ಡಿಜಿಗೆ ಹತ್ತು ಬಾರಿ ದೇವೇಗೌಡರು ಪೋನ್ ಮಾಡಿದ್ರು ರಿಸಿವ್ ಮಾಡಲ್ಲ: ಹೆಚ್.ಡಿ. ರೇವಣ್ಣ
ಹಾಸನ: ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ೩೯ ಕೊಲೆ ನಡೆದಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಡಿಜಿಗೆ ಹತ್ತು ಬಾರಿ ಕರೆ ಮಾಡಿದರೂ ರಿಸಿವ್ ಮಾಡುವುದಿಲ್ಲ ಎಂದರೇ ಬಹುಶಃ ಜೆಡಿಎಸ್ ನಾಯಕರ ಕರೆ ರಿಸಿವ್ ಮಾಡದಂತೆ ನಿರ್ದೇಶನ ಇದಿಯಾ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅನುಮಾನಿಸಿದರು.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖಂಡ ಕೃಷ್ಣೇಗೌಡ ಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹಾಸನದಲ್ಲಿ ನಮ್ಮ ಸರಕಾರ ಹೋದ ಮೇಲೆ ನಾನು ತಿಳಿದಂತೆ ಕಳೆದ ಜುಲೈ ನಲ್ಲಿ ೩೯ ಮರ್ಡರ್ ಆಗಿದೆ. ಜೊತೆಗೆ ಕೆಲ ಅಹಿತಕರ ಘಟನೆಗಳು ನಡೆದಿದೆ. ೨೦೨೨ ಜುಲೈ ನಿಂದ ಈ ಜುಲೈವರೆಗೂ ೧೯ ಮರ್ಡರ್ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಎಸ್ಪಿ ಅವರ ಗಮನಕ್ಕೂ ತರಲಾಗಿದ್ದು, ಜೆಡಿಎಸ್ ಜಿಲ್ಲೆಯಲ್ಲಿ ಕೊಲೆಗಳು ಹೆಚ್ಚಾಗುತ್ತಿವೆ. ವರ್ಷದ ಹಿಂದೆ ನಮ್ಮ ನಗರಸಭೆ ಸದಸ್ಯನ ಕೊಲೆ ಆಗಿತ್ತು. ಈಗ ನಮ್ಮ ಕೃಷ್ಣೇಗೌಡ ಕೊಲೆ ಆಗಿದೆ. ಪೊಲೀಸ್ ಇಲಾಖೆಯಲ್ಲಿ ಇಂಟಲಿಜೆನ್ಸ್ ಇರುತ್ತೆ ಅಲ್ವಾ! ಆದರೂ ಯಾಕೆ ಹೀಗೆ ಆಗ್ತಾ ಇದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಹಿಂದೆ ನನ್ನಮೇಲೆ ಅಸಿಡ್ ಹಾಕೋ ಪ್ಲಾನ್ ಆಗಿತ್ತು. ನಾನು ಹೋಗೋದು ತಡ ಆಗಿದ್ದಕ್ಕೆ ನಮ್ಮ ತಾಯಿಗೆ ಆಸಿಡ್ ಹಾಕಿದ್ರು. ಹಾಸನ ಹತ್ಯೆ ಘಟನೆ ಸಂಬಂದ ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡರು ಡಿಜಿಗೆ ಹತ್ತುಬಾರಿ ಫೋನ್ ಮಾಡಿದ್ರು ಅವರು ಫೋನ್ ರೀಸಿವ್ ಮಾಡಿಲ್ಲ. ಓರ್ವ ಮಾಜಿ ಪ್ರದಾನಿ, ರಾಜ್ಯಸಭೆಯ ಸದಸ್ಯರು ಫೋನ್ ಮಾಡಿದ್ರೆ ಫೋನ್ ತೆಗೆಯೋದಿಲ್ಲ ಎಂದರೇ ಬಹುಶಃ ಜೆಡಿಎಸ್ ನಾಯಕರ ಫೋನ್ ರಿಸೀವ್ ಮಾಡಬೇಡಿ ಎಂದು ನಿರ್ದೇಶನ ಇದೆಯೊ ಏನೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಲೆಗಳಿಗೆ ನೀರು ಹರಿಸಿದ್ದರೇ ರೈತರಿಗೆ ಅನುಕೂಲವಾಗುತಿತ್ತು. ಕೃಷಿ ಇಲಾಖೆ, ನೀರಾವರಿ ಇಲಾಖೆ ಆಗಲಿ ಕುಳಿತು ಸಭೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವುದು ಸೂಕ್ತ. ಈ ವರ್ಷ ರೈತರಿಗೆ ನೀರು ಬಿಡುವುದಕ್ಕೆ ಆಗುವುದಿಲ್ಲ. ಬೆಳೆ ಪರಿಹಾರವಾದರೂ ಕೊಡುತ್ತೇವೆ ಎಂದು ಗ್ಯಾರಂಟಿ ಮಾಡಿದರೇ ಒಳ್ಳೆಯದು. ಬೆಳೆ ಇಲ್ಲದೇ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿಗೆ ಬಂದಿದ್ದಾರೆ. ೧೫ ದಿನಕ್ಕೆ ಒಮ್ಮೆಯಾದರೂ ನೀರು ಹರಿಸಿದ್ದರೇ ಉತ್ತಮವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಆಗ ತಮಿಳುನಾಡಿಗೆ, ತುಮಕೂರಿಗೆ ಬಿಟ್ಟರು. ನಾನು ಯಾರ ಬಗ್ಗೆಯೂ ದೂರುವುದಕ್ಕೆ ಹೋಗುವುದಿಲ್ಲ. ಪಾಪ ರೈತರ ಬಗ್ಗೆಯೂ ಗಮನಹರಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದರು.
ನಾಲ್ಕು ಪಥದ ರಸ್ತೆಗೆ ೬೮೦ ಕೋಟಿ ರೂಗಳ ಟೆಂಡರ್ ಕರೆಯಲು ದೇವೇಗೌಡರೆ ಕಳೆದ ಬಾರಿ ಖುದ್ಧಾಗಿ ಚರ್ಚೆ ಮಾಡಿದ್ದರಿಂದ ಎರಡು ಲೈನ್ ಇರುವುದನ್ನು ಈಗ ನಾಲ್ಕು ಲೈನ್ ಮಾಡಿಕೊಟ್ಟಿದ್ದಾರೆ. ನಾಲ್ಕು ಲೈನ್ ರಸ್ತೆ ಮಾಡಲು ಲ್ಯಾಂಡ್ ಅಕ್ವೇಶನ್ ಸೇರಿ ೬೮೦ ಕೋಟಿ ರೂಗಳು. ಆಗಿ ಹಾಸನ-ಬೇಲೂರು ರಸ್ತೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೇ ಪೂರ್ಣಗೊಂಡಿದೆ. ಹಳ್ಳಿಮೈಸೂರಿನಿಂದ ಪ್ರಾರಂಭವಾಗಿ ಹೊಳೆನರಸೀಪುರ ೧೩ ಕಿಲೊ ಮೀಟರ್ ಬೈಪಾಸ್ ರಸ್ತೆಗೆ ೧೨೮ ಕೋಟಿ ರೂಗಳ ಆಗಲಿದ್ದು, ಡಿಪಿಆರ್ ಎಲ್ಲಾ ಆಗಿದೆ.
ಯಡೆಗೌಡನಹಳ್ಳಿ ಯಿಂದ ಬಿಳಿಕೆರೆ ರಸ್ತೆಗೆ ಬೈಪಾಸ್ ಸೇರಿ ೧೨೦೦ ಕೋಟಿ ರೂ. ಹಂಗರಹಳ್ಳಿ ೬೦ ಕೋಟಿ ರೂಗಳ ಟೆಂಡರ್ ಆಗಬೇಕಾಗಿದೆ ಎಂದು ಹೇಳಿದರು. ಹಾಸನ, ಚನ್ನರಾಯಪಟ್ಟಣ ಬೈಪಾಸ್, ೨೪ ಮೇಲು ಸೇತುವೆ, ದೇವೇಗೌಡರಿಂದ ೧೨೦೦ ಕೋಟಿ ರೂಗಳ ಕೆಲಸ ಪ್ರಸ್ತುತ ನಡೆಯುತ್ತಿದೆ. ಸಂಸದರು ಮತ್ತು ದೇವೇಗೌಡರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ನಮ್ಮ ಕೈಲಾದ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ರಾಜಕಾರಣ ಒಂದು ಇಟ್ಟು ನಮ್ಮ ಜಿಲ್ಲೆಯ ನಮ್ಮಕೈಲಿ ಸಾಧ್ಯವಾದ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ದೇವೇಗೌಡರನ್ನು ಕರೆದುಕೊಂಡು ಹೋಗಿ ಚನ್ನರಾಯಪಟ್ಟಣದಿಂದ ಕುಶಾಲನಗರ ರೈಲ್ವೆ ಒಂದು ಆ ಕಾಲದಲ್ಲಿ ಮಾಡಲಾಗಿದೆ. ಹೊಳೆನರಸೀಪುರದಲ್ಲೊಂದು ಒಂದು ನಿಜಾಮುದ್ದಿನ್ ಟ್ರೈನ್ ನಿಲ್ಲಿಸಬೇಕು. ಅದಕ್ಕು ಕೂಡ ದೇವೇಗೌಡರು ಲೆಟರ್ ಬರೆದಿದ್ದು, ಒಂದೆ ಮಾತರಂ ಟ್ರೈನ್ ಅರಸೀಕರೆಯಲ್ಲಿ ಬರಬೇಕೆಂದು ಪತ್ರ ಬರೆದಿದ್ದಾರೆ. ಅರಸೀಕರೆಗೆ ದೇವೇಗೌಡರು ಹೋರಾಟ ಮಾಡಿ ೩೪ ಕೋಟಿ ರೂಗಳ ತಂದು ಕೊಟ್ಟರು.
ನ್ಯಾಷನಲ್ ಹೈವೆ, ರೈಲ್ವೆ ಇರಬಹುದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಈ ತಿಂಗಳ ೧೭ ರಂದು ಸಭೆಯನ್ನು ರೈತರೊಂದಿಗೆ ಸಂಸದರೊಂದಿಗೆ ಕರೆಯಲಾಗಿದೆ. ಹೊಳೆನರಸೀಪುರ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಲು ಏಳುವರೆ ಏಕರೆ ಲ್ಯಾಂಡ್ ಅಕ್ವೇಶನ್ ಮಾಡಬೇಕಾಗಿದೆ. ಇದರಲ್ಲಿ ಇನ್ನೊಂದು ಪ್ಲಾಟ್ ಫಾರಂ ಮತ್ತು ಸ್ಟೇಷನ್ ವಿಶಾಲವಾಗಿ ಮಾಡಲಾಗುವುದು. ಹಾಸನ ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ದೇವೇಗೌಡರು, ಸಂಸದರು, ಎಂ.ಎಲ್.ಸಿ. ನಾನು ಕುಳಿತುಕೊಂಡು ಹಾಸನ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು ಎಂದ ವಿಶ್ವಾಸವ್ಯಕ್ತಪಡಿಸಿದರು.