ಸಕಲೇಶಪುರ :- ತಾಲ್ಲೂಕಿನ ಬೊಮ್ಮನಕೆರೆ, ವಡ್ರಹಳ್ಳಿ, ಕರಡಿಗಾಲ, ಹರಗರಹಳ್ಳಿ, ನಡನಹಳ್ಳಿ, ನೂದರಹಳ್ಳಿ, ಚೀರಿ, ಚಿನ್ನಹಳ್ಳಿ, ಜಾತಹಳ್ಳಿ, ಬೊಬ್ಬನಹಳ್ಳಿ,ವಳಲಹಳ್ಳಿ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಸಕಲೇಶಪುರ ಬಸ್ ಘಟಕದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಕೊಡಲಾಯಿತು .
ಈ ಹತ್ತಾರು ಗ್ರಾಮಗಳ ಗ್ರಾಮಸ್ಥರಿಗೆ ಆಸ್ಪತ್ರೆ, ಬ್ಯಾಂಕ್, ನಾಡ ಕಛೇರಿ, ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ಈ ಮಾರ್ಗದಲ್ಲಿ ಹೋಗಲು ಬಸ್ ವ್ಯವಸ್ಥೆ ಅವಶ್ಯಕತೆ ಇದ್ದು . ಇದರ ಅನುಕೂಲಕ್ಕಾಗಿ ಸಕಲೇಶರರದಿಂದ ಬೆಳಿಗ್ಗೆ 9.15ಕ್ಕೆ ಹೊರಡುವ ಗೊದ್ದು ಸೋಮವಾರಪೇಟೆ ಬಸ್ ಬ್ಯಾಕರವಳ್ಳಿ ಮಾರ್ಗವಾಗಿ ಚಲಿಸುತ್ತಿದ್ದು, ಆ ಬಸ್ಸನ್ನು ಹರಗರಹಳ್ಳಿ ಬೊಮ್ಮನಕೆರೆ ಕರಡಿಗಾಲ-ವಳಲಹಳ್ಳಿ ಹಾಡ್ಲಹಳ್ಳಿ ಮಾರ್ಗವಾಗಿ ಚಲಿಸುವಂತೆ ಮಾಡಿಕೊಡಬೇಕಾಗಿ ಗ್ರಾಮಸ್ಥರು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಸಿದ ನೂತನ ವ್ಯವಸ್ಥಾಪಕ ನಿರ್ದೇಶಕರಾದ ವಿಪಿನ್ ಆದಷ್ಟು ಬೇಗ ಮನವಿಗೆ ಸ್ಪಂದಿಸುವ ಕೆಲಸವನ್ನು ಮಾಡುವುದಾಗಿಯೂ, ಕೂಡಲೇ ಮೇಲಧಿಕಾರಿಗಳಿಗೆ ಬಸ್ ಮಾರ್ಗ ವನ್ನು ಬದಲಾವಣೆ ಮಾಡಿಕೊಡುವ ಬಗ್ಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ವಾಗುವಂತಹ ಕೆಲಸವನ್ನು ಆದಷ್ಟು ಬೇಗ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಪಿ ಕೃಷ್ಣೆಗೌಡ, ಹಿರದನಹಳ್ಳಿ ಹೂವಣ್ಣ ಗೌಡ, ವಳಲಹಳ್ಳಿ ರುದ್ರೇಶ್,ಶಿರಡಿಗಡಿ ಶ್ರೀ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಚಿನ್ನಹಳ್ಳಿ ಪ್ರಜ್ವಲ್,ಹೆತ್ತೂರು ಹೋಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಳಲಹಳ್ಳಿ ವಸಂತ್,ಹೆತ್ತೂರು ಹೋಬಳಿ ವಕ್ಕಲಿಗರ ಸಂಘದ ನಿರ್ದೇಶಕರಾದ ಚಿದಾನಂದ್, ಕರಡಿಗಾಲ ಗ್ರಾಮಸ್ಥರಾದ ಲಾತೇಶ್, ದರ್ಶನ್,ಪತ್ರಕರ್ತ ಕರಡಿಗಾಲ ಅರುಣ್ ಗೌಡ,ವಳಲಹಳ್ಳಿ ಮೂರ್ತಿ,ಮರ್ಜನಹಳ್ಳಿ ಪರಮೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.