ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಸರ್ಕಾರದ ಮಾರ್ಗದರ್ಶನದಂತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಎಸ್.ಎಲ್. ಭೈರಪ್ಪ ಅವರ ಹುಟ್ಟೂರಾದ ಸಂತೇಶಿವರ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು ಎಸ್.ಎಲ್. ಭೈರಪ್ಪ ಅವರ ಆಶಯದಂತೆ ಗ್ರಾಮೀಣ ಸಂಸ್ಕøತಿಯ ವಾಸ್ತುಶಿಲ್ಪ ಶೈಲಿಯಲ್ಲಿ ರಫ್ ಸ್ಕೆಚ್ ಮಾಡಿಸಿಕೊಡುವಂತೆ ಗೌರಮ್ಮ ಸ್ಮಾರಕ ಟ್ರಸ್ಟ್ ಅಧಿಕಾರಿಗಳಿಗೆ ತಿಳಿಸಿದರು.
ಗೌರಮ್ಮ ಸ್ಮಾರಕ ಟ್ರಸ್ಟ್‍ನ ಟ್ರಸ್ಟಿಯಾದ ಉದಯ ಶಂಕರ್ ಅವರು ಮಾತನಾಡಿ ಸರ್ಕಾರ ನೀಡಲಾಗಿರುವ ಅನುದಾನದಲ್ಲಿ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಮ್ಯೂಸಿಯಂ, ಸಂಶೋಧನಾ ಕೇಂದ್ರ ಮತ್ತು ಸಂಶೋಧನೆ ಮಾಡಲು ಬಂದವರಿಗೆ ಉಳಿಯಲು ಹಾಸ್ಟಲ್ ಹಾಗೂ ಸಾಹಿತ್ಯ, ಸಂಗೀತ ಹಾಗೂ ನಾಟಕಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಂಗಮಂದಿರವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದರು.
ಗೌರಮ್ಮ ಸ್ಮಾರಕ ಟ್ರಸ್ಟ್‍ನ ಕಾರ್ಯದರ್ಶಿ ಕೃಷ್ಣ ಪ್ರಸಾದ್, ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಜಿ.ಎಲ್. ಶೇಖರ್, ಚಲನಚಿತ್ರ ನಿರ್ದೇಶಕರಾದ ಪಿ. ಶೇಷಾದ್ರಿ, ಎಸ್.ಎಲ್. ರಾಮಚಂದ್ರ, ಎಸ್.ಕೆ. ಲಕ್ಷಮಿ ನಾರಾಯಣ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ, ಕನ್ನಡ ಮತ್ತು ಸಂಸಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸುದರ್ಶನ್ ಹಾಜರಿದ್ದರು.