ಹಾಸನ ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ 2019-20ನೇ ಸಾಲಿನ ಅಂತಿಮ ವರ್ಷದ 560 ಎಂಜಿನಿಯರಿಂಗ್, 29 ಎಂ.ಟೆಕ್, 12 ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

0

ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ 2019- 20 ನೇ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ದಿನಾಂಕ 31- 10 -2020 ರಂದು ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು ಈ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಅವರು ಮಾತನಾಡಿ ನಮ್ಮ ಕಾಲೇಜಿನಲ್ಲಿ ಈ ಸಾರಿ ಅಂತಿಮ ವರ್ಷದ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ 601 ವಿದ್ಯಾರ್ಥಿಗಳಿಗೆ ಪದವಿ -ಪ್ರದಾನ ಮಾಡಲಾಗಿದೆ ಇದರಲ್ಲಿ 560 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, 29 ಎಂಟೆಕ್ ವಿದ್ಯಾರ್ಥಿಗಳು, 12 ಜನ ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನವನ್ನು ಕೊಡಲು ಆನ್ಲೈನ್ ಮೂಲಕ ಇದೆ ಮೊದಲನೇ ಸಾರಿ ಏರ್ಪಡಿಸಲಾಗಿದೆ

ಇಂಜಿನಿಯರಿಂಗ್ ಪದವಿ ಪಡೆದ ಮೇಲೆ ಮೇಲೆ ತುಂಬಾ ಜವಾಬ್ದಾರಿ ಇದೆ ,ತಾವು ಕಟ್ಟುವ ಕಟ್ಟಡಗಳು, ರಸ್ತೆ ಕಾಮಗಾರಿಗಳು, ನಾಲಾ ಕಾಮಗಾರಿಗಳು, ಬ್ರಿಡ್ಜ್ ಗಳು, ಇಂತಹ ಅನೇಕ ಕೆಲಸಗಳನ್ನು ಮಾಡುವಾಗ ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನೀವು ನಿರ್ವಹಿಸುವ ಕೆಲಸವೂ ಸಾರ್ವಜನಿಕರ ಮೆಚ್ಚುಗೆ ಆಗಿರಬೇಕು. ಹಾಗೂ ಸಾರ್ವಜನಿಕರಿಗೆ ಅನುಕೂಲತೆ ಇರಬೇಕು ನೀವು ಮಾಡುವಂತಹ ಯಾವುದೇ ಕೆಲಸಗಳು ಗುಣಮಟ್ಟ ಉತ್ತಮವಾಗಿ ಶಾಶ್ವತವಾಗಿ ಉಳಿಯುವಂತೆ ಕೆಲಸವನ್ನು ಮಾಡಬೇಕೆಂದು ತಿಳಿಸಿದರು. ನಿಮ್ಮ ಮೇಲೆ ಸಮಾಜದ ಜವಾಬ್ದಾರಿ ಇದೆ ,ನೀವು ಗಳು ನಿಮ್ಮ ಕೆಲಸಕ್ಕೆ ಎಷ್ಟು ಜವಾಬ್ದಾರಿ ನೀಡುತ್ತಿರುವ ಅದೇ ರೀತಿ ನಿಮ್ಮ ಪೋಷಕರಿಗೂ ತಂದೆ-ತಾಯಿ ಗೌರವ ನೀಡಬೇಕು ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳುವಂತಹ ಮನೋಭಾವನೆ ಇರಬೇಕು, ಎಂದು ತಿಳಿಸಿದರು. ಇತ್ತೀಚಿಗೆ ವಿದ್ಯಾವಂತರಾಗಿ ವಿದ್ಯಾವಂತರ ಆಗುತ್ತಾ ಅನೇಕ ವೃದ್ರಾಶ್ರಮಗಳು ಪ್ರಾರಂಭಗೊಳ್ಳುತ್ತವೆ, ಎಂದು ವಿಷಾದಿಸಿದರು ಇಂಥ ವೃದ್ಧಾಶ್ರಮಗಳು ಇರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಇದೆ ಎಂದು ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ಆನ್ಲೈನಿನಲ್ಲಿ ಮಾತನಾಡಿದ ಹಾಸನ ತಾಲೂಕು ಹೆರಗು ಗ್ರಾಮದ ಹಾಗೂ ಹಾಸನ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಅಮೆರಿಕದ oklahoma ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಆದ D” ಸುಂದರೇಶ್ ಎಸ್ ಹೆರಗು ಅವರು ಮಾತನಾಡಿ, ನಾನು ಪ್ರಾಥಮಿಕ ಶಿಕ್ಷಣ ನಮ್ಮ ಗ್ರಾಮದಲ್ಲಿಯೇ ಮಾಡಿ ನಂತರ ಹಾಸನದಲ್ಲಿ ನಮ್ಮ ತಾತ ಕಸ್ತೂರಿ ರಂಗಾಚಾರ್ ಅವರ ರದ ಕಸ್ತೂರಿ ರಂಗಾಚಾರ್ಯ ಅವರ ಮನೆಯಲ್ಲಿ ಇದ್ದುಕೊಂಡು ಹಾಸನದಲ್ಲಿ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದೇನೆ ನಾವು ಏನಾದರೂ ಸಾಧಿಸಬೇಕಾದರೆ ನಮ್ಮಲ್ಲಿ ಶ್ರಮ ಆಸಕ್ತಿ ಕೆಲಸ ಮಾಡುವಂತಹ ಮನೋಭಾವನೆ ಇರಬೇಕು ನಮ್ಮ ಮನಸ್ಸನ್ನು ಕೇಂದ್ರಿಕರಿಸಿಕೊಂಡು ಇದ್ದಾಗ ನಾವು ಏನಾದರೂ ಸಾಧನೆ ಮಾಡಬಹುದು ತಾವು ಕಾಲೇಜಿನಲ್ಲಿ ಪಡೆದ ಜ್ಞಾನವನ್ನು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಉಪಯೋಗಿಸಿಕೊಳ್ಳಬೇಕು ಜೀವನದಲ್ಲಿ ಉತ್ತಮವಾಗಿ ನೆಲೆಗೊಳ್ಳಬೇಕು ನಾವು ಯಶಸ್ವಿಗೆ ಯಾವುದೇ ರೀತಿಯ ದಾರಿ ಹಿಡಿಯಬಾರದು ಶ್ರಮವಹಿಸಿ ದುಡಿದು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಾಗ ನಾಯಕತ್ವ ಬೆಳೆಸಿಕೊಂಡು ಕೊಂಡು ಸತ್ಪ್ರಜೆಗಳಾಗಬೇಕು ಮತ್ತು ಪ್ರಾಮಾಣಿಕತೆಯಿಂದ ನಾವು ಕಾರ್ಯನಿರ್ವಹಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು ನಾವು ಓದಿದ ಕಾಲೇಜಿಗೆ ಏನಾದರೂ ಸಹಾಯ ಮಾಡುವಂತಹ ಮನಸ್ಸು ನಮಗಿರಬೇಕು ಹಾಗೂ ಸಮಾಜದ ಋಣ ನಮ್ಮ ಮೇಲಿದೆ ಸಮಾಜಕ್ಕೆ ನಾವು ಕಾರ್ಯನಿರ್ವಹಿಸುವ ಕೆಲಸವು ಪ್ರಾಮಾಣಿಕವಾಗಿದ್ದರೆ ನಾವು ನಮ್ಮ ಜೀವನದಲ್ಲಿ ಏನಾದರೂ ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ಸಿ ವಿ ವೆಂಕಟೇಶ್ ಮಾತನಾಡಿ ನಮ್ಮ ಕಾಲೇಜ್ ಉತ್ತಮವಾದ ರಿಸಲ್ಟ್ ನೀಡುತ್ತಿದೆ ಹಾಗೂ ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಅವರಿಗೆ ಅತ್ಯುತ್ತಮವಾದ ಸೌಕರ್ಯವನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಮಾಡಿದೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ಸ್ ಅವಾರ್ಡ್ ಅನ್ನು ಸರ್ದಾರ್ ವೆಂಕಟರಾಮಯ್ಯ ಮೆಮೋರಿಯಲ್ ಹಾಗೂ ಶ್ರೀ ಎಜಿ ರಾಮಚಂದ್ರರಾವ್ ಮೆಮೋರಿಯಲ್ ವತಿಯಿಂದ ಬಿಎಸ್ ವಿಶ್ವಾಸ್ ಹಾಗೂ ಭೂಮಿಕಾ ರವರಿಗೆ ನೀಡಲಾಯಿತು
ಎಂ ಫೌಂಡೇಶನ್ ಔಟ್ ಗೋಯಿಂಗ್ ಸ್ಟೂಡೆಂಟ್ಸ್ ಅವಾರ್ಡ್ ಜಿಎಲ್ ನಲ್ಲುರೆ ಗೌಡ ಮೆಮೋರಿಯಲ್ ವತಿಯಿಂದ ಸಿ ವರ್ಷಿಣಿ ಅವರಿಗೆ ನೀಡಲಾಯಿತು
ಬಿ ಜಿ ಗುರಪ್ಪ ಮೆಮೋರಿಯಲ್ ವತಿಯಿಂದ ಸಿವಿಲ್ ಇಂಜಿನಿಯರಿಂಗ್ ಟಿ ತನುಶ್ರೀ ನೀಡಲಾಯಿತು ಹಾರನಹಳ್ಳಿ ರಾಮಸ್ವಾಮಿ ಮೆಮೋರಿಯಲ್ ವತಿಯಿಂದ ಮೆಕ್ಯಾನಿಕಲ್ ವಿಭಾಗದ ಸಿ ಶರತ್ ಕೃಷ್ಣ ಅವರಿಗೆ ನೀಡಲಾಯಿತು
ಡಿ ಎ ಚಂದ್ರೇಗೌಡ ಮೆಮೋರಿಯಲ್ ವತಿಯಿಂದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ವಿಭಾಗದ ಎಚ್ ಎ ಡಿ ಸು ಸುಶಿ ರವರಿಗೆ ನೀಡಲಾಯಿತು
ಬಿಎಸ್ ವೆಂಕಟೇಶಮೂರ್ತಿ ಮೆಮೋರಿಯಲ್ ವತಿಯಿಂದ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ವಿಭಾಗದ ಕೆ ಕಾರ್ತಿಕನ್ ನೀಡಲಾಯಿತು
ಕೆ ಎ ನಂಜಪ್ಪ ಗೌಡ ಮೆಮೋರಿಯಲ್ ವತಿಯಿಂದ ಇಂಡಸ್ಟ್ರಿಯಲ್ ಪ್ರೊಡಕ್ಷನ್ ವಿಭಾಗದ ಎಚ್ ಪಿ ಕೃತಿಕಾ ರವರಿಗೆ ನೀಡಲಾಯಿತು
ಎಚ್ ಪಿ ಧರ್ಮಪ್ಪ ಮೆಮೋರಿಯಲ್ ಕಂಪ್ಯೂಟರ್ ಸೈನ್ಸ್ ವಿಭಾಗದ ಎ ವಿ ಶ್ರೇಯಸ್ ಶ್ರೀ ರವರಿಗೆ ನೀಡಲಾಯಿತು
ಬಿಎನ್ ಬೋರೇಗೌಡ ಮೆಮೊರಿಯಲ್ ವತಿಯಿಂದ ಎಲೆಕ್ಟ್ರಾನಿಕ್ಸ್ ಇನ್ಸ್ಟ್ರುಮೆಂಟಲ್ ವಿಭಾಗದ ಬಿಎಲ್ ಅಶ್ವಿನಿ ರವರಿಗೆ ನೀಡಲಾಯಿತು
ಚಂದಪ್ಪ ಪಾಟೀಲ್ ಮೆಮೋರಿಯಲ್ ವತಿಯಿಂದ ಇನ್ಫರ್ಮೇಶನ್ ಸೈನ್ಸ್ ವಿಭಾಗದ ಡಿ ವಿ ಮೌನಿಕ ಶ್ರೀಶೈಲ ಮಠ ಬಡವರಿಗೆ ನೀಡಲಾಯಿತು
ಪಿಜಿ ಕೋರ್ಸಿನ m-tech ವಿದ್ಯಾರ್ಥಿಗಳಾದ ಶರತ್ ಜೆ ಹಾಗೂ ಶ್ವೇತಾ ಮತ್ತು ಪೂಜಾ ಸುಮನ್ ರವರಿಗೆ ಗೋಲ್ಡ್ ಮೆಡಲ್ ಅನ್ನು ಕಾಲೇಜ್ ವತಿಯಿಂದ ನೀಡಲಾಯಿತು ಇಂಜಿನಿಯರಿಂಗ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ಸಿವಿಲ್ ವಿಭಾಗದ ನಂದಿನಿ ಎಂಡಿ
ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಿ ಶರತ್ ಕೃಷ್ಣ
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಜಿ ನಿಯರಿಂಗ್ ವಿಭಾಗದಿಂದ ಡಿ ಸುಶ್ಮಿತಾ
ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಿಂದ ಕಾರ್ತಿಕ್ನಾ

ಇಂಡಸ್ಟ್ರಿಯಲ್ ಪ್ರೊಡಕ್ಷನ್ ಇಂಜಿನಿಯರಿಂಗ್ ವಿಭಾಗದಿಂದ ಎಚ್ಪಿ ಕೃತಿಕಾ
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಿಂದ ಎವಿ ಶ್ರೇಯಸ್ ಶ್ರೀ ರವರಿಗೆ ನೀಡಲಾಯಿತು
ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಅಶ್ವಿನಿ ಬಿ ಎಲ್ ರವರಿಗೆ ನೀಡಲಾಯಿತು ಇನ್ಫರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಿಂದ ಮೌನಿಕ ಶ್ರೀಶೈಲ ಮಠ ಡಿವಿ ನೀಡಲಾಯಿತು
ಈ ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಆರ್ ಟಿ ದೇವೇಗೌಡರು ಸಹಕಾರ್ಯದರ್ಶಿ ಡಾಕ್ಟರ್ ಡಿ ಸಿ ಅರವಿಂದ್ ಕೋಶಾಧ್ಯಕ್ಷರಾದ ಆರ್ ಶೇಷಗಿರಿ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಉಪಾಧ್ಯಕ್ಷರಾದ ಚೌಡಳ್ಳಿ ಪುಟ್ಟರಾಜು ನಿರ್ದೇಶಕರುಗಳಾದ ನಾಗೇಂದ್ರಯ್ಯ ಡಿ ಬಿ ಹೇಮಂತ್ ಕುಮಾರ್ ಚಂದ್ರಶೇಖರಯ್ಯ್ ಸಿ ಆರ್ ಜಗದೀಶ್ ಶ್ರೀನಿವಾಸ್ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ರಾಮಕೃಷ್ಣಯ್ಯ ಹಾಗೂ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಪರೀಕ್ಷಾ ವಿಭಾಗದ ಡೀನ್ ಗಳಾದ ಡಾ” ಪ್ರದೀಪ್ ಡಾ” ಉಮಾ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ”k p ರವಿಕುಮಾರ್ i S U ನ ಮಂಗಳೂರಿನ ಭಂಡಾರಿ ರವರು ಹಾಗೂ ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here