ರಸ್ತೆಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಟೀ ಅಂಗಡಿ ಮಾಲೀಕ ಲಕ್ಷ್ಮಣ್
ಸಕಲೇಶಪುರ: ರಸ್ತೆಯಲ್ಲಿ ವ್ಯಕ್ತಿಯೋರ್ವರು ಅಕಸ್ಮಿಕವಾಗಿ ತನ್ನ ಅತ್ಯಮೂಲ್ಯ ಮೊತ್ತ ಬೀಳಿಸಿಕೊಂಡು ಹೋಗಿದ್ದ ಹಣ ಹಾಗೂ ಬ್ಯಾಂಕ್ ಪಾಸ್ ಬುಕ್ ಗಳನ್ನು ಟೀ ಅಂಗಡಿ ಮಾಲಿಕರೊರ್ವರು ನೈಜ ಮಾಲಿಕರಿಗೆ ಗುರ್ತಿಸಿ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಟ್ಟಣದ BM ರಸ್ತೆಯಲ್ಲಿರುವ ಲಕ್ಷ್ಮಣ್ ಎಂಬುವರ ಟೀ ಅಂಗಡಿ ಸಮೀಪ ಇದೇ ತಿಂಗಳ 23 ರಂದು ಮಳಲಿ ಗ್ರಾಮದ ವಸಂತ್ ಕುಮಾರ್ ಎನ್ನುವ ವೃದ್ದರೊರ್ವರು 5000ರೂ ನಗದು ಹಾಗೂ ಬ್ಯಾಂಕ್ ಪಾಸ್ ಬುಕ್ ಗಳನ್ನು ಬೀಳಿಸಿಕೊಂಡು ಹೋಗಿದ್ದರು , ಹಣ ಪಾಸ್ ಬುಕ್ ಕಳೆದು ಕೊಂಡಿದ್ದ ವೃದ್ದ ಚಿಂತಾಕ್ರಾಂತರಾಗಿದ್ದರು. ಬ್ಯಾಂಕ್ ಪಾಸ್ ಬುಕ್ ನಲ್ಲಿ ವಸಂತ್ ಕುಮಾರ್ ರವರ ದೂರವಾಣಿ ಸಂಖ್ಯೆ ಇರದ ಕಾರಣ ಲಕ್ಷ್ಮಣ್ ಪಾಸ್ ಬುಕ್ ದಾಖಲಾತಿಗಳನ್ನು ಕೆಲವು ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ವಾಟ್ಸಪ್ ಗ್ರೂಪ್ ಒಂದರಲ್ಲಿ ನೋಡಿದ ವ್ಯಕ್ತಿಯೋರ್ವರು ಗುರ್ತಿಸಿ ವಸಂತ್ ಕುಮಾರ್ ರವರ ಮಗನಿಗೆ ವಿಷಯ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೇ ಜೂನ್ 27 ಸೋಮವಾರ ಲಕ್ಷ್ಮಣ್ ರವರ ಅಂಗಡಿಗೆ ಆಗಮಿಸಿದ ವಸಂತ್ ಕುಮಾರ್ ರವವರಿಗೆ ಲಕ್ಷ್ಮಣ್ ರವರು ಬೀಳಿಸಿಕೊಂಡಿದ್ದ 5000ರೂಗಳು ಹಾಗೂ ಪಾಸ್ ಬುಕ್ ಹಿಂತಿರುಗಿಸುವ ಮುಖಾಂತರ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಸಂತ್ ಕುಮಾರ್ ರವರ ಕುಟುಂಬ ಹಾಗೂ ಸಾರ್ವಜನಿಕರು ಟೀ ಅಂಗಡಿ ಮಾಲಿಕ ಲಕ್ಚ್ಮಣ್ ರವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ವರದಿ ಶೇರ್ ಮಾಡುವ ಮೂಲಕ ಇಂತಹ ಒಳ್ಳೆಯ ವಿಷಯ ಶೇರ್ ಮಾಡೋಣ . ಧನ್ಯವಾದಗಳು