ಅರಸೀಕೆರೆ-ತುಮಕೂರು ಪ್ಯಾಸೆಂಜರ್ ರೈಲು ಸಂಚಾರದಿಂದ ಬೆಂಗಳೂರಿಗೆ ತೆರಳಲು ಕಡಿಮೆ ಅಂತರ

0

ಅರಸೀಕೆರೆ – ತುಮಕೂರು ಪ್ಯಾಸೆಂಜರ್ ರೈಲು ಸೇವೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದ್ದು, ಇದರಿಂದ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ, ಉದ್ಯೋಗಿಗಳಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ., ಅಲ್ಲದೇ 758 ಕೋಟಿ ರೂ. ವೆಚ್ಚದಲ್ಲಿ ಅರಸೀಕೆರೆ – ತುಮಕೂರು ನಡುವಿನ 96 ಕಿ.ಮೀ. ರೈಲ್ವೆ ವಿಭಾಗಗಳ ಜೋಡಿ ಮಾರ್ಗಗಳನ್ನು ಕೆಲವೇ ವರ್ಷಗಳಲ್ಲಿ ಮಾಡುವ ಮೂಲಕ ಅತಿ ಶೀಘ್ರವಾಗಿ ರಾಜಧಾನಿಗೆ ತೆರಳಲು ಅನುಕೂಲವಾಗಲಿದೆ.,

ಇಲ್ಲೊಂದು ಸ್ಥಳೀಯರ ಮನವಿ ಏನೆಂದರೆ : ಸ್ಟೇಷನ್ ಒಳಭಾಗದಲ್ಲಿ ನಿರ್ಮಾಣದ ಹಂತದಲ್ಲಿರುವ ಲಿಫ್ಟ್ ಅತಿ ಬೇಗನೆ ಚಾಲನೆ ಮಾಡಲಿ, 2 ನೇ ಮತ್ತು 3ನೇ ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರಿಗೆ ಕೂರಲು ಸಮಗ್ರ ಆಸನ ವ್ಯವಸ್ಥೆ ಮಾಡುವಂತೆ, ಎಸ್ಕಲೇಟರ್ ನ ಅಳವಡಿಕೆ ಮಾಡುವಂತೆ ರೈಲ್ವೆ ADRM ಗೆ ಈ ಮೂಲಕ ಮನವಿ

” ರಸ್ತೆ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಅನುಕೂಲಕರ ಹಾಗೂ ಮಿತವ್ಯಯಕಾರಿ ಸಾರಿಗೆಗೆ, ಅಂತರ್ ನಗರ ಸಂಪರ್ಕವನ್ನು ಉತ್ತಮಗೊಳಿಸಲು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ” – (ರೈಲ್ವೆ ADRM) ಬಿ. ಶ್ರೀನಿವಾಸಲು

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಿ ಗಿರೀಶ್, ಸದಸ್ಯರಾದ ರಮೇಶ್‌ ನಾಯ್ಡು, ಈಶ್ವರಪ್ಪ, ಮೇಲಗಿರಿಗೌಡ, ಎಸಿಎಂ ರಂಗನಾಥರೆಡ್ಡಿ, ಡಿಇಎನ್ ಭರತ್ ತಿವಾರಿ, ಸ್ಟೇಷನ್ ಮಾಸ್ಟರ್ ಪ್ರಭಾತ್‌ಕುಮಾರ್ ಸಿಂಗ್‌ ಇತರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here