ಜನಪದ ಕಲಾವಿದರನ್ನು ಉಳಿಸಿಕೊಂಡರೆ ಜನಪದ ಕಲೆ ,ಭಾರತೀಯ ಸಂಸ್ಕೃತಿ ,ಆಚಾರ ವಿಚಾರ ಪರಂಪರೆ ಮುಂದಿನ ತಲೆ ಮಾರಿಗೆ ಉಳಿಯುತ್ತದೆ. ಕೊರೋನ ಸಂದರ್ಭದಲ್ಲಿ ಕಲಾವಿದರ ನೆರವಿಗೆ ಕರ್ನಾಟಕ ಜಾನಪದ ಪರಿಷತ್ತು ಸಹಾಯ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಡಾ.ಗುರುರಾಜ ಹೆಬ್ಬಾರ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಾಸನ ಮತ್ತು ಕಾಮಧೇನು ವಿದ್ಯಾಶ್ರಮ ಹಾಸನ ಸಹಯೋಗದಲ್ಲಿ,ಚೈತನ್ಯ ವೃದ್ಧಾಶ್ರಮದಲ್ಲಿ ಏರ್ಪಡಿಸಿದ್ದ ತೊಗಲುಗೊಂಬೆ ಮೇಳ ಉದ್ಘಾಟಿಸಿ ಅವರು ಮಾತನಾಡಿ ಜನಪದ ಕಲೆ ಶ್ರೀಮಂತ ಕಲೆ.ಜನಪದ ಕಲಾವಿದರು ನಮ್ಮ ಸಾಂಸ್ಕೃತಿಕ ರಾಯಭಾರಿಗಳು.ಕಲೆ ಉಳಿಯಬೇಕಾದರೆ ಸಮಾಜ ಕಲಾವಿದರ ನೆರವಿಗೆ ಬರಬೇಕು. ಸರ್ಕಾರ ಕೂಡ ಜನಪದ ಕಲಾವಿದರನ್ನು ಗೌರವದಿಂದ ಕಾಣಬೇಕು. ತೊಗಲುಗೊಂಬೆ ಅತ್ಯಂತ ಪುರಾತನ ಕಲೆ. ಕಲೆಯಿಂದಲೆ ಇವತ್ತು ಸಿನಿಮಾ,ಕಾರ್ಟೂನ್ ಕಲೆಗಳೆಲ್ಲ ಅಭಿವೃದ್ಧಿಯಾಗಿವೆ ಎಂದು ಗುರುರಾಜ ಹೆಬ್ಬಾರ್ ಹೇಳಿದರು.
ಅಂತರ ರಾಷ್ಟ್ರೀಯ ಜನಪದ ಕಲಾವಿದರಾದ ಗುಂಡೂರಾಜ್ ಮತ್ತು ತಂಡ ಕರಿಭಂಟನ ಕಾಳಗ ಎಂಬ ತೊಗಲುಗೊಂಬೆ ಮೇಳ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದಡಾ.ಹಂಪನಹಳ್ಳಿ ತಿಮ್ಮೇಗೌಡವಹಿಸಿದ್ದರು.ಡಾ.ಐ.ಎಂ.ಮೋಹನ್,ಎಚ್.ಆರ್.ಮಂಜಪ್ಪಗೌಡರು.ಮುತ್ತತ್ತಿರಾಜಣ್ಣ,ವೆಂಕಟರಾಮುಉಪಸ್ಥಿತರಿದ್ದರು.