ಪ್ರಧಾನ ಮಂತ್ರಿ ಮಾನ್-ಧನ್ ಪಿ.ಎಂ.-ಎಸ್.ವೈ.ಎಂ. ಯೋಜನೆಯ ವ್ಯಾಪರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಬೀದಿ ನಾಟಕದ ಮೂಲಕ ಅರಿವು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಆರ್. ಗಿರೀಶ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗೃಹ ಆಧಾರಿತ ಕಾರ್ಮಿಕರು, ಬೀದಿಬದಿ ವ್ಯಾಪರಿಗಳು ಬಿಸಿಯೂಟ ಸಿದ್ದಪಡಿಸುವವರು, ಹಮಾಲಿಗಳು, ಕೈಮಗ್ಗ ಕಾರ್ಮಿಕರು ಹಾಗೂ ಇತರೆ ಉದ್ಯೋಗ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಯನ್ನು ಕೇಂದ್ರ ಸಕಾರ ಜಾರಿಗೆ ತಂದಿದ್ದು ಕಾರ್ಮಿಕರು ಯೋೀಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಗೌಡ, ಜಿಲ್ಲಾ ವಾತಾಧಿಕಾರಿ ವಿನೋದ್ ಚಂದ್ರ, ಕಾರ್ಮಿಕ ಅಧಿಕಾರಿ ಆನಂದ್ ರಾವ್ ಮತ್ತಿತರರು ಹಾಜರಿದ್ದರು.