ಹಾಸನ : ಕಲ್ಲಹಳ್ಳಿ ಗ್ರಾಮದ ತಿರುವಿನ ಬಳಿ ಟಿಟಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ , ಸ್ಥಳದಲ್ಲೆ ವ್ಯಕ್ತಿ ಸಾವು, ಗಂಭೀರವಾಗಿ ತೀವ್ರವಾಗಿ ಗಾಯಗೊಂಡಿರುವ ವೀರೇಶ್ ಎಂಬ ಯುವಕನನ್ನ ಹಾಸನದ ಆಸ್ಪತ್ರೆಗೆ ರವಾನಿಸಿದ್ದು , ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ , ಟಿಟಿ ವಾಹನ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ,
ಟಿಟಿ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಬೈಕ್ ನುಜ್ಜು ಗುಜ್ಜಾಗಿದೆ , ಸ್ಥಳದಲ್ಲೇ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು , ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ,
ಶರತ್ (20) ಮೃತ ಯುವಕ,
ಬೈಕ್ನಲ್ಲಿದ್ದ ವೀರೇಶ್ಗೆ (20) ಗಂಭೀರ ಗಾಯಗಳಾಗಿತ್ತು , ಬೇಲೂರು ತಾಲ್ಲೂಕಿನ, ಹಳೇಬೀಡು ಹೋಬಳಿ, ಕಲ್ಲಹಳ್ಳಿ ಫಾರೆಸ್ಟ್ ಬಳಿ ಈ ಘಟನೆ ಆಗಸ್ಟ್ 2 ಬುಧವಾರ 2023 ನಡೆದಿದೆ , ಸ್ಪ್ಲೆಂಡರ್ ಬೈಕ್ನಲ್ಲಿ ಬೇಲೂರಿನಿಂದ ಹಳೇಬೀಡು ಕಡೆಗೆ ಬರುತ್ತಿದ್ದ ಸುರಪುರ ಗ್ರಾಮದ ಶರತ್ ಮತ್ತು ವೀರೇಶ್ , ಹಳೇಬೀಡಿನಿಂದ ಬೇಲೂರು ಕಡೆಗೆ ಬರುತ್ತಿದ್ದ ಟಿಟಿ ವಾಹನ ಎಂದು ತಿಳಿದು ಬಂದಿದೆ ,
ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಇದು .