ಹಾಸನ: (ಹಾಸನ್_ನ್ಯೂಸ್) !, ಹಾಸನ ಜಿಲ್ಲಾ ಸೈಬರ್ ಪೊಲೀಸ್ ಕಾರ್ಯಾಚರಣೆ , ಕೊನೆಗೂ ಸಿಕ್ಕಿಬಿದ್ದ BM ರಸ್ತೆಯ ATM ಹೊರಗೆ ನಿಂತು ಅಸಾಯಕರಿಗೆ ಸಹಾಯ ಮಾಡೋ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿ!!
°ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಆನಂದ್ ಉರುಫ್ ವಸಂತ್(35ವರ್ಷ) ಬಂಧಿತಗೊಂಡ ಆರೋಪಿ.
°ವಾಚ್ಮನ್ ಇಲ್ಲದೆ ಇರುವಂತಹ ATMಗಳಲ್ಲಿ ಡ್ರಾ ಮಾಡೋಕೆ ಬರೋ ವಯಸ್ಕರು , ಓದು ಬರಹ ಅರಿಯದ ಅಸಹಾಯಕ ರೇ ಇವನ ಟಾರ್ಗೆಟ್
°ಅವರ ಬಳಿ ಇರೋ ATM PIN ಪಡೆದು, ಹಣ ಡ್ರಾ ಮಾಡಿಕೊಟ್ಟು ಅವರಿಗೆ ತಿಳಿಯದೆ ಯಾಮಾರಿಸಿ ಬೇರೆ ಕಾರ್ಡ್ ಕೊಡುತ್ತಿದ್ದ
° ಅವರು ಅಲ್ಲಿಂದ ಹೋದಮೇಲೆ ಒರಿಜಿನಲ್ ಕಾರ್ಡ್
ಉಪಯೋಗಿಸಿ ಅವರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿ ಮೋಸ ಮಾಡುತ್ತಿದ್ದ
– ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ
ಘಟನೆ !, ಹಾಸನ ತಾಲ್ಲೂಕಿನ ಕಟ್ಟಾಯ ಗ್ರಾಮದ ಹುಚ್ಚೇಗೌಡ ಸೆ.4ರಂದು ಹಾಸನದ BM.ROAD ನ HDCCಬ್ಯಾಂಕ್ ATMನಲ್ಲಿ ಹಣ ಡ್ರಾ ಮಾಡಲು ಈತನ ಮೊರೆಹೋಗಿದ್ದರಯ , ಆರೋಪಿ ಅವರ ATM ಕಾರ್ಡ್ PIN ನಂಬರ್ ಪಡೆದು 7,000₹ ಹಣ ಡ್ರಾ ಮಾಡಿಕೊಡುತ್ತಾನೆ , ನಂತರ ಅವರಿಗೆ ಬೇರೆ ಬ್ಯಾಂಕ್‌ನ ATM ಕೊಟ್ಟು ಕಳುಹಿಸಿದ್ದ. ಹುಚ್ಚೇಗೌಡರು ಆ.3ರಂದು ATMನಲ್ಲಿ ಮತ್ತೆ ಹಣ ಡ್ರಾ ಮಾಡಲು ಹೋದಾಗ ಖಾತೆಯಲ್ಲಿ ಹಣವೇ ಇರಲಿಲ್ಲ , ಗಂಡಸಿಯಲ್ಲಿ 1, ದುದ್ದ 3, ಅರಸೀಕೆರೆ 2, ತಿಪಟೂರು , ಹಾಸನ 2 ಪ್ರಕರಣಗಳಲ್ಲಿ ಅಮಾಯಕರಿಗೆ ವಂಚನೆ ಮಾಡಿರುವುದು ಪೊಲೀಸರ ತನಿಖೆ ನಂತರ ತಿಳಿದು ಇದುವರೆಗೆ 3.93 ಲಕ್ಷ₹ ನಗದು ಡ್ರಾ ಮಾಡಿದ್ದಾನೆ. 1.80 ಲಕ್ಷ ₹ನಗದು, 4ATM ಕಾರ್ಡ್ , Maruthi Swift ಡಿಸೈರ್ ಕಾರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ #crimedairyhassan #hassan