ಇನ್ನು ಕೆಲವೇ ದಿನಗಳಲ್ಲಿ ಹಾಸನ ಜಿಲ್ಲಾಧಿಕಾರಿ ಆದೇಶದಂತೆ ಸಕಲೇಶಪುರ ಪಟ್ಟಣದ ಮುಖ್ಯ ರಸ್ತೆ (BM ರಸ್ತೆ) ಚಹರೇ ಬದಲಾಗಲಿದೆ

0

ಸಕಲೇಶಪುರ : ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆರ್‌ ಗಿರೀಶ್‌ ಖಡಕ್ ಆದೇಶ

6 ಮೀಟರ್‌ನಷ್ಟು ರಸ್ತೆ ವಿಸ್ತರಣೆಗೆ ಪರಿಮಿತಿ ನಿಗದಿಪಡಿಸಲಾಗಿದ್ದು , ಸ್ಥಳೀಯ ಕಟ್ಟಡದ ಮಾಲೀಕರು, ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿ, ಸಿಬ್ಬಂದಿ ಜತೆ ಸಭೆ ನಡೆಸಿ, ವಿಸ್ತರಣೆ ಸಂಬಂಧಿಸಿದ ವಿಸ್ತ್ರತಾ ಯೋಜನಾ ವರದಿ ತಯಾರಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸಕಲೇಶಪುರದ ಉಪವಿಭಾಗಾಧಿಕಾರಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌, ತಹಶೀಲ್ದಾರ್‌ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ಕೊಟ್ಟಾಗಿದೆ

ಪ್ರತಿದಿನ ವಾಹನ ದಟ್ಟಣೆ ಯಿಂದ ಅಪಘಾತ ಸಂಭವಿಸುತ್ತಿದ್ದು , ಅಲ್ಲದೆ ಇಲ್ಲಿಂದಲೇ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉದ್ಭವಿಸುತ್ತಿದ್ದು ಎಂದು 2018ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಲಕ್ಷ್ಮೀಕಾಂತ ರೆಡ್ಡಿ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸಿದ್ದರು.  ಕಾರ್ಯಾಚರಣೆ ಖಂಡಿಸಿ ವರ್ತಕ ಲಿಂಗರಾಜ್‌ ನೇತೃತ್ವದಲ್ಲಿ ಕೆಲ ಉದ್ಯಮಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಂತರ ಪ್ರಕರಣವನ್ನು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿ

ಸಾರ್ವಜನಿಕ ಹಿತದೃಷ್ಟಿ, ರಸ್ತೆ ಅಪಘಾತ ತಪ್ಪಿಸುವುದು ಹಾಗೂ ಸುಗಮ ಸಂಚಾರ ಉದ್ದೇಶದಿಂದ ವಿಸ್ತರಣೆ ಕಾರ್ಯ ಕೈಗೊಳ್ಳಲಾಗಿರುವುದರಿಂದ ಈ ಮೇಲ್ಕಂಡ ಅಂತಿಮ ಆದೇಶ ಹಾಸನ ಜಿಲ್ಲಾಧಿಕಾರಿ ಕಛೇರಿಯಿಂದ ಹೊರಡಿಸಲಾಗಿದೆ.

#sakleshpur #sakleshpurnews #hassannews #hassan

LEAVE A REPLY

Please enter your comment!
Please enter your name here