ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ ಶಿಷ್ಟಾಚಾರದ ದರ್ಶನದ (Protocol system) ವ್ಯವಸ್ಥೆ ಮತ್ತು ಗಣ್ಯರ(VVIP) ಗರ್ಭಗುಡಿ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ. , ಧರ್ಮದರ್ಶನದ ಸಾಲಿನಲ್ಲಿ ಹೆಚ್ಚಿನ ಭಕ್ತರು ಬರುತ್ತಿರುವುದರಿಂದ ಭದ್ರತೆ ಮತ್ತು
ಸುರಕ್ಷತಾ ಹಿತದೃಷ್ಟಿಯಿಂದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಎಲ್ಲಾ ಶಿಷ್ಟಾಚಾರದ ದರ್ಶನದ ವ್ಯವಸ್ಥೆಯನ್ನು ಅಂತ್ಯಗೊಳಸಲಾಗಿ ಆದೇಶಿಸಿದೆ . ದೇವಸ್ಥಾನದ ಗರ್ಭಗುಡಿಗೆ ದೇವಾಲಯದ ಅರ್ಚಕರನ್ನು ಹೊರತುಪಡಿಸಿ ಬೇರೆಯವರು ಗರ್ಭಗುಡಿ ಪ್ರದೇಶವನ್ನು
ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ( ಈ ವಿಷಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಯಾಗುತ್ತಲೇ ಇತ್ತು ) , ಹಾಸನಾಂಬೆ ದರ್ಶನದ ವೇಳೆ ಭಕ್ತರಿಗೆ ಕರೆಂಟ್ ಶಾಕ್ ಆಗಿ ನೂಕು ನುಗ್ಗಲು ಪ್ರಕರಣ ಕರುನಾಡಿನಾದ್ಯಂತ ಬಾರಿ ಚರ್ಚೆಯಾಗಿತ್ತು
ಘಟನೆ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಾಗೂ
ದೇವಾಲಯ ಆಡಳಿತ ಮಂಡಳಿ
ಈ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಶಿಷ್ಟಾಚಾರ ದರ್ಶನ ಅಂತ್ಯ ಗೊಳಿಸಿ ಆದೇಶಿಸಿದೆ., ದೇವಾಲಯ ಆಡಳಿತ ಮಂಡಳಿ ಮತ್ತು ಅರ್ಚಕರು ಹೊರತಪಡಿಸಿ ಗರ್ಭಗುಡಿಗೆ ಅನ್ಯ ವ್ಯಕ್ತಿಗಳ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿರುತ್ತದೆ ., ಶಿಷ್ಟಾಚಾರ ದರ್ಶನ ಅಂತ್ಯ ಹಾಗೂ
ಗರ್ಭಗುಡಿ ಪ್ರವೇಶ ನಿರ್ಬಂಧ ಮಾಡಿ ಆಡಳಿತಾಧಿಕಾರಿ ಆದೇಶಿಸಿರೋದು ಸದ್ಯದ ವಿವಿಐಪಿ ಗಳಿಗಷ್ಟೇ ಶಾಕ್ , ಹಾಸನಾಂಬೆ ದೇವಾಲಯ ಆಡಳಿತಾಧಿಕಾರಿ ಹಾಗೂ ಹಾಸನ ಉಪ ವಿಭಾಗಾದಿಕಾರಿ ಮಾರುತಿ ಆದೇಶಿಸಿ ಪ್ರಕಟಣೆ ಹೊರಡಿಸಿದೆ ., ಹಾಸನಾಂಬೆ ದರ್ಶನ ಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತ ದಂಡೇ ಬರುತ್ತಿರುವುದರಿಂದ ಈ ಹಿನ್ನೆಲೆಯಲ್ಲಿ
ಕಠಿಣ ಕ್ರಮ ಕೈಗೊಂಡ ಜಿಲ್ಲಾಡಳಿತವು ಶಿಷ್ಟಾಚಾರ ದರ್ಶನದಿಂದ ಸಾಮಾನ್ಯ ಭಕ್ತರ ದರ್ಶನ ವಿಳಂಬದ ಬಗ್ಗೆ ಆರೋಪವಿತ್ತು , ಗರ್ಭಗುಡಿ ದರ್ಶನದಿಂದ ಸರತಿ ಸಾಲಿನಲ್ಲಿ ನಿಲ್ಲೊ ಭಕ್ತರ ದರ್ಶನಕ್ಕೆ ಸಮಸ್ಯೆ ಹಿನ್ನೆಲೆಯಲ್ಲಿ ಜನಸ್ನೇಹಿ ಖಡಕ್ ನಿರ್ಧಾರ ಕೈಗೊಂಡ ಆಡಳಿತಾಧಿಕಾರಿ ಆದೇಶಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ., ಉಸ್ತುವಾರಿ ಸಚಿವರ ಸಭೆ ಬಳಿಕ ಆದೇಶ ಮಾಡಿದ ಆಡಳಿತಾಧಿಕಾರಿ ಆದೇಶ , ಇಂದು ಸಾರ್ವಜನಿಕ ಭಕ್ತರ ದರ್ಶನದ ವೇಳೆ ವಿದ್ಯುತ್ ಶಾಕ್ ನಿಂದ ,
ಅವಘಡದಿಂದ 17 ಜನರು ಅಸ್ವಸ್ಥ ಹಿನ್ನೆಲೆಯಲ್ಲಿ ತಕ್ಷಣವಾಗಿ ಜಾರಿ ಬರುವಂತೆ ಹಲವು ಕ್ರಮ ಕೈಕೊಂಡ ಅಧಿಕಾರಿಗಳು ಇನ್ನೂ ನಾಲ್ಕೈದು ದಿನ ಬಾಕಿ ಇರೋ ಹಾಸನಾಂಬೆ ದರ್ಶನೋತ್ಸವ
ದೀಪಾವಳಿ ರಜೆ ದಿನಗಳು ಆರಂಭ ಹಿನ್ನೆಲೆಯಲ್ಲಿ ಮಗದಷ್ಟು ಭಕ್ತರ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಆಗೋದರಲ್ಲಿ ಡೌಟೇ ಇಲ್ಲ. ಹಾಗೂ
ಈ ಮುನ್ಸೂಚನೆ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಂಡಿರೋದು ಬಹುತೇಕ ಸ್ವಾಗತಾರ್ಹ… ಎನ್ನಲಾಗಿದೆ.