ಯಗಚಿ ನದಿ ಪಾತ್ರದ ಜನತೆ ಪ್ರದೇಶಗಳಿಗೆ ಸ್ಥಳಾಂತರ ಮಾಡಿಕೊಳ್ಳುವ ಬಗ್ಗೆ ಮಾಹಿತಿ

0

ಸಾರ್ವಜನಿಕ ಪ್ರಕಟಣೆ
ವಿಷಯ: ಯಗಚಿ ಜಲಾಶಯದಿಂದ ಯಗಚಿ ನದಿಗೆ ಹೆಚ್ಚುವರಿ ನೀರನ್ನು ಬಿಡುತ್ತಿರುವ ಬಗ್ಗೆ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಯಗಚಿ ಜಲಾನಯನ ಪ್ರದೇಶದಲ್ಲಿ (ಮೂಡಿಗೆರೆ, ಬೇಲೂರು ಮತ್ತು ಚಿಕ್ಕಮಗಳೂರು ತಾಲ್ಲೂಕು) ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಒಳ ಹರಿವು ಹೆಚ್ಚಾಗುತ್ತಿರುವುದರಿಂದ, ಪ್ರಸ್ತುತವಾಗಿ ಜಲಾಶಯವು ತುಂಬುವ ಹಂತದಲ್ಲಿದ್ದು, ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಯಗಚಿ ನದಿಗೆ ಹೆಚ್ಚುವರಿ ನೀರನ್ನು ಹೊರಬಿಡುವ ಸಂಭವವಿರುತ್ತದೆ, ಆದ್ದರಿಂದ ಅಣೆಕಟ್ಟೆಯ ಕೆಳಭಾಗದ ಹಾಗೂ

ನದಿ ಪಾತ್ರದ ಪ್ರದೇಶದಲ್ಲಿ ಬರುವ ಎಲ್ಲಾ ಹಳ್ಳಿಗಳ ಜನ, ಜಾನುವಾರು ಹಾಗೂ ಆಸ್ತಿ ಪಾಸ್ತಿ ವಗೈರೆಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಈ ಮೂಲಕ ಸಂಬಂಧಿಸಿದವರಲ್ಲಿ ಕೋರಲಾಗಿದೆ.
ಮುಂದುವರೆದು ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದ ಸರ್ಕಾರದ ಸ್ಥಳೀಯ ಇಲಾಖಾ ಅಧಿಕಾರಿಗಳಿಗೆ ಈ ಮೂಲಕ ವಿನಂತಿಸಲಾಗಿದೆ.

Sir,
YAGACHI RESERVOIR
Dt:26-07-2023 06.00 AM
Max Levl: 3164.90ft
Today’s level:3162.884(3163.704)ft,
Max Cap: 3.603 TMC
Today’s cap:3.370(3.410
TMC
Livecap:3.006(3.046)TMC
Inflow:1954.00,(582.00)Cus,
Outflow River:0.00(500.00)cus,
Canals-YLBC :10.00(0.00) cus,
Total out flow :10.00(500.00) cus
note: coresponding last year readings are in bracket.


ಪ್ರಕಟಣೆ !
ಕಾವೇರಿ ನೀರಾವರಿ ನಿಗಮ ನಿಯಮಿತ
(ಕರ್ನಾಟಕ ಸರ್ಕಾರದ ಉಧ್ಯಮ)
ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ, ಯಗಚಿ ಯೋಜನಾ ವಿಭಾಗ, ಬೇಲೂರು.

LEAVE A REPLY

Please enter your comment!
Please enter your name here