ಕಡಲೆಕಾಯಿ ಯಾರಿಗೆ ಗೊತ್ತಿಲ್ಲ? ಕಡಲೆಕಾಯಿ ಬಡವರ ಬಾದಾಮಿ ಆದರೆ ಆರೋಗ್ಯದಲ್ಲಿ ಇದಕ್ಕೆ ಶ್ರೀಮಂತಿಕೆ ಬಹಳಷ್ಟು. ಇದು ಯಾಕಿಷ್ಟು ಆರೋಗ್ಯಕರ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ನಿಮ್ಮ ಬಡವರ ಬಾದಾಮಿಯ ಉಪಯೋಗಗಳು

ಕಡಲೆಕಾಯಿ ಪ್ರಯೋಜನಗಳು
• ಹೃದಯದ ಆರೋಗ್ಯಕ್ಕೆ ಸಹಾಯಕಾರಿ:
ಹಲವರಿಗೆ ಕಡಲೆಕಾಯಿ ಎಂದರೆ ಬಹಳ ಇಷ್ಟ ಹಾಗಾಗಿ ಕಡಲೆಕಾಯಿ ನಮ್ಮ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೇಯಿಸಿದ ಕಡಲೆಕಾಯಿ ಗಳಲ್ಲಿ ಫ್ಲೇಮಿನೈಡ್ ಮತ್ತು ಫಾಲಿ ಫೈನಲ್ಸ್ ಅಧಿಕ ಮಟ್ಟದಲ್ಲಿರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಉತ್ತಮವಾದ ಪದಾರ್ಥ.
• ದೇಹಕ್ಕೆ ಶಕ್ತಿ ನೀಡುತ್ತದೆ:
ಕಡಲೆಕಾಯಿ ನಲ್ಲಿ ಪ್ರೊಟೀನ್ ಹಾಗೂ ನೈಸರ್ಗಿಕ ಸಕ್ಕರೆ ಅಂಶ ಉತ್ತಮ ಪ್ರಮಾಣದಲ್ಲಿದೆ. ಹಾಗೂ ಯಾವುದೇ ರೀತಿಯ ಕೊಬ್ಬಿನಾಂಶ ಇರುವುದಿಲ್ಲ ಹಾಗಾಗಿ ಪ್ರೋಟೀನ್ ನಮ್ಮ ದೇಹದ ಶಕ್ತಿಗೆ ಬಹಳ ಸಹಾಯಕಾರಿ. ಕಡಲೆಕಾಯಿ ತಿನ್ನುವುದರಿಂದ ನಾವು ಇನ್ನಷ್ಟು ಹೆಚ್ಚು ಕೆಲಸ ಮಾಡಬಹುದು.

• ಉದ್ದ ಹಾಗೂ ದಟ್ಟವಾದ ಕೂದಲಿಗೆ ಲಾಭಕಾರಿ:
ಅಮೈನೊ ಆಸಿಡ್ ಹಾಗೂ ಪ್ರೊಟೀನ್ ಅಂಶಗಳು ಕೂದಲ ಬೆಳವಣಿಗೆ ಉತ್ತಮ ಹಾಗಾಗಿ ಕಡಲೆ ನಿಮ್ಮ ಕೂದಲಿಗೆ ಬಹಳ ಉಪಯೋಗಕಾರಿ.
• ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸುತ್ತದೆ:
ಕಡಲೆಕಾಯಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ ಇದರಲ್ಲಿರುವ ಮ್ಯಾಂಗನೀಸ್ ಹಾಗೂ ಕ್ಯಾಲ್ಸಿಯಂ ಬಂದಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿರಿಸುತ್ತದೆ.

ಹುರಿದು ಹಾಕಿರುವ ಕಡಲೆಕಾಯಿಗಿಂತ ಬೇಯಿಸಿದ ಕಡಲೆಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
ತನ್ವಿ. ಬಿ