ಅಂತರ್ಜಲ ಸಂಪನ್ಮೂಲ ಮೌಲೀಕರಣ ಅನುಸಾರ ಕರ್ನಾಟಕದ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಅಧಿಸೂಚನೆ ಸಂಖ್ಯೆ: ಸನೀಇ/09/ ಅಜ/2015 ಮೇ.5ರ ಪ್ರಕಾರ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕನ್ನು ಅಂತರ್ಜಲ ಅತೀ ಬಳಕೆ ತಾಲ್ಲೂಕೆಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ ಜಿಲ್ಲಯೆ ಅಧಿಸೂಚಿತ ಪ್ರದೇಶದಲ್ಲಿ (ಅರಸೀಕೆರೆ ತಾಲ್ಲೂಕಿನಲ್ಲಿ) ಅಂತರ್ಜಲದ ಬಳಕೆಗೆ ಬಳಸುವ ಕೊಳವೆ ಬಾವಿ/ತೆರೆದ ಬಾವಿಗಳನ್ನು ಜಿಲ್ಲಾ ಅಂತರ್ಜಲ ಪ್ರಾಧಿಕಾರದಡಿಯಲ್ಲಿ ನೊಂದಣಿ ಮಾಡಿಸುವುದು ಮತ್ತು ಹೊಸದಾಗಿ ಕೊಳವೆ ಬಾವಿ/ತೆರೆದ ಬಾವಿಗಳನ್ನು ಕೊರೆಯಲು ಇಚ್ಚಿಸುವವರು ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಈಗಾಗಲೇ ಅರಸೀಕೆರೆ ತಾಲ್ಲೂಕಿನಲ್ಲಿ ಕೊಳವೆ/ತೆರೆದ ಬಾವಿಗಳನ್ನು ಹೊಂದಿರುವವರು ಪ್ರಾಧಿಕಾರಕ್ಕೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ನೊಂದಣಿ ಮಾಡಿಸಿಕೊಳ್ಳಬೇಕು ಮತ್ತು ಹೊಸದಾಗಿ ಕೊಳವೆ/ತೆರೆದ ಬಾವಿಗಳನ್ನು ಕೊರೆಯಲು ಇಚ್ಚಿಸುವವರು ಪ್ರಾಧಿಕಾರಕ್ಕೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ಅನುಮತಿ ಪಡೆಯಬೇಕು.
ರಾಷ್ಟ್ರೀಯ ಹಸಿರು ಪ್ರಾಧಿಕಾರದ ಕಾನೂನಿನ ಪ್ರಕಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ವಾಣಿಜ್ಯ ಬಳಕೆ ಉದ್ದೇಶಕ್ಕೆ ಕೊಳವೆ/ತೆರೆದ ಬಾವಿಗಳನ್ನು ಕೊರೆಸಲು ಜಿಲ್ಲಾ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿರುತ್ತದೆ. ತಪ್ಪಿದ್ದಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಮಿತಿ ಸೂಚಿಸಿದೆ.
ಅರ್ಜಿಗಳನ್ನು ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ಅಂತರ್ಜಲ ನಿರ್ದೇಶನಾಲಯ, ಹಾಸನ ಇಲ್ಲಿಂದ ಅಥವಾ www.antharjala.kar.nic.in ವೆಬ್ಸೈಟಿನಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಭೂವಿಜ್ಞಾನಿ ಇವರಿಗೆ ಸಲ್ಲಿಸಬಹುದಾಗಿದೆ.
ಕೊಳವೆ ಬಾವಿ ಕೊರೆಯುವ ಯಂತ್ರಗಳನ್ನು ಸಹ ಕರ್ನಾಟಕ ಅಂತರ್ಜಲ ಪ್ರಾಧಿಕಾರದಡಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ಜಿಲ್ಲಾ ಅಂತರ್ಜಲ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ರಿಗ್ ಯಂತ್ರಗಳನ್ನು ನೊಂದಾಯಿಸಿಕೊಳ್ಳಲು ಎಲ್ಲಾ ರಿಗ್ ಮಾಲೀಕರಿಗೆ ಸೂಚಿಸಿದೆ.
ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳದೆ ಕೊಳವೆ ಬಾವಿ ಕೊರೆಯುತ್ತಿರುವ ಯಂತ್ರಗಳನ್ನು ನಿಯಮಗಳ ಪ್ರಕಾರ ಜಪ್ತಿ ಮಾಡಿ ಅಂತಹ ರಿಗ್ ಮಾಲೀಕರು ಮತ್ತು ಏಜೆನ್ಸಿಗಳ ಮೇಲೆ ಕೇಸ್ ದಾಖಲು ಮಾಡಲಾಗುವುದು ಎಂದು ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಸಮಿತಿಯು ಅಭಿಪ್ರಾಯಪಟ್ಟಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ಅಂತರ್ಜಲ ನಿರ್ದೇಶನಾಲಯ, ಎಮ್.ಐ.ಜಿ-71 ಕುವೆಂಪುನಗರ, ಹಾಸನ-573201 ಇವರನ್ನು ಸಂಪರ್ಕಿಸಬಹುದಾಗಿದೆ. ಕಚೇರಿ ದೂರವಾಣಿ ಸಂಖ್ಯೆ: 08172-295729, E-mail ID: gws.hsn@gmail.com