ಇಂದು ಪದವೀಧರ ಕ್ಷೇತ್ರಕ್ಕೆ ಮತದಾನ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಸಕಲ ಸಿದ್ಧತೆ | ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಅವಕಾಶ ; ಹಾಸನ ಜಿಲ್ಲೆಯಲ್ಲಿ 24,252 ನೊಂದಾಯಿತ ಮತದಾರರು

0

ಮೈಸೂರು/ಮಂಡ್ಯ/ಹಾಸನ/ಚಾಮರಾಜನಗರ : ‘ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್‌ 13 ಇಂದು ನಡೆಯಲಿರುವ ಚುನಾವಣೆಗೆ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ’ -ಪ್ರಾದೇಶಿಕ ಆಯುಕ್ತ ,  ಚುನಾವಣಾಧಿಕಾರಿ ಡಾ.ಜಿ.ಸಿ. ಪ್ರಕಾಶ್‌

‘ಅಂದು ಹಕ್ಕು ಚಲಾಯಿಸುವುದಕ್ಕಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದ ಪದವೀಧರ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿದ್ದರೂ ಅವರಿಗೆ ರಜೆ ಅನ್ವಯವಾಗಲಿದೆ. ಶಾಲಾ–ಕಾಲೇಜುಗಳಿಗೆ ಅಥವಾ ಸಂಸ್ಥೆಗಳಿಗೆ ರಜೆ ಆಯಾ ನೊಂದಾಯಿತ ಮತದಾರರ ಶೇಕಡವಾರು ಮೇಲೆ ನಿರ್ಧಾರ’ ಹಲವು ಶಾಲಾ ಕಾಲೇಜಿಗೆ ರಜೆ , !! ಕೆಲವು ಶಾಲಾ ಕಾಲೇಜು ಗಳು ಎಂದಿನಂತೆ…

150 ಮತಗಟ್ಟೆಗಳು: ‘ಒಟ್ಟು 1,41,961 ಮಂದಿ ಮತದಾರರಿದ್ದು, ಹಾಸನ ಜಿಲ್ಲೆಯಲ್ಲಿ 24,252 ನೊಂದಾಯಿತ ಮತದಾರರು ಇದ್ದಾರೆ ,  ಪ್ರತಿ ಮತಗಟ್ಟೆಗೂ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಿಸಲಾಗಿದೆ. ಪ್ರಕ್ರಿಯೆಯನ್ನು ವಿಡಿಯೊ ಮಾಡಲಾಗುತ್ತಿದ್ದು. 68 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರು ಮತದಾರರಾಗಿದ್ದಲ್ಲಿ ಅವರಿಗೆ ಅಂಚೆ ಮತ‍ಪತ್ರಗಳನ್ನು ಕೂಡ ಒದಗಿಸಲಾಗಿದೆ’

‘ನಾಲ್ಕೂ ಜಿಲ್ಲೆಗಳ ಮತಪೆಟ್ಟಿಗೆಗಳನ್ನು ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಭದ್ರತಾ ಕೊಠಡಿಗೆ ತಂದು ಸಂಗ್ರಹಿಸಿ , ಎಣಿಕೆ ಜೂನ್‌ 15ರಂದು ಬೆಳಿಗ್ಗೆ 8ರಿಂದ ಆರಂಭ , ಒಟ್ಟು ಮತದಾನ ಪ್ರಮಾಣದಲ್ಲಿ ಶೇ 50ಕ್ಕಿಂತ ಹೆಚ್ಚಿನ ಪ್ರಥಮ ಪ್ರಾಶಸ್ತ್ಯದ ಮತ ಗಳಿಸಿದವರನ್ನು ವಿಜೇತರೆಂದು ಘೋಷಿಸಲಾದಾಖಲೆಗಳು :

ಹಾಸನ: ಜೂನ್ 13ಕ್ಕೆ ನಿಗದಿಯಾಗಿರುವ ವಿಧಾನ ಪರಿಷತ್‌ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ 1 ವೀಕ್ಷಕರಾಗಿ ಸುಗಮವಾಗಿ ನಡೆಯಲು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ 24,252 ನೋಂದಾಯಿತ ಮತದಾರರಿದ್ದು, ಮತದಾನಕ್ಕೆ ಜಿಲ್ಲಾ ಕೇಂದ್ರ ಸೇರಿದಂತೆ ಸುಮಾರು 27 ಮತ ಕೇಂದ್ರ ತೆರೆಯಲಾಗಿದೆ. 150 ಮತಗಟ್ಟೆ ಸಿಬ್ಬಂದಿ ಹಾಗೂ 33 ಮೈಕ್ರೋ ಅಬರ್ವರ್ ಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು. ಮದ್ಯ ಮಾರಾಟ ನಿಷೇಧ: ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಜೂ.13ರ ಮಧ್ಯರಾತ್ರಿ 12ರವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ ಹೇರಲಾಗಿದೆ ಎಂದರು. ಚುನಾವಣೆ ನಡೆಯುವ 48 ಗಂಟೆ ಮುಂಚಿತವಾಗಿ ಜಾರಿಯಲ್ಲಿ ಇದ್ದು ಬಹಿರಂಗ ಪ್ರಚಾರಕ್ಕೆ ಅವಕಾಶ ಇರುವುದಿಲ್ಲ, ಕೇವಲ ಮನೆಮನೆಗೆ ಪ್ರಚಾರಕ್ಕೆ ಅವಕಾಶವಿದೆ. ಈ ಬಗ್ಗೆ ರಾಜಕೀಯ ಪಕ್ಷಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು. ಆಲೂರು ತಾಲೂಕಿನಲ್ಲಿಚುನಾವಣೆ ನೀತಿ ಸಂಹಿತ ಉಲಘನೆ ಒಂದು ಪ್ರಕರಣ ಮಾತ್ರ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದರು.

ಮತದಾರರರಿಗೆ ರಜೆ?

”ಸರಕಾರ ಸಾಂದರ್ಭಿಕ ರಜೆಗೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಸೂಚನೆ ನೀಡಿದ್ದು, ನೋಂದಾಯಿಸಿಕೊಂಡ ಪದವೀಧರರಮತದಾರರಿಗೆ ಮಾತ್ರ ರಜೆ ಇರುತ್ತದೆ. ಶಾಲಾ, ಕಾಲೇಜು ಅಥವಾ ಸಂಸ್ಥೆಗಳಿಗೆ ರಜೆ ಇರುವುದಿಲ್ಲ: ಎಂದಿನಂತೆ ಕಾರ್ಯನಿರ್ವಹಿಸಲಿವೆ,”ಎಂದು ಡಾ.ಜಿ.ಸಿ.ಪ್ರಕಾಶ್ ಹೇಳಿದರು.

ಮತದಾನಕೆ ಬೇಕಾದ ದಾಖಲೆಗಳು :

ಮತದಾರರು ಆಧಾರ್ ಕಾರ್ಡ್, ಪಾಸ್‌ ಪೋರ್ಟ್, ಚಾಲನಾ ಪರವಾನಗಿ, ಆರ್‌ಬಿಐ ಸಿಬ್ಬಂದಿ ಕಾರ್ಡ್, ಎಂಪಿ, ಎಂಎಲ್‌ಎ, ಎಂಎಲ್‌ಸಿ ಸದಸ್ಯರಿಗೆ ನೀಡಿರುವ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ವೇಷಚೇತನರಿಗೆ ನೀಡಿರುವ ಪ್ರಮಾಣ ಪತ್ರ, ಇದರಲ್ಲಿ ಯಾವುದಾದರೂ ಒಂದನ್ನು ಮತದಾನ ಕೇಂದ್ರಕ್ಕೆ ಬರುವಾಗ ತರಬೇಕು.

LEAVE A REPLY

Please enter your comment!
Please enter your name here