ಸಕಲೇಶಪುರ :ತಾಲೂಕಿನ ಹಾನುಬಾಳು ಹೋಬಳಿಯ ಮಲ್ಲ ಗದ್ದೆ ಗ್ರಾಮದ ಕಾಫಿ ತೋಟ ಒಂದರಲ್ಲಿಭಾರಿ ಗಾತ್ರದ ಕಾಳಿಂಗ ಸರ್ಪ ಒಂದು ಗುರುವಾರ ಸಂಜೆ ಅರಣ್ಯ ಇಲಾಖೆ ವತಿಯಿಂದ ಸೆರೆ ಹಿಡಿಯಲಾಗಿದೆ. ಗ್ರಾಮದ ಮಹೇಶ್ ಧರ್ಮ ಎಂಬುವರ ಕಾಫಿ ತೋಟದಲ್ಲಿ ಗುರುವಾರ ಸಂಜೆ ಕಾಣಿಸಿಕೊಂಡ ಕಾಳಿಂಗ ಸರ್ಪ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆತಂಕ ಉಂಟು ಮಾಡಿತ್ತು.
ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸಕಲೇಶಪುರ ತಾಲೂಕಿನ ಖ್ಯಾತ ಉರಗತಜ್ಞ ಮಹಮದ್ ಫರಾನ್ ಅವರ ಸಹಾಯದಿಂದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸರಿ ಹಿಡಿಯಲಾಯಿತು.ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಶಿರಾಡಿ ಘಾಟ್ ಸಮೀಪ ಕೆಂಪು ಹೊಳೆ ಅರಣ್ಯಕ್ಕೆ ಬಿಡಲಾಯಿತು.