ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಸಂಚಾರಿ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿಯನ್ನು ಗೃಹಸಚಿವ ಅರಗ ಜ್ನಾನೇಂದ್ರ ಅವರು ಪರಿಶೀಲಿಸಿದರು ., ಚನ್ನರಾಯಪಟ್ಟಣ: ರಾಜ್ಯದಲ್ಲಿ ₹200 ಕೋಟಿ ವೆಚ್ಚದಲ್ಲಿ 100 ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುವುದು., ₹1ಸಾವಿರ ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ನಿಗಮದ ವತಿಯಿಂದ ಪೊಲೀಸ್ ಸಿಬ್ಬಂದಿಗೆ ಗೃಹ ನಿರ್ಮಾಣ ಮಾಡಲಾಗುವುದು. ಈಗಾಗಲೇ ₹600 ಕೋಟಿ ಬಿಡುಗಡೆ ಮಾಡಲಾಗಿದೆ. ಅಗ್ನಿ ಶಾಮಕ ಠಾಣೆ ಹಾಗೂ ಸಿಬ್ಬಂದಿಗೆ ಮನೆ ನಿರ್ಮಿಸಲಾಗುವುದು ., ಅಗ್ನಿಪಥ್ ಯೋಜನೆ ಬಹಳ ಉತ್ತಮವಾದ ಯೋಜನೆಯಾಗಿದೆ. 23 ವರ್ಷದವರೆಗಿನ ಯುವಕರ ನೇಮಕಾತಿ ನಡೆಯಲಿದೆ. ಇವರಿಗೆ ₹45 ಸಾವಿರ ಸಂಬಳ ಸೇರಿದಂತೆ ನಾಲ್ಕು ವರ್ಷ ಪೂರೈಸಿದ ನಂತರ ₹12 ಲಕ್ಷ ಹಣವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ₹1 ಕೋಟಿ ವಿಮೆಯನ್ನು ಸಹಪ್ರತಿ ಅಭ್ಯರ್ಥಿ ಹೆಸರಲ್ಲಿ ಮಾಡಲಾಗುತ್ತಿದೆ. ಸೈನ್ಯ ವೃತ್ತಿಯಿಂದ ಬಿಡುಗಡೆ ಯಾದ ನಂತರ ಪೊಲೀಸ್ ಇಲಾಖೆಯಲ್ಲಿ ಶೇ 10 ರಷ್ಟು ಮೀಸಲಾತಿ, ಅಗ್ನಿಶಾಮಕ ದಳದಲ್ಲಿ ಶೇ 50 ರಷ್ಟು ಮಿಸಲಾತಿ ನೀಡಲು ಚಿಂತನೆ ಇದೆ ಎಂದರು.
ಸೈನ್ಯಕ್ಕೆ ಕೇಂದ್ರ ಸರ್ಕಾರ ಪ್ರತಿವರ್ಷ ₹5 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ. ಕೇವಲ ಪಿಂಚಣಿಗಾಗಿ ₹1.25 ಲಕ್ಷ ಕೋಟಿ ವ್ಯಯ ಮಾಡಲಾಗುತ್ತಿದೆ. ಇದನ್ನು ಸರಿದೂಗಿಸಲು ಅಗ್ನಿಪಥ್ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಸೈನಿಕರ ನಿವೃತ್ತಿ ವಯಸ್ಸನ್ನು 32 ರಿಂದ 25ವರ್ಷಕ್ಕೆ ಇಳಿಸುವ ಚಿಂತನೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಾಸಕರಾದ ಶ್ರೀ ಸಿ.ಎನ್.ಬಾಲಕೃಷ್ಣ, ಜಿಲ್ಲಾ ಪೊಲೀಸ್ ಮುಖ್ಯಸ್ಥ ಶ್ರೀ ಶ್ರೀನಿವಾಸ ಗೌಡ, ಇತರೆ ಅಧಿಕಾರಿಗಳು ಚನ್ನರಾಯಪಟ್ಟಣ ದಲ್ಲಿ ಇದ್ದರೆ , ಹಾಸನ ನಗರದಲ್ಲಿ ಶಾಸಕ ಪ್ರೀತಂ ಗೌಡ, ಜಿಲ್ಲಾ ಪೊಲೀ ಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎನ್. ನಂದಿನಿ, ನಗರಸಭೆ ಅಧ್ಯಕ್ಷ ಮೋಹನ್ ಹಾಜರಿದ್ದರು. ಉಪಸ್ಥಿತರಿದ್ದರು.
Karnataka Homeminister Inspected the under construction Traffic police station at Channarayapattana in Hassan district today. MLA Shri CN Balakrishna , MLA Preetham j gowda and officials were present.