ಡಿಸೇಲ್ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಇಂದು ಎರಡನೇ ದಿನವು ಕಾಂಗ್ರೆಸ್ ಹಾಸನ ಜಿಲ್ಲೆಯಾದ್ಯಂತ ಪ್ರತಿಭಟನೆ

0

ಹಾಸನ ಜಿಲ್ಲಾದ್ಯಂತ ಎರಡನೇ ದಿನವು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ

ಬೇಲೂರು ಟೌನ್ ನೇಹರೂ ನಗರದ ಇರುವ ಪೆಟ್ರೋಲ್ ಬಾಂಕ್ ಮುಂಭಾಗದಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಲೂರು ಟೌನ್ ನೇಹರೂ ನಗರ ದಲ್ಲಿ ಇರುವ ಪೆಟ್ರೋಲ್ ಬಾಂಕ್ ಮುಂಭಾಗದಲ್ಲಿ ಮಾನ್ಯ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರು ಸನ್ಮಾನ್ಯ ಶ್ರೀ ಬಿ ಶಿವರಾಮು ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಿಶಾಂತ್, ಜಿಲ್ಲಾ ಪಂಚಾಯತ್ ಸದಸ್ಯರಾದ ತೋಪಿಕ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮಾಜಿ ಅಧ್ಯಕ್ಷರಾದ ಎಂ.ಆರ್.ವೆಂಕಟೇಶ್, ತಾಲ್ಲೂಕು ಅಲ್ಪಸಂಖ್ಯಾತರ ಘಟಕ ಅಧ್ಯಕ್ಷರಾದ ಅಕ್ರಂ, ತಾಲ್ಲೂಕು ಹಿಂದುಳಿದ ವರ್ಗದ ಅಧ್ಯಕ್ಷರಾದ ಸತ್ಯನಾರಾಯಣ, ಪುರಸಭೆ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಶಾಂತಕುಮಾರ್, ಪುರಸಭೆ ಮಾಜಿ ಉಪಾಧ್ಯಕ್ಷರಾದ ಅರುಣ್ ಕುಮಾರ್, ಬೇಲೂರು ಟೌನ್ ಅಧ್ಯಕ್ಷರಾದ ಅಶೋಕ್, ಮಾಜಿ ಪುರಸಭೆ ಸದಸ್ಯರಾದ ಜುಬೇರ್, ಪುರಸಭೆ ಹಾಲಿ ಸದಸ್ಯರಾದ ಜಮಾಲ್,ದಾನಿ,ಫೈಯೋಜ್, ಭರತ್, ಕಾಂಗ್ರೆಸ್ ಮುಖಂಡರಾದ ರಂಗನಾಥ, ಪಾಪಣ್ಣ, ನವೀದ್, ಧರ್ಮಪಾಲ್, ಹನುಮಂತ, ಇಕ್ಬಾಲ್ ಹಾಗೂ ಕಾಂಗ್ರೆಸ್ ಮುಂಚೂಣಿ ಘಟಕದ ಅಧ್ಯಕ್ಷರು, ಸದಸ್ಯರು ಮುಖಂಡರು ಇತತರು ಉಪಸ್ಥಿತರಿದ್ದರು.

ಅರಕಲಗೂಡು ತಾಲ್ಲೂಕಿನ ಮಲಿಪಟ್ಟಣ್ಣದ ಪೆಟ್ರೋಲ್ ಬಂಕ್ ಎದುರು ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ತೈಲಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ..ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ.ದಿನೇಶ್ ಭೈರೇಗೌಡ . ವೈಯಕ್ತಿಕ ಕಾರ್ಯದರ್ಶಿ ಮಧು ರಂಗಸ್ವಾಮಿ.. ಪ್ರಸನ್ನಕುಮಾರ್. ಮಂಜುನಾಥ್.ಜಮೀರ್ . ಮಂಜು.ಗೋಪಿನಾಥ್ ಸುಜನ್ ಹಾಗೂ ಹಲವರು ಮುಖಂಡರು ಭಾಗವಹಿಸಿದ್ದರು

ಪೆಟ್ರೋಲ್ ಬೆಲೆ “100” ಗಡಿ ದಾಟಿದ ವಿರುದ್ಧವಾಗಿ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ 2ನೇ ದಿನದ ಪ್ರತಿಭಟನೆ ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನಗರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ವಿಜಯ ನಗರದಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ 100 ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ ಮಹೇಶ್, ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಆರೀಫ್,ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಶಾಹಿದ್ ಹೇಮಂತ್ ಕುಮಾರ್,ಮಾಜಿ ನಗರ ಸಭೆ ಸದಸ್ಯರಾದ, ಅಬ್ದುಲ್ ಖಯ್ಯುಮ್, ಪ್ರಕಾಶ,ವೆಂಕಟೇಶ್, ಚಂದು ಹಾಗೂ ಹಲವಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here