ಅರಸೀಕೆರೆ ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ ಕೊಲೆಯಾದ ವ್ಯಕ್ತಿಯ ಗುರತು ಪತ್ತೆ

0

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಚಿಕ್ಕೊಂಡನಹಳ್ಳಿ ಬಳಿ ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ

ಕೊಲೆಯಾದ ಯುವಕನ ಗುರುತು ಪತ್ತೆ , ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಗ್ರಾಮದ ಸುಮೇಶ್(30) ಕೊಲೆಯಾದ ಯುವಕ , ಶುಕ್ರವಾರ ರಾತ್ರಿ ಊಟಮಾಡಿ 8 ಗಂಟೆಗೆ ಮನೆಯಿಂದ ಹೋಗಿದ್ದ ಸುಮೇಶ್ , ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು , ಮದುವೆಗಾಗಿ ಹುಡುಗಿ ಹುಡುಕಾಟದಲ್ಲಿ ತೊಡಗಿದ್ದ ಸುಮೇಶ್

ಇದೇ ವಿಚಾರಕ್ಕೆ ಎಲ್ಲೋ ಹೋಗಿರಬಹುದು ಎಂದುಕೊಂಡಿದ್ದ ಸುಮೇಶ್ ಪೋಷಕರು

ಕಣಕಟ್ಟೆಯಲ್ಲಿ ಭೀಕರ ಹತ್ಯೆ !,
ಸುಮೇಶ್ (35)  ಬಿನ್ ಗುರುಮೂರ್ತಿ ಇವರ ಮಗ.ಹತ್ಯೆಯಾದ ದುರ್ದೈವಿ… ಶುಕ್ರವಾರ  ರಾತ್ರಿ 8 ಗಂಟೆ ಸಮಯದಲ್ಲಿ ಮೃತಪಟ್ಟ ಸುಮೇಶ್  ಯಾರೊ ಕರೆ ಮಾಡಿ ಕರೆದು ಈ ಕೃತ್ಯ  ಮಾಡಿರುತ್ತಾರೆ ಎಂದು ಮೃತರ ತಾಯಿ ಶಾರದಮ್ಮ  ಪೋಲೀಸರಿಗೆ ಹೇಳಿಕೆ ಕೊಟ್ಟಿರುತ್ತಾರೆ.ನಂತರ 8:30 ರ ಸಮಯದಲ್ಲಿ ಮೃತ ಸುಮೇಶನಿಗೆ ಮನೆಗೆ ಬರಲು ಅವರ ತಾಯಿ ತಿಳಿಸಿದಾಗ ದಿಬ್ಬೂರಿನಲ್ಲಿ ಇದ್ದೇನೆ ಬರುತ್ತೇನೆ ಎಂದು ಹೇಳಿರುತ್ತಾನೆ. ನಂತರ 9 ರ ಸಮಯದಲ್ಲಿ ಪೋನ್ ಕಾಲ್ ಗೆ ಸಿಗುವುದಿಲ್ಲ. ಅವರ ತಮ್ಮನ ಮನೆ ತಿಪಟೂರಿಗೆ ಹೋಗಿರುತ್ತಾನೆ‌ ಎಂದು ಸುಮ್ಮನಾಗಿದ್ದಾರೆ.  ಮೃತ ಸುಮೇಶ ದನದ ವ್ಯಾಪಾರ ಮಾಡುತ್ತಿದ್ದು, ಆದರೆ ಅದೇ ದಿನ ರಾತ್ರಿ ಅವರ ಹತ್ಯೆ ಆಗಿರುತ್ತದೆ. ದಿಬ್ಬೂರು- ಚಿಕ್ಕೊಂಡಿ ಹಳ್ಳಿ ನಡುವಿನ ಬಾರೆಯ ಜಮೀನೊಂದರಲ್ಲಿ  ಬರ್ಬರವಾಗಿ ಕೊಲೆ ಮಾಡಿ ಸ್ಥಳದಲ್ಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದು ಶನಿವಾರ ಸಂಜೆ ಬಯಲಾಗಿದೆ. ಮಾಡಾಳು ಗ್ರಾಮದ ಶಿವರುದ್ರಪ್ಪ- ಚಂದ್ರಪ್ಪ ಎಂಬುವವರ ಜಮೀನಿನ ದಾರಿಯಲ್ಲಿ ಈ ಅಮಾನುಷ ಕೃತ್ಯ ನಡೆದಿದೆ. ಇದುವರಿಗೆ ಈ ಸುತ್ತಮುತ್ತಲು ಈ ರೀತಿ ಕೃತ್ಯ ನಡೆದಿರಲಿಲ್ಲ. ಕೊಲೆಯಾದ ವ್ಯಕ್ತಿ ನಮ್ಮೂರ 5.9 ಅಡಿ ಆಳಾಗಿದ್ದು ಕಟ್ಟು ಮಸ್ತಾಗಿದ್ದು ಇವನನ್ನು ಹತ್ಯೆ ಮಾಡಲು ಸುಮಾರು 3 ರಿಂದ 4  ಜನ ಸೇರಿರಬಹುದು. ಮೃತರ ಬೈಕನ್ನು ಕೊಲೆಯಾದ ಜಾಗದಿಂದ 3 ಕೀ ದೂರದಲ್ಲಿ ತಂದು ಹಾಕಿರುತ್ತಾರೆ. ಸ್ಥಳಕ್ಕೆ ಬಾಣಾವರ ಆರಕ್ಷಕ ಠಾಣೆಯ ಸಬ್ ಇನ್ ಸ್ಪೆಕ್ಟರ್ ,  ಭಾರತಿ ರೇವಣ್ಣೀಗೌಡ.ಅರಸೀಕೆರೆ ಸರ್ಕಲ್ ಇನ್ ಸ್ಪೆಕ್ಟರ್ ವಸಂತಕುಮಾರ್  ಹಾಗೂ ಕಣಕಟ್ಡೆಯ ಆರಕ್ಷಕ ಠಾಣೆಯ ಮುಖ್ಯ ಪೇದೆ ಚಿಕ್ಕಣ್ಣ  ಸಿಬ್ಬಂಧಿಗಳು ಹಾಜರಿದ್ದು.ಪ್ರಕರಣ ದಾಖಲಾಗಿದೆ ತನಿಖೆ ಯಿಂದ ಈ ಕೃತ್ಯ ಎಸಗಿದವರನ್ನು ಪತ್ತೆ ಮಾಡಬೇಕಾಗೆದೆ  ಮನೆಯಲ್ಲಿ ವಯಸ್ಸಾದ ತಂದೆ ತಾಯಿಗಳು ದುಡಿಯುವ ಮಗನ ಈ ರೀತಿಯ ಸ್ಥಿತಿ ಕಂಡು ಮನ ಕಲಕುವಂತಿತ್ತು. ಸರಿಯಾದ ತನಿಖೆಯಾಗಿ ಮೃತನ ಆತ್ಮಕ್ಕೆ ಶ ನ್ಯಾಯ ದೊರಕಲಿ ಎಂದು ಗ್ರಾಮಸ್ಥರು ಆಗ್ರಹಿದ್ದಾರೆ

• ಮೃತದೇಹದ ಕೈಯಲ್ಲಿದ್ದ ಉಂಗುರ ಕೈ ಕಡಗದಿಂದ ಗುರುತು ಪತ್ತೆ , ಮೃತದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರು , ಮೃತದೇಹದ ಗುರುತು ಪತ್ತೆಯಾಗುತ್ತಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು , ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಮೃತದೇಹ ಹಸ್ತಾಂತರ , ಬಾಣಾವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು #crimedairyhassan #arsikerepolice #arsikere

LEAVE A REPLY

Please enter your comment!
Please enter your name here