ಗಮನಿಸಿ ಹಾಸನ ಜಿಲ್ಲೆಯಲ್ಲಿ ನಾಳೆ 14 ರಿಂದ 21 ರವರೆಗೆ ಹೊಸ ಲಾಕ್ ಡೌನ್ ಗೈಡ್ ಲೈನ್ಸ್ ಬಿಡುಗಡೆ

0

ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಉಲ್ಬಣವಾಗಿದ್ದು, ನಿಯಂತ್ರಣ ಕಾರ್ಯ ಅತ್ಯಾವಶ್ಯಕವಾಗಿರುವ ಹಿನ್ನೆಲೆಯಲ್ಲಿ, ಕೋವಿಡ್-19ರ ಎರಡನೇ ಅಲೆಯ ಸೋಂಕಿನ ಸರಪಳಿಯನ್ನು ಮುರಿಯುವ ಸಂಬಂಧ ವಿಪತ್ತು ನಿರ್ವಹಣೆ ಕಾಯ್ದೆ 2005ರಲ್ಲಿನ ಸೆಕ್ಷನ್ 24ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯಾದ್ಯಂತ ಕೆಲವು ಆಯ್ದ ಚಟುವಟಿಕೆ ಕಾರ್ಯಚರಣೆಯನ್ನು ದಿನಾಂಕ 14.06.2021ರ ಬೆಳಗ್ಗೆ 8.00ಗಂಟೆಯಿಂದ ದಿನಾಂಕ: 21.06.2021ರ ಬೆಳಗ್ಗೆ 6.00 ಗಂಟೆಯ ವರಗೆ ನಿರ್ಭಂಧಿಸಿ ಮತ್ತು ಅನುಮತಿಸಿ ಹೊರಡಿಸಿರುವ ಆದೇಶದಂತೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೂವಿಡ್-19ರ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಸುವಂತೆ ಆದೇಶಿಸಲಾಗಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 158 ಟಿಎನ್‌ಆರ್ 2020, ದಿನಾಂಕ: 11/06/2021 ರಕ್ತನ ಪರಿಷ್ಕೃತ ಮಾರ್ಗಸೂಚಿಯಂತೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ 14.06.2021 ರಿಂದ ಜಾರಿಗೆ ಬರುವಂತೆ ದಿನಾಂಕ: 21.06.2021ರ ಬೆಳಗ್ಗೆ 8.00 ಗಂಟೆಯ ವರಗೆ ವಾರದ ಮೂರು ದಿನಗಳು ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಉಲ್ಲೇಖ (2) & (3) ಮಾರ್ಗಸೂಚಿಯಲ್ಲಿ ವಿವರಿಸಿರುವ ಚಟುವಟಕಗಳಿಗೆ ಬೆಳಗ್ಗೆ 8.00 ರಿಂದ 12.00 ಗಂಟೆಯವರೆಗೆ ಮಾತ್ರ ಅನುಮತಿ ನೀಡಿ, ಹಾಗೂ ಈ ಕೆಳಕಂಡ ಚಟುವಟಿಕೆಗಳನ್ನು ಹೊರತುಪಡಿಸಿ ಉಆದ ಎಲ್ಲಾ ರೀತಿಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಸೂಕ್ತವೆಂದು ನನಗೆ ಮನವರಿಕೆಯಾಗಿರುವುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

> ವೈದ್ಯಕೀಯ ಸೇವೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳು ಮತ್ತು ಎಲ್ಲಾ ಹಾಲಿನ ಬೂತುಗಳು,

> ಬ್ಯಾಂಕ್ ಹಾಗೂ ಭಾರತೀಯ ವಿಮಾ ಯೋಜನೆಯ ವ್ಯವಹಾರಗಳನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರ ಬೆಳಗ್ಗೆ 8.00 ರಿಂದ 12.00 ಗಂಟೆಯವರೆಗೆ ಸಾರ್ವಜನಿಕ ಸೇವೆಗಳಗೆ ಹಾಗೂ 1.00 ಗಂಟೆಯವರೆಗೆ ಕಛೇರಿ ಕೆಲಸಕ್ಕೆ ಮಾತ್ರ ಅನುಮತಿ ನೀಡಿ, ಉಆದ ವಾರದ ದಿನಗಳಾದ ಮಂಗಳವಾರ,ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ ರೀತಿಯ ಬ್ಯಾಂಕ್ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.

> ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಅಂಚೆ ಕಛೇರಿಯ ವ್ಯವಹಾರಗಳನ್ನು ಬೆಳಗ್ಗೆ 8.00 ರಿಂದ 12,00
ಗಂಟೆಯವರೆಗೆ ಸಾರ್ವಜನಿಕ ಸೇವೆಗಳಿಗೆ ಹಾಗೂ 1.೦೦ ಗಂಟೆಯವರೆಗೆ ಕಛೇರಿ ಕೆಲಸ ಕಾರ್ಯಗಳಗೆ ಮಾತ್ರ ಅನುಮತಿ ನೀಡಿ,
ಉಳಿದ ವಾರದ ದಿನಗಳಾದ ಮಂಗಳವಾರ,ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ ರೀತಿಯ ಅಂಚೆ ಕಛೇರಿಯ

ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.

> ಪ್ರತಿ ದಿನ ಆಹಾರ, ಹಣ್ಣು, ತರಕಾರಿ ಮತ್ತು ಎಲ್ಲಾ ದಿನಸಿ ಅಗತ್ಯ ವಸ್ತುಗಳು ಹೋಮ್ ಡೆಲವರಿಗೆ ಮಾತ್ರ ವಿನಾಯಿತಿ ನೀಡಿದೆ.

> ರೈತ ಸಂಪರ್ಕ ಕೇಂದ್ರ ಹಾಗೂ ರಸಗೋಬ್ಬರ, ಕೀಟನಾಶಕ ಮಾರಾಟ ಮಳಿಗೆಗಳು ಮತ್ತು ಕೃಷಿಯಂತ್ರೋಪಕರಣ ಮಳಗೆ ವ್ಯವಹಾರಗಳನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 8.00 ರಿಂದ 12.00 ಗಂಟೆಯವರೆಗೆ
ಮಾತ್ರ ನಡೆಸಲು ವಿನಾಯಿತಿ ನೀಡಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣದಿಂದ ಆರ್. ಗಿರೀಶ್, ಭಾ.ಆ.ಸೇ., ಜಿಲ್ಲಾಧಿಕಾರಿ ಹಾಗೂ ಅಲ್ಲಾ ದಂಡಾಧಿಕಾರಿ, ಹಾಸನ ಜಿಲ್ಲೆ, ಹಾಸನ ಆದ ನಾನು ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ವೈರಸ್‌ನ ಎರಡನೇ ಅಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ Disaster Management Act 2005 Section 24 ಹಾಗೂ ಸಿ.ಆರ್.ಪಿ.ಸಿ ಸೆಕ್ಷನ್ 144 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರೋನಾ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ತಡೆಗಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದಿನಾಂಕ 14.06.2021 ರಿಂದ ಜಾರಿಗೆ ಬರುವಂತೆ ದಿನಾಂಕ: 21.06.2021ರ 6.00 ಗಂಟೆಯ ವರಗೆ ವಾರದ ಮೂರು ದಿನಗಳು ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಉಲ್ಲೇಖ (2) & (3) ಮಾರ್ಗಸೂಚಿಯಲ್ಲಿ ವಿವರಿಸಿರುವ ಚಟುವಟಕಗಳಗೆ ಬೆಳಗ್ಗೆ 8.00 ರಿಂದ 12.00 ಗಂಟೆಯವರೆಗೆ ಮಾತ್ರ ಅನುಮತಿ ನೀಡಿ ಹಾಗೂ ಈ ಕೆಳಕಂಡ ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಉಳದ ಎಲ್ಲಾ ರೀತಿಯ ಚಟುವಡಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶಿಸಿದೆ.

> ವೈದ್ಯಕೀಯ ಸೇವೆಗಳು ಮತ್ತು ನ್ಯಾಯಬೆಲೆ ಅಂಗಡಿಗಳು,

> ಎಲ್ಲಾ ಹಾಲಿನ ಬೂತುಗಳು,

> ಬ್ಯಾಂಕ್ ಹಾಗೂ ಭಾರತೀಯ ವಿಮಾ ಯೋಜನೆಯ ವ್ಯವಹಾರಗಳನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರ ಬೆಳಗ್ಗೆ 8.00 ರಿಂದ 12.00 ಗಂಟೆಯವರೆಗೆ ಸಾರ್ವಜನಿಕ ಸೇವೆಗಳಿಗೆ ಹಾಗೂ 1.00 ಗಂಟೆಯವರೆಗೆ ಕಛೇರಿ ಕೆಲಸಕ್ಕೆ ಮಾತ್ರ ಅನುಮತಿ ನೀಡಿ, ಉಳದ ವಾರದ ದಿನಗಳಾದ ಮಂಗಳವಾರ,ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ ರೀತಿಯ ಬ್ಯಾಂಕ್ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.

> ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಅಂಚೆ ಕಛೇರಿಯ ವ್ಯವಹಾರಗಳನ್ನು ಬೆಳಗ್ಗೆ 8.00 ರಿಂದ 12.00 ಗಂಟೆಯವರೆಗೆ ಸಾರ್ವಜನಿಕ ಸೇವೆಗಳಿಗೆ ಹಾಗೂ 100 ಗಂಟೆಯವರೆಗೆ ಕಛೇರಿ ಕೆಲಸ ಕಾರ್ಯಗಳಿಗೆ ಮಾತ್ರ ಅನುಮತಿ ನೀಡಿ. ವಾರದ ದಿನಗಳಾದ ಮಂಗಳವಾರ,ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ ರೀತಿಯ ಅಂಚೆ ಕಛೇರಿಯ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿದ.

> ಪ್ರತಿ ದಿನ ಆಹಾರ, ಹಣ್ಣು, ತರಕಾರಿ ಮತ್ತು ಎಲ್ಲಾ ದಿನಸಿ/ಅಗತ್ಯ ವಸ್ತುಗಳು ಹೋಮ್ ಡಅವರಿಗೆ ಮಾತ್ರ ವಿನಾಯಿತಿ ನೀಡಿದೆ. > ರೈತ ಸಂಪರ್ಕ ಕೇಂದ್ರ ಹಾಗೂ ರಸಗೋಬ್ಬರ, ಕೀಟನಾಶಕ ಮಾರಾಟ ಮಳಗೆಗಳು ಮತ್ತು ಕೃಷಿಯಂತ್ರೋಪಕರಣ ಮಳಗೆ ವ್ಯವಹಾರಗಳನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 8.00 ರಿಂದ 12.00 ಗಂಟೆಯವರೆಗೆ ಮಾತ್ರ ನಡೆಸಲು ವಿನಾಯಿತಿ ನೀಡಿದೆ.

ನಿಷೇದಾಜ್ಞೆ ಅವಧಿಯಲ್ಲಿ ಸರಕು ಸಾಗಾಟದ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನಸಂಚಾರ ಹಾಗೂ ವ್ಯಕ್ತಿಗಳ ಓಡಾಟ ಕಂಡುಬಂದಲ್ಲ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ರ ಉಪಬಂಧಗಳು ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here