ಉದ್ಘಾಟನೆಗೊಂಡ ಭವ್ಯ ಸುಂದರ ಕ್ರೈಸ್ತ ದೇವಾಲಯ

0

ಹಾಸನ / ಅರಕಲಗೂಡು : ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮರಿಯಾನಗರ ಗ್ರಾಮದಲ್ಲಿ ಫೆ.28 ಸೋಮವಾರ ” ಸಂತ ಮೇರಿಸ್ ಚರ್ಚ್ ” ನೂತನ ದೇವಾಲಯ ಉದ್ಘಾಟನೆಗೊಂಡಿತು ., ಈ ದೇವಾಲಯದ ಉದ್ಘಾಟನೆಯನ್ನು ಚಿಕ್ಕಮಗಳೂರಿನ ಕಥೋಲಿಕ ಕ್ರೈಸ್ತ ಧರ್ಮಕ್ಷೇತ್ರದ ಬಿಷಪ್ ಅಂತೋಣಿ ಸ್ವಾಮಿ ಉದ್ಘಾಟಿಸಿದರು ,

ಹಾಸನ ತಾ. ನ ಗೊರೂರು ಹೇಮಾವತಿ ಜಲಾಶಯದ ಅಂದಿನ ಮುಳುಗಡೆ ಪ್ರದೇಶದ ಶೆಟ್ಟಿಹಳ್ಳಿಯ ಕ್ರೈಸ್ತ ಬಾಂಧವರ ನಿರಾಶ್ರಿತರ ಗ್ರಾಮಗಳಲ್ಲಿ ಒಂದಾದ ‘ ಮರಿಯಾ ನಗರ ‘ ಮೂಲತಃ ರೈತರು ಹಾಗೂ ದೇಶಕ್ಕೆ ಹಲವು ಯೋಧರ ಕಾಣಿಕೆ ನೀಡಿದ ಗ್ರಾಮವಿದು ., ಸದ್ಯ ಈ ಗ್ರಾಮದ ಈ ದೇವಾಲಯದಲ್ಲಿ ಫಾ ಪೌಲ್ ಡಿಸೋಜ ಪ್ರಧಾನ ಗುರುಗಳಾಗಿದ್ದರೆ , ಸಹಾಯಕ ಗುರುಗಳಾಗಿ ಫಾ.ಸಿಲ್ವೆಸ್ಟರ್ ಅವರು ಸೇವೆ ಸಲ್ಲಿಸುತ್ತಿದ್ದಾರೆ .

LEAVE A REPLY

Please enter your comment!
Please enter your name here