ಹಾಸನ: ತಾಲೂಕು ವ್ಯಾಪ್ತಿಯ 9 ಪರೀಕ್ಷಾ ಕೇಂದ್ರಗಳಲ್ಲಿ ಜೂ.16 ಮತ್ತು 17ರಂದು 2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆ ತರಗತಿಗಳಿಗೆ ಎರಡು ದಿನದ ರಜೆ ಘೋಷಿಸಲು ಶಾಲೆಯ ಮುಖ್ಯೋ ಪಾಧ್ಯಾಯರಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶಿಸಿದ್ದಾರೆ.
ಪರೀಕ್ಷಾ ಕೇಂದ್ರಗಳು: ಹಾಸನದ ಆರ್.ಸಿ.ರಸ್ತೆಯಲ್ಲಿರುವ ಬಾಲಕಿಯರ ಸರಕಾರಿ ವಿಭಜಿತ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರಕಾರಿ ಪ್ರಧಾನ ಪದವಿ ಪೂರ್ವ ಕಾಲೇಜು ಹಾಗೂ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಹೊಸ ಬಸ್ ನಿಲ್ದಾಣ ಹತ್ತಿರವಿರುವ ಎಂ.ಕೃಷ್ಣಪದವಿ ಪೂರ್ವ ಕಾಲೇಜು,
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಸಾಲಗಾಮೆ ರಸ್ತೆಯಲ್ಲಿರುವ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜು, ಹೊಸ ಲೈನ್ ರಸ್ತೆಯಲ್ಲಿರುವ ಎಸ್.ಪಿ.ಎಂ. ಪದವಿ ಪೂರ್ವ ಕಾಲೇಜು, ರವೀಂದ್ರ ನಗರದ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜು ಹಾಗೂ ವಾಣಿ ವಿಲಾಸ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ.