ಹೇಮಾವತಿ ಡ್ಯಾಂ ಪಂಪ್‌ಹೌಸ್‌ನಲ್ಲಿ 50 ಅಡಿಯಿಂದ ಬಿದ್ದು ಆಪರೇಟರ್ ಒರ್ವ ಸಾವು ; ಒಂದು ಕೋಟಿ ರೂ. ಪರಿಹಾರ ನೀಡಬೇಕು ( ಕುಟುಂಬ )

0

ಹಾಸನ / ಗೊರೂರು : ನಿನ್ನೆ ಗುರುವಾರ ಬೆಳಗ್ಗೆ ಎಂದಿನಂತೆ ಸುಮಾರು 50 ಅಡಿ ಎತ್ತರದ ಪಂಪ್‌ಹೌಸ್‌ನ ಚಾವಣಿಯ ಶೀಟ್ ಸರಿ ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಸುರೇಶ್ ಸೇಫ್ ಬೆಲ್ಟ್ ಧರಿಸಿರಲಿಲ್ಲ ಎನ್ನುವುದಕ್ಕಿಂತ

ಕಂಪನಿಯವರು ಮುಂಜಾಗ್ರತೆ ವಹಿಸಿರಲಿಲ್ಲ. ಈ ನಿರ್ಲಕ್ಷ್ಯದಿಂದ ಎತ್ತರದಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ ., ಹಾಸನದ ಗೊರೂರು ಹೇಮಾವತಿ ಡ್ಯಾಂ ವ್ಯಾಪ್ತಿಯಲ್ಲಿರುವ ಜಲ ವಿದ್ಯುತ್‌ ಉತ್ಪಾದನಾ ಪಂಪ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸೀನಿಯರ್ ಆಪರೇಟ‌ರ್ ಆಯತಪ್ಪಿಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.

ಇವರು ಸಮೀಪದ ಬ್ಯಾಡರಹಳ್ಳಿ ಗ್ರಾಮದ ಸುರೇಶ್ (53) ಮೃತರು. ಕಳೆದ 25 ವರ್ಷಗಳಿಂದ ಗ್ರೀನ್ ಕೋ ಕಂಪನಿಯಲ್ಲಿ ಸುರೇಶ್ ಸೀನಿಯರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ಪತ್ನಿ ಅಥವಾ ಪುತ್ರನಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಕುಟುಂಬದವರು ಶವವಿಟ್ಟು ಸಂಜೆವರೆಗೂ ಧರಣಿ ನಡೆಸಿದರು.

ಕಂಪನಿ ಮುಖ್ಯಸ್ಥರೊಂದಿಗೆ ಮಾತುಕತೆ ಮುಂದುವರಿದಿತ್ತು. ಗೊರೂರು ಠಾಣೆ ಎಸ್‌ಐ ಅಜಯ್‌ ಮತ್ತು ಪೊಲೀಸರು ಸ್ಥಳದಲ್ಲೇ ಇದ್ದರು .ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here