ಅರಸೀಕೆರೆ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಣಕಟ್ಟೆ ಹೋಬಳಿ, ಡಿ.ಎಂ.ಕುರ್ಕೆ ಗ್ರಾಮದಲ್ಲಿ ಮನೆಯೊಂದು ಕುಸಿದ ಪರಿಣಾಮ ಗೌರಮ್ಮ ಎಂಬ ಓರ್ವ ಮಹಿಳೆ ಮೃತರಾಗಿದ್ದು, ಅವರ ಪತಿ ನಟರಾಜು ಎಂಬುವವರು ತೀವ್ರವಾಗಿ ಗಾಯಗೊಂಡು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕ್ಕ ಮಕ್ಕಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಇಂದು ಸ್ಥಳಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಜಿಲ್ಲಾಧಿಕಾರಿ ಶ್ರೀಮತಿ ಸತ್ಯಭಾಮ ಅವರೊಂದಿಗೆ ಬೇಟಿ ನೀಡಿ
ಸಾಂತ್ವನ ಹೇಳಿದರು. ಸದರಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ರೂ.5 ಲಕ್ಷ ಪರಿಹಾರ ನೀಡಲಾಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್, ಸ್ಥಳೀಯ ಮುಖಂಡರಾದ ಸುರೇಶ್, ಮಾಜಿ ಅಧ್ಯಕ್ಷ ರಾದ ರಮೇಶ್, ಗಿರೀಶ್,ರಾಂಪುರ ಸುರೇಶ್, ಹರೀಶ್ ಪಿ.ಡಿ.ಓ ರಂಗಪ್ಪ, ಕಂದಾಯ ನಿರೀಕ್ಷಕ ಶಾಂತ ಕುಮಾರ್ ಉಪಸ್ಥಿತರಿದ್ದರು.
ಅರಸೀಕೆರೆ :-ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಣಕಟ್ಟೆ ಹೋಬಳಿ, ಡಿ.ಎಂ.ಕುರ್ಕೆ ಗ್ರಾಮದಲ್ಲಿ ಮನೆಯೊಂದು ಕುಸಿದ ಪರಿಣಾಮ
ಗೌರಮ್ಮ ಎಂಬ ಓರ್ವ ಮಹಿಳೆ ಮೃತರಾಗಿದ್ದು, ಅವರ ಪತಿ ನಟರಾಜು ಎಂಬುವವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕ್ಕ ಮಕ್ಕಳು
ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಇಂದು ಸ್ಥಳಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಜಿಲ್ಲಾಧಿಕಾರಿ ಶ್ರೀಮತಿ ಸತ್ಯಭಾಮ ಅವರೊಂದಿಗೆ ಬೇಟಿ ನೀಡಿ ಸಾಂತ್ವನ ಹೇಳಿದರು. ಸದರಿ ಕುಟುಂಬಕ್ಕೆ ಸರ್ಕಾರದ ವತಿಯಿಂದ
ರೂ.5 ಲಕ್ಷ ಪರಿಹಾರ ನೀಡಲಾಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್, ಸ್ಥಳೀಯ ಮುಖಂಡರಾದ ಸುರೇಶ್, ಮಾಜಿ ಅಧ್ಯಕ್ಷ ರಾದ ರಮೇಶ್, ಗಿರೀಶ್,ರಾಂಪುರ ಸುರೇಶ್, ಹರೀಶ್ ಪಿ.ಡಿ.ಓ ರಂಗಪ್ಪ, ಕಂದಾಯ ನಿರೀಕ್ಷಕ ಶಾಂತ ಕುಮಾರ್ ಉಪಸ್ಥಿತರಿದ್ದರು..