ ಇಂಟರ್‌ನ್ಯಾಷನಲ್ ಹುಜಾರ್ಡ್ ಯೂನಿವರ್ಸಿಟಿಯಲ್ಲಿ ಯು.ಸಿ. ಕೀರ್ತನಾ ಮೂರನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಉಳಿದವರು ಮೊದಲ ವರ್ಷದ ವಿದ್ಯಾರ್ಥಿಗಳು.

ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿ ಸಕಲೇಶಪುರದ ಭಾವನಾ ರಾಜಶೇಖರ್ ಮಾತನಾಡಿ, ‘ಗುರುವಾರ ದಿಂದ ಹಾಸ್ಟೆಲ್‌ನ ನೆಲ ಮಹಡಿಯಲ್ಲಿ ಆಶ್ರಯ ಪಡೆದಿದ್ದೇವೆ. ಹಾಸ್ಟೆಲ್‌ ಸಿಬ್ಬಂದಿ ಹೇಳಿದ ಸಮಯದಲ್ಲಿ ಮೊದಲ ಮಹಡಿಗೆ ‌ತೆರಳಿ ನಿತ್ಯ ಕರ್ಮ ಮುಗಿಸಿ, ಊಟ, ತಿಂಡಿ ಸೇವಿಸಿ ವಾಪಸ್ ಬರುತ್ತೇವೆ. ಬಾಂಬ್‌ ಸ್ಫೋಟ ಕೇಳುತ್ತಿದ್ದಂತೆ ಭಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಉಕ್ರೇನ್‌ನಲ್ಲಿ ಮೆಡಿಕಲ್ ವ್ಯಾಸಂಗಕ್ಕೆ ಕಡಿಮೆ ವೆಚ್ಚ ಎಂಬ ಕಾರಣಕ್ಕೆ ಅಲ್ಲಿಗೆ ಹೋಗಿದ್ದರು ಆದರೀಗ ಆರೊಗ್ಯವಾಗಿ ಬಂದರೆ ಸಾಕು ಎಂದು ಪ್ರಾರ್ಥಿಸಿದರು. ಈ ನಡುವೆ ಅಲ್ಲಿನ ಆತಂಕ ಪರಿಸ್ಥಿತಿ ಬಗ್ಗೆ ಮಾತನಾಡಿರುವ ನಗರದ ಬಡಾವಣೆಯ ವೇಣುಗೋಪಾಲ ಎಂಬುವವರ ಪುತ್ರಿ ಸಂಜನಾ, ನಿನ್ನೆ ತುಂಬಾ ಭಯದ ವಾತಾವರಣ ಕೀರ್ತನಾ ನಿರ್ಮಾಣವಾಗಿತ್ತು. ಇಂದು ತಿಳಿಯಾಗಿದೆ. ಕೀವ್‌ನಿಂದ ಸುಮಿಗೆ ನಮ್ಮನ್ನು ಸ್ಥಳಾಂತರ ಮಾಡಿದ್ದಾರೆ ಎಂದಿದ್ದಾಳೆ. ನಿನ್ನೆ ನೂರಾರು ವಿದ್ಯಾರ್ಥಿಗಳಿಗೆ ಮೆಟ್ರೊ ಸ್ಟೇಷನ್ ನಲ್ಲಿ ಆಶ್ರಯ ನೀಡಲಾಗಿತ್ತು. ಇಂದು ಸುಮಿ ಎಂಬ ಪ್ರದೇಶಕ್ಕೆ ಸರಕಾರ ಸ್ಥಳಾಂತರ ಮಾಡಿದೆ. ಕೂಡಲೇ ಎಲ್ಲಾ ಭಾರತೀಯ ಯುದ್ಧ ವಿದ್ಯಾರ್ಥಿಗಳನ್ನು ಬೇಗನೆ ಭಾರತಕ್ಕೆ ಕರೆ ಘೋಷಣೆಯಾಗಿದೆ. ಇದು ಆಗಬಾರದಿತ್ತು. ತರುವಂತೆ ಎಲ್ಲರೂ ಮನವಿ ಮಾಡುತ್ತಿದ್ದಾರೆ. ಮಗಳು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿ ಬಂದರೆ ಸಾಕು ,  ಇವರಲ್ಲದೆ ಹೊಳೆನರಸೀಪುರ ಮೂಲದ ಎಂದು ಇಬ್ಬರು ಸೇರಿದಂತೆ ಕೆಲವರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು ಊಟ-ತಿಂಡಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದು, ಮಕ್ಕಳ ಆಗಮನ ನಿರೀಕ್ಷೆಯಲ್ಲಿ ಕುಟುಂಬ ವರ್ಗ ಕಾದು ಕುಳಿತಿದ್ದಾರೆ.

ರೋಹಿತ್ ಎಂಬುವವರೂ ಉಕ್ರೇನ್‌ನ ಸುಮಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಆಶ್ರಯ ಪಡೆದಿದ್ದು, ತಾಯ್ನಾಡಿಗೆ ವಾಪಸ್ಸಾಗಲು ಪರದಾಡುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ತೆರಳಿದ್ದ ಅವರು, ವಾರದ ಹಿಂದೆಯೇ ವಾಪಸ್ಸಾಗಲು ಮುಂದಾ ಗಿದ್ದರು. ಆದರೆ, ವಿಶ್ವವಿದ್ಯಾಲಯವು ಪರೀಕ್ಷೆಯ ಕಾರಣಕ್ಕೆ ವಾಪಸ್ಸಾಗಲು ಅನುಮತಿ ನೀಡಲಿಲ್ಲ. ಹೀಗಾಗಿ, ಅಲ್ಲಿಯೇ ಇರಬೇಕಾಯಿತು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಈ ನಡುವೆ ಉಕ್ರೇನ್‌ ಪರಿಸ್ಥಿತಿ ಬಗ್ಗೆ ಮಾತನಾಡಿರುವ ವಿಜಯನಗರ ಬಡಾವಣೆಯ ವೇಣುಗೋಪಾಲ ಅವರ ಪುತ್ರಿ ಸಂಜನಾ, ‘ಗುರುವಾರ ತುಂಬಾ ಭಯದ ವಾತಾವರಣ ನಿರ್ಮಾಣವಾಗಿತ್ತು. ಶುಕ್ರವಾರ ಸ್ವಲ್ಪ ತಿಳಿಯಾಗಿದೆ. ಕೀವ್‌ನಿಂದ ಸುಮಿಗೆ ನಮ್ಮನ್ನು ಸ್ಥಳಾಂತರ ಮಾಡಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಮೆಟ್ರೊ ನಿಲ್ದಾಣದಲ್ಲಿ ಆಶ್ರಯ ನೀಡಲಾಗಿತ್ತು. ಬೆಳಿಗ್ಗೆ ಸುಮಿ ಎಂಬ ಪ್ರದೇಶಕ್ಕೆ ಸರ್ಕಾರ ಎಲ್ಲರನ್ನೂ ಸ್ಥಳಾಂತರ ಮಾಡಿದೆ’ ಎಂದು ಹೇಳಿದರು.

‘ಕೀವ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಭಯಭೀತರಾಗಿ ದ್ದೇವೆ. ಕೇಂದ್ರ ಸರ್ಕಾರ ಸಾಧ್ಯವಾದಷ್ಟು ಬೇಗ ನಮ್ಮನ್ನು ಕರೆಸಿಕೊಳ್ಳಲು ವಿಮಾನ ವ್ಯವಸ್ಥೆ ಮಾಡಬೇಕು. ಇಲ್ಲಿಗೆ ಬಂದು ಮೂರು ತಿಂಗಳಷ್ಟೇ ಆಗಿದೆ. ಬುಧವಾರದವರೆಗೆ ತರಗತಿಗಳು ನಡೆದಿವೆ. ಶುಕ್ರವಾರ ಬೆಳಿಗ್ಗೆಯಿಂದ ನೆಟ್‌ವರ್ಕ್, ವಿದ್ಯುತ್, ನೀರಿನ ಸರಬರಾಜು ವ್ಯವಸ್ಥೆಯಲ್ಲಿ ಏರುಪೇರಾಗುತ್ತಿದೆ’ ಎಂದು ಗಗನ್‍ಗೌಡ ಆತಂಕ ವ್ಯಕ್ತಪಡಿಸಿದರು.

‘15 ದಿನಗಳಿಂದ ಯುದ್ಧದ ಭೀತಿ ಎದುರಾಗಿದೆ. ಯುದ್ಧ ಆರಂಭವಾಗಿದೆ. ಏನಾಗುತ್ತದೆಯೋ ಎನ್ನುವ ಭೀತಿಯಲ್ಲಿ ಸಿಲುಕಿದ್ದೇವೆ. ಭಾರತೀಯ ರಾಯಭಾರ ಕಚೇರಿಯಿಂದ ನಮ್ಮನ್ನು ಸಂಪರ್ಕಿಸಿ, ‘ಸದ್ಯಕ್ಕೆ ಏನೂ ತೊಂದರೆ ಆಗುವುದಿಲ್ಲ. ಸಮಸ್ಯೆ ಬಂದರೆ ಸ್ಥಳಾಂತರಿಸುತ್ತೇವೆ’ ಎಂದಿದ್ದಾರೆ. ಆದರೆ, ನಮಗೆ ಇಲ್ಲಿರಲು ಭಯವಾಗುತ್ತಿದೆ. ಬಾಂಬ್ ಶಬ್ದವೂ ಕೇಳಿಸುತ್ತಿದೆ’ ಎಂದು ತಿಳಿಸಿದರು.

‘ಮೆಡಿಕಲ್ ಶುಲ್ಕ ಭಾರತಕ್ಕಿಂತ ಅಗ್ಗ’

‘ಮಗಳೊಂದಿಗೆ ನಿತ್ಯವೂ ಮಾತನಾಡುತ್ತಿದ್ದೇವೆ. ಸದ್ಯ ಯುದ್ಧದ ಸ್ಥಳಕ್ಕೂ ಅವಳಿರುವ ಸ್ಥಳಕ್ಕೂ ಸುಮಾರು 1 ಸಾವಿರ ಕಿ.ಮೀ ಅಂತರವಿದೆ. ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾಳೆ. ವಿಮಾನ ಹಾರಾಟ ಆರಂಭವಾದರೆ ಭಾರತಕ್ಕೆ ಕಳಿಸುವುದಾಗಿ ಕಾಲೇಜಿನವರೂ ಹೇಳಿದ್ದಾರೆ. ಲಗೇಜ್ ಪ್ಯಾಕ್ ಆಗಿದೆ. ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರ್ಕಾರ ಮುಂದಾಗ ಬೇಕು’ ಎಂದು ಕೀರ್ತನಾ ತಂದೆ ಚಿನ್ನಪ್ಪಗೌಡ ಮನವಿ.

ಯುದ್ಧ ಘೋಷಣೆ ಸುಳಿವು ಸಿಕ್ಕ ಕೂಡಲೇ ಭಾರತಕ್ಕೆ ಮರಳಲು ಸಿದ್ಧತೆ ಮಾಡಿಕೊಂಡು, ವಿಮಾನದ ಮೂಲಕ ಫೆ.23ರಂದು ಮರಳಿದ ಚನ್ನರಾಯಪಟ್ಟಣ ಹೈದ. ಬಂದ ಬಳಿಕ ಸ್ನೇಹಿತರನ್ನು ಮೊಬೈಲ್ ಮೂಲಕ ಪ್ರಯತ್ನಿಸಿದಾಗ ಕೆಲವರು ಮಾತನಾಡಲು ಭಯಪಡುತ್ತಿದ್ದಾರೆ. ಅಲ್ಲಿ ಯುದ್ಧ ಶುರುವಾಗಿದೆ’ ಎಂದು ತಾಯ್ನಾಡಿಗೆ ಮರಳಿರುವ ಚನ್ನರಾಯಪಟ್ಟಣ ಸೈಯದ್ ಸಿಕ್ಕ್ರೀಂ ಹೇಳಿದರು

LEAVE A REPLY

Please enter your comment!
Please enter your name here