AEE ರಾಮಕೃಷ್ಣಗೆ ACB ಬಿಸಿ
ಮನೆಯಲ್ಲಿ ಬೆಳಗ್ಗೆಯಿಂದ ಶೋಧ
ಹಾಸನ: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಹಾಸನದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ರಾಮಕೃಷ್ಣ ಅವರ ಮನೆ ಮೇಲೆ ಮುಂಜಾನೆ ACB ತಂಡ ದಾಳಿ ನಡೆಸಿದೆ.
ರಾಮಕೃಷ್ಣ ಅವರಿಗೆ ಸೇರಿದ ನಗರದ ವಿದ್ಯಾನಗರದಲ್ಲಿರುವ ನಿವಾಸ, ಹಿರೀಸಾವೆ ನಿವಾಸ ಹಾಗೂ ಕುವೆಂಪುನಗರದಲ್ಲಿರುವ ಕಚೇರಿ ಸೇರಿದಂತೆ ಮೂರು ಕಡೆ ದಾಳಿ ನಡೆಸಿರುವ ACB ಅಧಿಕಾರಿಗಳ ತಂಡ, ಕಡತ ಪರಿಶೀಲನೆ ಹಾಗೂ ಆಸ್ತಿ ಸಂಪಾದನೆ ಹುಡುಕಾಟದಲ್ಲಿ ತೊಡಗಿದೆ.
ಎಸಿಬಿ ಡಿವೈಎಸ್ಪಿ ಸತೀಶ್ ನೇತೃತ್ವದಲ್ಲಿ ಮೂರು ಕಡೆ ದಾಳಿ
ನಡೆಸಿ ಎಲ್ಲಾ ಕಡೆ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.
ಬೆಳಗ್ಗೆಯಿಂದ
ಮಧ್ಯಾಹ್ನ ನಂತರವೂ ACB ತಪಾಸಣೆ ಮುಂದುವರಿದಿದೆ.
ರಾಮಕೃಷ್ಣ ಅವರಿಗೆ ಸೇರಿದ ವಿದ್ಯಾನಗರದ ಮನೆಯಲ್ಲಿ ಶೋಧ
ಶೋಧ ಮುಂದುವರಿಸಿರುವ ತಂಡ, ಮನೆಗೇ ತಿಂಡಿ ಮತ್ತು ಊಟ ತರಿಸಿಕೊಂಡು ತನಿಖಾ ಕಾರ್ಯ ಮುಂದುವರಿದಿದೆ. ವಿಚಾರಣೆ ವೇಳೆ ರಾಮಕೃಷ್ಣ ಅವರನ್ನು ಮನೆಯಲ್ಲೇ ಲಾಕ್ ಮಾಡಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಎಸಿಬಿ ಎಸ್ಪಿ ಸಚಿತ್ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.
acbkarnataka acbhassan hassan hassannews