ಬೇಲೂರಿನಲ್ಲಿ ಸುರಭಿಪೌಂಡೇಷನ್‍ನಿಂದ ಉಚಿತ ಆಟೋ ಸೇವೆಗೆ ಚಾಲನೆ

0

ಬೇಲೂರು:ಸುರಭಿಪೌಂಡೇಷನ್ ವತಿಯಿಂದ ಗರ್ಭಿಣ ಯರು, ಹಿರಿಯರು, ವಿಕಲಚೇತನರಿಗೆ, ಸೈನಿಕರಿಗೆ ಉಚಿತ ಆಟೋ ಸೇವೆ ಆರಂಭಿಸಲಾಗಿದೆ.
2 ಲಕ್ಷರೂ. ವೆಚ್ಚದಲ್ಲಿ ಖರೀದಿಸಲಾಗಿರುವ ಎಲೆಕ್ಟ್ರಕ್ ಆಟೋದಲ್ಲಿ ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ, ಕರೆತರುವ ವ್ಯವಸ್ಥೆಗೆ ಕನ್ನಡರಾಜ್ಯೋತ್ಸವದಂದು ಸುರಭಿಪೌಂಡೇಷನ್ ಅಧ್ಯಕ್ಷೆ ಸುರಭಿರಘು ಹಾಗೂ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಇನ್ನಿತರ ಗಣ್ಯರು ಪಟ್ಟಣದ ಡಾ.ಅಂಬೇಡ್ಕರ್ ಆಟೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ರಾಜ್ಯ ಮಹಿಳಾ ಘಟಕದ ಕೋಶಾಧ್ಯಕ್ಷೆಯೂ ಆಗಿರುವ ಸುರಭಿರಘು ಅವರು, ಉಚಿತ ಆಟೋ ಸೇವೆ ಒದಗಿಸುವುದರಲ್ಲಿ ರಾಜಕೀಯ ಉದ್ದೇಶವಿಲ್ಲ. ನಾನು ಸಂಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ಸಹಕಾರ ನೀಡುವುದು ಮೊದಲಿನಿಂದಲೂ ನಡೆದುಕೊಂಡುಬಂದಿದೆ. ನಾನು ಈವರಗೆ ಮಾಡಿರುವ ಎಲ್ಲಾ ರೀತಿಯ ನೆರವಿನ ವೆಚ್ಚವೂ ಲೆಕ್ಕವಿದ್ದು ತೆರಿಗೆ ಪಾವತಿಸುವ ಹಣವಾಗಿರುತ್ತದೆ. ಮನುಷ್ಯ ಎಷ್ಟುವರ್ಷ ಬದುಕುತ್ತಾನೆ? ಇರುವ ಸಮಯದಲ್ಲಿ ಕೈಲಾದಷ್ಟು ನೆರವು ನೀಡಬೇಕೆಂಬ ಬಗ್ಗೆ ಆಲೋಚಿಸುವ ವ್ಯಕ್ತಿ ನಾನು. ಈ ಕಾರಣದಿಂದ ಉಚಿತ ಆಟೋ ಸೇವೆ ಆರಂಭಿಸಿದ್ದೇನೆ. ಅಗತ್ಯತೆ ಕಂಡುಬಂದರೆ ಹೋಬಳಿಗೊಂದು ಇಂತಹ ಸೇವಾ ಆಟೋಗಳು ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಮಾತನಾಡಿ, ಸುರಭಿರಘು ಅವರು ಜನಪರವಾದ ಅನೇಕ ಕಾರ್ಯಗಳ ಮಾಡಿದ್ದಾರೆ. ಆ ಪಟ್ಟಿಗೆ ಉಚಿತ ಆಟೋಸೇವೆ ಸೇರಲಿದೆ. ಇದೊಂದು ಮಹತ್ವಪೂರ್ಣ ಕಾರ್ಯಕ್ರಮವಾಗಿದೆ ಎಂದರು. ಈ ವೇಳೆ ಬಿಜೆಪಿ ಪ್ರಮುಖರಾದ ಬಿ.ಕೆ.ಚಂದ್ರಕಲಾ, ಉಧ್ಯಮಿ ಸಂತೋಷ್, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ವೇದಾವತಿ, ತಾ.ಪಂ.ಮಾಜಿ ಸದಸ್ಯ ಸೋಮಣ್ಣ, ಆಟೋಸಂಘದ ಅಧ್ಯಕ್ಷ ದೇವರಾಜು, ಮಾಜಿ ಅಧ್ಯಕ್ಷ ಲೋಕೇಶ್, ಶ್ರೀನಿವಾಸ್, ಪ್ರಮುಖರಾದ ಜಾವಗಲ್‍ದಯಾನಂದ್, ರೂಪಾವಿಜಯಕುಮಾರ್ ಇತರರು ಇದ್ದರು.

LEAVE A REPLY

Please enter your comment!
Please enter your name here