ಕೊಣನೂರಿನಿಂದ ಮೈಸೂರಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಪಲ್ಸರ್ ಕ್ಯಾಂಟರ್ ರಸ್ತೆ ಅಪಘಾತ ಬೈಕ್ ಸವಾರ ಸಾವು

0

ಅದಾಗಲೇ ಎಂಜಿನಿಯರ್ ಆಗಿ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕೊಣನೂರಿನಿಂದ ಮೈಸೂರಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಮಲ್ಲಿರಾಜಪಟ್ಟಣ ಸಮೀಪ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ? ,  ಸವಾರನಿಗೆ ತೀವ್ರಗಾಯ ಹಾಗೂ ರಕ್ತಸ್ರಾವ ಉಂಟಾಗಿ ತಕ್ಷಣ ಕೊಣನೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ.

ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ , ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಮಲ್ಲಿರಾಜಪಟ್ಟಣ ಗ್ರಾಮದ ಸಮೀಪದ ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಕೊಣನೂರು ಗ್ರಾಮದ ಕೆ.ಬಿ.ಶ್ರೀನಿಧಿ(25) ಸಾವನ್ನಪ್ಪಿರುವ ಘಟನೆ ಭಾನುವಾರ 22ಜ.2023 ಸಂಜೆ ಸಂಭವಿಸಿದೆ. , ಇಂಜಿನಿಯರಿಂಗ್ ಮಾಡೋದೆ ಕಷ್ಟ , ಅಂತಹದರಲ್ಲಿ

ಕೆಲಸವು ಗಿಟ್ಟಿಸಿಕೊಂಡು ಸುಖವಾಗಿ ಜೀವಿಸಿ ಮನೆಯವರಿಗೆ ಆಧಾರವಾಗ ಬೇಕಿದ್ದ ಸ್ಥಂಭ ಇನ್ನಿಲ್ಲ ,  ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here