ಹೊಳೆನರಸೀಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ 123 ಕಂಪ್ಯೂಟರ್ ವಿತರಣೆ

0

ಹಾಸನದ ರೋಟರಿ ರಾಯಲ್ ಮತ್ತು ರೋಟರಿ ಹಾಸನ್ ಹೇರಿಟೇಜ್ ಕ್ಲಬ್ ವತಿಯಿಂದ ಹೊಳೆನರಸೀಪುರದ ಪಾಲಿಟೆಕ್ನಿಕ್ ಸರ್ಕಾರಿ ಕಾಲೇಜಿಗೆ 123 ಕಂಪ್ಯೂಟರ್ ಗಳನ್ನು ವಿತರಿಸಲಾಯಿತು. ರೋಟರಿ ಸಂಸ್ಥೆ ಮತ್ತು ಇನ್ಫೋಸಿಸ್ ಸಹಯೋಗದೊಂದಿಗೆ ಕಂಪ್ಯೂಟರನ್ನು ಒದಗಿಸಲಾಗಿದ್ದು 123 ಕಂಪ್ಯೂಟರ್ಗಳ ಪ್ರಾಯೋಜಕತ್ವವನ್ನು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಭವಾನಿ ರೇವಣ್ಣನವರು ಮಾಡಿದ್ದು ಹೊಳೆನರಸೀಪುರದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಳೆನರಸೀಪುರ ದ ಮಾಜಿ ಸಚಿವರು ಹಾಗೂ ಶಾಸಕರಾದ ಎಚ್ ಡಿ ರೇವಣ್ಣ ರವರು ಹಾಗೂ ಶ್ರೀಮತಿ ಭವಾನಿ ರೇವಣ್ಣ ರವರು ಹಾಗೂ ತಾಲೂಕು ದಂಡಾಧಿಕಾರಿಗಳು, ಡಿವೈಎಸ್ಪಿ ಮುರಳಿಧರ್ ರವರು, ತಾಲೂಕು ಪಂಚಾಯತಿ ಅಧ್ಯಕ್ಷರು, ಕ್ಲಬ್ಬಿನ ಅಧ್ಯಕ್ಷರಾದ ಮನು ಎಸ್ ಆರ್, ಹಾಗೂ ಶ್ರೀಮತಿ ಲತಾ ವೇಣುಗೋಪಾಲ್ ರವರು ವೇದಿಕೆಯಲ್ಲಿ ಆಸೀನರಾಗಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪಾಂಡುರಂಗ ವಿಠಲ ರವರಿಗೆ ಕಂಪ್ಯೂಟರನ್ನು ಶ್ರೀಮತಿ ಭವಾನಿ ರೇವಣ್ಣ ರವರು ಮತ್ತು ಶಾಸಕರಾದ ಎಚ್ ಡಿ ರೇವಣ್ಣ ಅವರು ಹಸ್ತಾಂತರಿಸಿದರು.

ವೇದಿಕೆಯಲ್ಲಿ ಮತನಾಡಿದ ರೇವಣ್ಣನವರು ರೋಟರಿ ಸಂಸ್ಥೆಯ ಸೇವಾ ಗುಣಗಳನ್ನು ಸಂಸ್ಥೆಯ ಸೇವಾಕಾರ್ಯಗಳನ್ನು ಹೊಗಳಿದರು.

ಶ್ರೀಮತಿ ಭವಾನಿ ರೇವಣ್ಣ ಅವರು ವೇದಿಕೆಯಲ್ಲಿ ಮಾತನಾಡಿ ರೋಟರಿ ಸಂಸ್ಥೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ನೀಡಿದ್ದ ವಿದ್ಯಾ ಸೇತು ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತನಾಡಿದರು ಮತ್ತು ರೋಟರಿ ಸಂಸ್ಥೆಯ ಯಾವುದೇ ಸಮಾಜಮುಖಿ ಸೇವಾಕಾರ್ಯಗಳಿಗೆ ನಾನು ಸಹಕರಿಸಲು ಯಾವತ್ತೂ ಸದಾ ಸಿದ್ಧ ಎಂಬುದಾಗಿ ತಿಳಿಸುತ್ತಾ ಕಂಪ್ಯೂಟರ್ಗಳನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ನೆರೆದಿದ್ದ ಸುಮಾರು ಎರಡುವರೆ ಸಾವಿರ ಕಾಲೇಜಿನ ವಿದ್ಯಾರ್ಥಿಗಳಿಗೆ ಶ್ರೀಮತಿ ಭವಾನಿ ರೇವಣ್ಣನವರು ಊಟದ ವ್ಯವಸ್ಥೆಯನ್ನು ಮಾಡಿದ್ದರು.

ಹಾಗೂ ಹೊಳೆನರಸೀಪುರ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುದ್ಧ ನೀರಿನ ಘಟಕವನ್ನು ಕಾಲೇಜಿನ ಸಮಸ್ತ ವಿದ್ಯಾರ್ಥಿಗಳಿಗಾಗಿ ಶಾಸಕರು ಹಾಗೂ ಶ್ರೀಮತಿ ಭವಾನಿ ರೇವಣ್ಣನವರು ಕೊಡುಗೆಯಾಗಿ ನೀಡಿ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here