ಹಾಸನ: ನಗರದ ಶ್ರೀ ಆದಿಚುಂಚನಗಿರಿ ಸಮುದಾಯಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಮದ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಗೃಹಜ್ಯೋತಿ ಯೋಜನೆಯ ಅನುಷ್ಠಾನ ಹಾಗೂ ಚಾಲನಾ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಆರ್. ಮೋಹನ್ ಹಾಜರು ಆಗಿರುವುದು ಬಿಟ್ಟರೆ ಜನಪ್ರತಿನಿಧಿಗಳ ಗೈರಿನಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ನಂತರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮ ವೀಕ್ಷಣೆಗೆ ಮಾತ್ರ ಸೀಮಿತವಾಯಿತು.
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೇಳೆ ಸರಿಯಾಗಿ ಪ್ರೊಜೆಕ್ಟರ್ ಮೂಲಕ ವೀಕ್ಷಣೆ ಮಾಡುತ್ತಲೇ ಹಾಸನದಲ್ಲಿ ಜಿಲ್ಲಾಧಿಕಾರಿಗಳು ಕೂಡ ಚಾಲನೆ ಕೊಟ್ಟರು. ನಂತರ ಪ್ರತಿಜ್ಞಾ ವಿಧಿಯನ್ನು ಎದ್ದುನಿಂತು ಆಲಿಸಿದರು. ಇದಾದ ಬಳಿಕ ಅರ್ಹರಿಗೆ ಗೃಹಲಕ್ಷ್ಮಿ ಯೋಜನೆಯ ೨ ಸಾವಿರ ರೂಗಳು ಖಾತೆಗೆ ನೇರವಾಗಿ ಜಮೆ ಮಾಡುವ ಕಾರ್ಯಕ್ರಮವನು ಸಿಎಂ ನೆರವೇರಿಸಿದರು. ಪ್ರೊಜೆಕ್ಟರ್ ಮತ್ತು ಟಿವಿ ಮೂಲಕ ಪೂರ್ಣ ಕಾರ್ಯಕ್ರಮವನ್ನು ಅಧಿಕಾರಿಗಳು ವೀಕ್ಷಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಯಾವ ಶಾಸಕರು ಪಾಲ್ಗೊಳ್ಳಲಿಲ್ಲ. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮ, ನಗರಸಭೆ ಅಧ್ಯಕ್ಷರಾದ ಆರ್. ಮೋಹನ್, ಆಯುಕ್ತ ಸತೀಶ್ ಕುಮಾರ್, ಯೋಜನಾಧಿಕಾರಿ ಬಿ.ಎ. ಜಗದೀಶ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಕಾರಿಗಳು ಮತ್ತು ಇತರರು ಪಾಲ್ಗೊಂಡಿದ್ದರು.