ನಮ್ಮ ತಂದೆ ತುಂಬಾ ಸೌಮ್ಯ ಸ್ವಭಾವದವಾರಗಿದ್ದು ಯಾರೋ ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ

0

ಸಕಲೇಶಪುರ: ಕಾಫಿ ಮಂಡಳಿಯ ನೌಕರನೋರ್ವನ ಶವ ತಾಲ್ಲೂಕಿನ ಮಠಸಾಗರ ಬಳಿ ರಸ್ತೆ ಮಧ್ಯೆ ಬುಧವಾರ ಮುಂಜಾನೆ ಪತ್ತೆಯಾಗಿದೆ.
ತಾಲೂಕಿನ ಮಠಸಾಗರ ಗ್ರಾಮದ ನಿವಾಸಿ ಎ. ಸ್ವಾಮಿ (53) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.ಕಳೆದ 25 ವರ್ಷಗಳಿಂದ ಕಾಫಿ ಮಂಡಳಿಯಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾಮಿ, ಕಳೆದ ರಾತ್ರಿ ಗ್ರಾಮದಲ್ಲಿ

ವ್ಯಕ್ತಿಯೊಬ್ಬರ ಶವ ಸಂಸ್ಕಾರಕ್ಕೆ ತೆರಳಿ ವಾಪಸಾಗಿದ್ದರು. ಬುಧವಾರ ಮುಂಜಾನೆ ಮಠಸಾಗರದಿಂದ ಬಾಳ್ಳುಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಾರಿಹೋಕರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಮಗ ಪ್ರವೀಣ್ ಮಾತನಾಡಿ, ನಮ್ಮ ತಂದೆ ತುಂಬಾ ಸೌಮ್ಯ ಸ್ವಭಾವದವಾರಗಿದ್ದು ಯಾರೋ ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here