ಇದೀಗ ಬಂದ ಸುದ್ದಿ ! , ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು ಹೈವೇ ಯಲ್ಲಿ ಭೀಕರ ರಸ್ತೆ ಅಪಘಾತ , ಅಪಘಾತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಬಳಿ ನಡೆದಿದ್ದು , ಕಿಯಾ ಕಾರು –
ಕ್ಯಾಂಟರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಎರಡು ವಾಹನ ನುಜ್ಜು ಗುಜ್ಜಾಗಿ , ಲೊಕೋಪಯೋಗಿ ಇಲಾಖೆಯ ಸಕಲೇಶಪುರದ ಕಾರ್ಯಪಾಲಕ ಇಂಜಿನಿರ್ ಸೇರಿ ಮೂವರು ಹಾಸನನಗರದ ಜನಪ್ರಿಯ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ .,
ಕೆಲಸದ ನಿಮಿತ್ತ ಬೆಂಗಳೂರಿನತ್ತ ಸಾಗುತ್ತಿದ್ದ ಇಂಜಿನಿಯರ್ ಕೆ.ಎಸ್.ಮೋಹನ್ ಕುಮಾರ್ ಸ್ಥಿತಿ ಗಂಭೀರ ವಾಗಿದ್ದು ,
ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಗುತ್ತಿಗೆದಾರ ಸಂತೋಷ್ ಬಾಳೆ ಎಂಬುವರ ಕಾರಿನಲ್ಲಿ ಮೋಹನ್ ಕುಮಾರ್ ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದರೆಂದು ತಿಳಿದು ಬಂದಿದೆ.ಕಾರಿನಲ್ಲಿದ್ದ ಇನ್ನಿಬ್ಬರ ಪರಿಸ್ಥಿತಿ
ಸಹ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಡಿಕ್ಕಿ ಸಂಭವಿಸಿದ ರಭಸಕ್ಕೆ ಕಾರು ಬಹುತೇಕ ನುಜ್ಜುಗಜ್ಜಾಗಿದ್ದು ಕ್ಯಾಂಟರ್ ಸಹ ಪಲ್ಟಿಯಾಗಿ ಹಾನಿಗೀಡಾಗಿದೆ. ಸ್ಥಳೀಯವಾಗಿ ಹೆಸರಾಂತ ಕೆಲಸಗಾರರಾಗಿದ್ದ ಮೋಹನ್ ಕುಮಾರ್ ರವರಿಗೆ
ಈ ರೀತಿಯ ಅಪಘಾತವಾಗಿರುವುದಕ್ಕೆ ಅಲ್ಲಿನ ಸ್ಥಳೀಯ ಶಾಸಕ ಸಿಮೆಂಟ್ ಮಂಜು ವಿಷಾದ ವ್ಯಕ್ತಪಡಿಸಿದ್ದಾರೆ
Live @ 7PM ಅಪಘಾತದಲ್ಲಿ ಗಾಯಗೊಂಡಿದ್ದ ಲೋಕೋಪಯೋಗಿ ಇಲಾಖೆ ಎ.ಇ.ಇ ಮೋಹನ್ ಕುಮಾರ್ ಸಾವು