ಗ್ರಾಮೀಣ ಭಾಗದಲ್ಲಿ ಹೋಮ್ ಐಸೋಲೇಷನ್ ನಿಂದ ಕೋವಿಡ್ ನಿಯಂತ್ರಣಕ್ಕೆ ಬರದ್ ಕಷ್ಟ ಐತೆ . , ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ, ಬನ್ನಿ ಚಿಕಿತ್ಸೆ ಪಡೆದುಕೊಳ್ಳಿ – ಕೆ‌ಎಂ.ಶಿವಲಂಗೇಗೌಡ (ಅರಸೀಕೆರೆ ಶಾಸಕ )

0

ಅರಸೀಕೆರೆ ತಾಲ್ಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದ್ದು, ಕೋವಿಡ್ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಇರದೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮನವಿ ಮಾಡಿದರು.
ಇಂದು ತಾಲ್ಲೂಕಿನಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ ಗಳಿಗೆ ತಾಲ್ಲೂಕು ಡಂಡಾಧಿಕಾರಿ ಸಂತೋಷ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾರಯಣಪ್ಪ, , ಪಿ.ಡಿ.ಓ ಮನೋಹರ ಇವರುಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದರು. ಅರಸೀಕೆರೆ ತಾಲ್ಲೂಕಿನ 4 ಕಡೆ ವಿವಿಧ ವಸತಿ ಶಾಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು
ಕೋವಿಡ್ ಸೋಂಕು ಪ್ರಾರಂಭವಾದಾಗಿನಿಂದಲೂ ಶಾಸಕನಾದ ನಾನು ಹೋಮ್ ಐಸೋಲೇಷನ್ ವಿರೋದಿಸಿಕೊಂಡು ಬಂದಿದ್ದರು, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡುವಂತೆ ಅನೇಕ ಸಭೆಗಳಲ್ಲಿ ಮಂತ್ರಿಗಳನ್ನು ಒತ್ತಾಯಿಸಿದ್ದರೂ ಆದರೂ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ..ಗ್ರಾಮೀಣ ಭಾಗದಲ್ಲಿ ಹೋಮ್ ಐಸೋಲೇಷನ್ ನಿಂದ ಕೋವಿಡ್ ನಿಯಂತ್ರಣಕ್ಕೆ ಬರಲಿಲ್ಲ..ಇದನ್ನ ಅರಿತ ಸರ್ಕಾರ ಈಗ ಹೋಮ್ ಐಸೋಲೇಷನ್ ಕೈಬಿಟ್ಟು ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಅನುಮತಿ ನೀಡಿದೆ ನನ್ನ ಹೋರಾಟ ಸಫಲವಾಗಿದೆ ಎಂದು ಹೇಳಿದರು.
ಅಲ್ಲದೆ ಕೋವಿಡ್ ಸೋಂಕಿತರು ಇನ್ನು ಮುಂದೆ ಹೋಮ್ ಐಸೋಲೇಷನ್ ಗೆ ಮುಂದಾಗದೆ ಕೇರ್ ಸೆಂಟರ್ ಗೆ ಬರುವಂತೆ ಮನವಿ ಮಾಡಿದರು. ಇಲ್ಲಿ ಸೂಕ್ತವಾದ ಉಚಿತ ವಸತಿ, ಶುಚಿ ರುಚಿಯಾದ ಊಟ, ಕೋವಿಡ್ ಗೆ ಚಿಕಿತ್ಸೆ ಎಲ್ಲಾ ದೊರೆಯಲಿದೆ. ತಹಶಿಲ್ದಾರ್ ಹಾಗೂ ತಾಲ್ಲೂಕು ಅಧಿಕಾರಿಗಳು ಇದನ್ನು ಸಮರ್ಪಕವಾಗಿ ನಡೆಸಲಿದ್ದಾರೆ ಎಂದರು.

LEAVE A REPLY

Please enter your comment!
Please enter your name here