ಹಾಸನ : ಸಕಲೇಶಪುರ ತಾಲೂಕಿನ ಮೂರ್ಕಣ್ಣುಗುಡ್ಡ ಕಾಯ್ದಿಟ್ಟ ಅರಣ್ಯ ಪ್ರದೇಶ ಒತ್ತುವರಿ ಆರೋಪ ಹಾಗೂ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಹಿನ್ನೆಲೆ ಸ್ಟೋನ್ ವ್ಯಾಲಿ ರೆಸಾರ್ಟ್‌ಗೆ ಬೀಗ ಜಡಿದು ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗಿದೆ . , ಸ್ಟೋನ್ ವ್ಯಾಲಿ ರೆಸಾರ್ಟ್‌ಗೆ ( stone valley resort , Sakleshpura ) ಬೀಗ ಅರಣ್ಯ ಇಲಾಖೆ ವಶಕ್ಕೆ: ಮಾಲೀಕರ ಮನೆ ಬಂದ್ ಕಾಯ್ದಿಟ್ಟ ಅರಣ್ಯ ಪ್ರದೇಶದ ಅಚ್ಚನಹಳ್ಳಿ ಗ್ರಾಮ ಮೂಲ ಸ.ನಂ.92 ರಲ್ಲಿ 9.36 ಎಕರೆ ಹಾಗೂ ಹೊಸ ಸ.ನಂ.148/1 ರಲ್ಲಿ 3 ಎಕರೆ ಮತ್ತು
148/2 ರಲ್ಲಿ 2 ಎಕರೆ ಸೇರಿ ಒಟ್ಟು 14-36 ಗುಂಟೆ ಅರಣ್ಯ ಪ್ರದೇಶವನ್ನು ಸ್ಟೋನ್ ವ್ಯಾಲಿ ರೆಸಾರ್ಟ್ ಮಾಲೀಕ ಸುಭಾಷ್ – ಸ್ಟೀಫನ್, ಸಂತೋಷ್ ಸ್ಟೀಫನ್, ಡೆಸಿ ಸ್ಟೀಫನ್ ಮತ್ತು ಸ್ಟೀಫನ್ ಕೆ.ಜೆ ಒತ್ತುವರಿ ಮಾಡಿದ್ದರು. ಇವರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963, ಸೆಕ್ಷನ್ 63 (ಎ) ಅಡಿ 14-36 ಎಕರೆ ಒತ್ತುವರಿ ಮಾಡಿರುವುದನ್ನು ತೆರವು ಮಾಡುವಂತೆ 2022 255.26 ಹೊರಡಿಸಲಾಗಿತ್ತು. ರಂದೇ ಆದೇಶ ಏಕೆಂದರೆ ಕಂದಾಯ ಇಲಾಖೆ ಅಧಿಕಾರಿಗಳ ವಿಶ್ಲೇಷಣೆ ಯಂತೆ ಹಾಗೂ
ಕುಮ್ಮಕ್ಕಿನಿಂದ ಮೂರ್ಕಣ್ಣು ಗುಡ್ಡ ಅರಣ್ಯ ಪ್ರದೇಶ 1923 ರಲ್ಲಿಯೇ ಕೈ ಬಿಡಲಾಗಿದೆ. ಪ್ರಸ್ತುತ ಇದು ಅರಣ್ಯವಲ್ಲ, ರೆವಿನ್ಯೂ ಭೂಮಿಯೆಂದು ವಿಶ್ಲೇಷಿಸಿ ಪ್ರತಿಪಾದಿಸಿರುವುದರಿಂದ ರೆಸಾರ್ಟ್ ಮಾಲೀಕ ಸುಭಾಷ್ ಸ್ಟೀಫನ್, ಹೊಸದಾಗಿ ರಸ್ತೆ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದಾಗ ಸದರಿ ಅರಣ್ಯವನ್ನು ನಾಶ ಮಾಡಿ, ಬೆಟ್ಟಗಳನ್ನು ಕಡಿದು ನೆಲ ಸಮತಟ್ಟು ಮಾಡಿ ದೊಡ್ಡ ಗಾತ್ರದ ಮರಗಳನ್ನು ಕಡಿದು 2 ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿರುವುದು ಕಂಡು ಬಂದಿದೆ. ಅಲ್ಲದೆ
3.5 ಕಿಮೀ ರಸ್ತೆ ನಿರ್ಮಾಣ ಮಾಡಿದ್ದು, 5 ಎಕರೆ 19 ಗುಂಟೆಯಷ್ಟು ಅರಣ್ಯ ಪ್ರದೇಶವನ್ನು ಸಮತಟ್ಟು ಮಾಡಿ ಮರ ಗಿಡಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಿರುವುದು ಬಯಲಾಗಿದೆ. ಇದು ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 24 ಹಾಗೂ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಸೆಕ್ಷನ್ 94ಬಿ(1)(III), ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಸೆಕ್ಷನ್ 2 ಮತ್ತು ಸವೋಚ್ಛ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ. , ಈ ಹಿನ್ನೆಲೆಯಲ್ಲಿ ತೆರವಿಗೆ ನೋಟಿಸ್ ನೀಡಿ ದ್ದರೂ ಸ್ಪಂದಿಸದ ಹಿನೆಲೆಯಲ್ಲಿ, ಅನಧಿಕೃತವಾಗಿ ನಿರ್ಮಿಸಲಾಗಿದ್ದ ಸ್ಟೋನ್ ವ್ಯಾಲಿ ರೆಸಾರ್ಟ್‌ನ್ನು ಮಂಗಳವಾರ ಇಲಾಖೆ ಅಧಿಕಾರಿಗಳು ಹಾಗೂ
ಸಿಬ್ಬಂದಿ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಮಂದಿ ನೇತೃತ್ವದಲ್ಲಿ ಮುಚ್ಚಿಸಿ ಬೀಗ ಜಡಿದು ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗಿದೆ. ಡಿಸಿಎಫ್ ವಿಜಿಲೆನ್ಸ್ ಹಾಸನ ಜಾರಿಗೊಳಿಸಿದ ನಡಾವಳಿ ಪ್ರಕಾರ ಕೆಎಫ್‌ಡಿ 64 ಎ ವಶಕ್ಕೆ ತೆಗೆದುಕೊಂಡು ಆದೇಶವನ್ನು ಡಿಸಿಎಫ್ ಹಾಸನ ಇವರ ನಿರ್ದೇಶನದಂತೆ ಜಾರಿಗೊಳಿಸ ಲಾಗಿದೆ ಮತ್ತು
ಎಸಿಎಫ್ ಸಕಲೇಶಪುರ ಅವರು ಎಸಿಎಫ್ ಹಾಸನ ಅವರ ಬೆಂಬಲದೊಂದಿಗೆ ಸಿಬ್ಬಂದಿಯೊಂದಿಗೆ ಕಾರ್ಯಗತಗೊಳಿಸಿದ್ದಾರೆ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ. , ಮೂರ್ಕಣ್ಣು ಗುಡ್ಡ ಅರಣ್ಯ ಪ್ರದೇಶದ ಅಚ್ಚನಹಳ್ಳಿ ಹಾಗೂ ಅಗನಿ ಭಾಗದ ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಇಲಾಖೆ ಅನುಮತಿ ಪಡೆಯದೆ ಕಂದಾಯ ಅಧಿಕಾರಿಗಳಿಂದ ಅನುಮೋದಿಸಿದ 17ಕ್ಕೂ ಹೆಚ್ಚು ರೆಸಾಟ್೯ಗಳು ಹಾಲಿ ಚಾಲ್ತಿಯಲ್ಲಿವೆ. ಅಲ್ಲದೆ
ಸದರಿ ರೆಸಾರ್ಟ್‌ಗಳಿಗೆ ಅನಧಿಕೃತವಾಗಿ ರಸ್ತೆ ಮಾಡಲಾಗಿದೆ. ಇದು ಅರಣ್ಯ ಹಾಗೂ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿರುವುದರಿಂದ ಇದೀಗ ಇವುಗಳಿಗೂ ಬಂದ್ ಆಗುವ ಭೀತಿ ಎದುರಾಗಿದೆ.